ನವದೆಹಲಿ: . ಗುಜರಾತ್ ಮತ್ತು ಹಿಮಾಚಲ್ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿಗೆ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿರುವ ರಮ್ಯಾ, ಬಿಜೆಪಿಗೆ ಧನ್ಯವಾದಗಳು,ನಾವಿನ್ನು ಇಲ್ಲಿಗೆ ಕೈಬಿಟ್ಟಿಲ್ಲ ಎಂದು ಎರಡು ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶಕ್ಕೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
Congratulations @BJP4India! We aren’t giving up just yet-
— Divya Spandana/Ramya (@divyaspandana) December 18, 2017
The Congress Party extends a huge thank you to the people of Himachal Pradesh & Gujarat for having faith in us and giving us their vote. Our congratulations to the Bharatiya Janta Party. However we aren't taking off our gloves just yet; see you on the campaign trail in 2018!
— Congress (@INCIndia) December 18, 2017
ಈ ಹಿಂದೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಾಸಭಾ ಸದಸ್ಯೆಯಾಗಿದ್ದ ರಮ್ಯಾ 2014 ರಲ್ಲಿ ಕೇವಲ 5000 ಮತಗಳ ಅಂತರದಿಂದ ಚುನಾವಣೆಯಲ್ಲಿ ಪರಾಜಯಗೊಂಡಿದ್ದರು. ನಂತರದ ದಿನಗಳಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡ ರಮ್ಯಾ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೇಸ್ ನ ಸೋಶಿಯಲ್ ಮೀಡಿಯಾದ ಉಸ್ತುವಾರಿಯನ್ನು ವಹಿಸಿಕೊಂಡಿದ್ದಲ್ಲದೆ ಗುಜರಾತ್ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿಗೆ ಪ್ರತ್ಯುತ್ತರ ನೀಡುವ ಪರಿ ಎಲ್ಲರ ಮೆಚ್ಚುಗೆಗಳಿಸಿತ್ತು .ಇಂದು ಕಾಂಗ್ರೆಸ್ಸ್ ಮತ್ತು ರಾಹುಲ್ ಗಾಂಧಿಯವರ ಇಮೇಜ್ ನ್ನು ಸಕಾರಾತ್ಮಕವಾಗಿ ಸೋಶಿಯಲ್ ಮಿಡಿಯಾದಲ್ಲಿ ಬಿಂಬಿಸುವಲ್ಲಿ ರಮ್ಯಾ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.