ರಾಜ್ಯದಲ್ಲಿ ನೀರಿನ ನಿರ್ವಹಣೆ ವ್ಯವಸ್ಥಿತವಾಗಿಲ್ಲ; ಡಿಸಿಎಂ ಗೋವಿಂದ ಎಂ ಕಾರಜೋಳ ಕಳವಳ

ಭೂಮಿಯ ಮೇಲ್ಭಾಗದಲ್ಲಿರುವ ನೀರು ಶುದ್ದವಾಗಿರುತ್ತದೆ.  ಕೊಳವೆ ಬಾವಿ ನೀರು ಪರಿಶುದ್ದವಾಗಿರುವುದಿಲ್ಲ.  ಜಲಾನಯನ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕು.

Last Updated : Feb 10, 2020, 01:29 PM IST
ರಾಜ್ಯದಲ್ಲಿ ನೀರಿನ ನಿರ್ವಹಣೆ ವ್ಯವಸ್ಥಿತವಾಗಿಲ್ಲ; ಡಿಸಿಎಂ ಗೋವಿಂದ ಎಂ ಕಾರಜೋಳ ಕಳವಳ  title=

ಬೆಂಗಳೂರು: ರಾಜ್ಯದಲ್ಲಿ 35 ಸಾವಿರ  ಕೆರೆಗಳಿದ್ದರೂ ಸುರಕ್ಷಿತವಾಗಿಲ್ಲ. ನೀರಿನ ನಿರ್ವಹಣೆ ಸರಿಯಾಗಿಲ್ಲದ ಕಾರಣ ಸಾರ್ವಜನಿರಿಗೆ ಸುಸ್ಥಿತ ಹಾಗೂ ಶುದ್ದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿಲ್ಲ  ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ವಿಷಾದ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿಂದು ಕಾನ್ಪೆಡರೇಷನ್ ಆಫ್ ವುವೆನ್ಸ್ ಚೇಂಬರ್ಸ್ ಆಫ್ ಕಾಮರ್ಸ್ ಆಯೋಜಿಸಿದ್ದ ರಾಷ್ಟ್ರೀಯ ಸುರಕ್ಷಿತ ನೀರು ಮತ್ತು ನೈರ್ಮಲ್ಯ ಸಮ್ಮೇಳನದ ಕರ್ಟನ್ ರೇಜರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ ಎಂ . ವಿಶ್ವೇಶ್ವರಯ್ಯ ಅವರ ತವರೂರಾದ ಕೋಲಾರ ಜಿಲ್ಲೆಯಲ್ಲಿ ಅತೀ ಹೆಚ್ಚು 2500 ಕೆರೆಗಳಿವೆ. ಕೆರೆಯ ಕ್ಯಾಚ್ ಮೆಂಟ್ ಪ್ರದೇಶವನ್ನು ಒತ್ತುವರಿಯಾಗಿದೆ. ಕೆರೆ ನಾಶವಾಗುತ್ತಿವೆ. ಹೂಳು  ತುಂಬಿದೆ ಎಂದರು.

ಭೂಮಿಯ ಮೇಲ್ಭಾಗದಲ್ಲಿರುವ ನೀರು ಶುದ್ದವಾಗಿರುತ್ತದೆ.  ಕೊಳವೆ ಬಾವಿ ನೀರು ಪರಿಶುದ್ದವಾಗಿರುವುದಿಲ್ಲ.  ಜಲಾನಯನ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕು. ಭೂಮಿಯಲ್ಲಿ ಕಲ್ಮಶಗಳನ್ನು ಹೊರಹಾಕುವಂತೆ ನಿರ್ಮಿಸಬೇಕು. ಹಳ್ಳಗಳನ್ನು ಸ್ವಚ್ಚಗೊಳಿಸಬೇಕು.  ಅರಣ್ಯ, ಕೃಷಿ, ತೋಟಗಾರಿಕೆ ಇಲಾಖೆಗಳು ಜಲಾನಯನ ಅಭಿವೃದ್ಧಿ ಕಾಮಗಾರಿಗಳನ್ನು ಒಂದೇ ಕಡೆ  ಕೈಗೊಳ್ಳುತ್ತಿವೆ. ಪೂರ್ವಜರು ಅದರಲ್ಲೂ ಬುದ್ದಿವಂತರು ಕೃಷಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಡಿಸಿಎಂ ಹೇಳಿದರು.

ಪ್ರತಿ ಜಿಲ್ಲೆಗೊಂದು ಮಾದರಿ ಗ್ರಾಮವನ್ನು ಆಯ್ಕೆ ಮಾಡಿ ಮಳೆ ನೀರಿ ಕೊಯ್ಲು ಅಳವಡಿಕೆ  ಮತ್ತು ಬಯಲು ಬಹಿರ್ದೆಷೆ ಮುಕ್ತ ಮಾಡುವಂತೆ ಜನಜಾಗೃತಿ ಮೂಡಿಸಬೇಕು. ಇದಕ್ಕೆ ಸರ್ಕಾರ ಸಹಭಾಗಿತ್ವ ವಾಗಲಿದೆ. ಇಸ್ರೇಲ್ ನಲ್ಲಿ ಕೇವಲ 50 ಎಂ ಎಂ ಮಳೆಯಾದರೂ ನೀರನ್ನು ಸದ್ಬಳಕೆ ಮಾಡಿಕೊಂಡು ತರಕಾರಿಯನ್ನು ವಿವಿಧ ದಾಎಶಗಳಿಗೆ ರಪ್ತು ಮಾಡುತ್ತಿದೆ. ಇಸ್ರೇಲ್ ನಲ್ಲಿ‌  ಜನಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ   ಹೊರದೇಶಗಳ ನಾಗರಿಕರು  ಕೃಷಿ ಕೂಲಿಗಾಗಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ರಾಜ್ಯದಲ್ಲಿ 900ಎಂ ಎಂ ಮಳೆಯಾಗುವ ಪ್ರದೇಶದಲ್ಲೂ ಬರ ಪರಿಸ್ಥಿತಿ ಉದ್ಭವವಾಗುತ್ತದೆ. ಮನೆ ಮನೆಗೆ ನಳ  ನೀರು ಪೂರೈಕೆ ಮಾಡಬೇಕು. ಮೀಟರ್ ಅಳವಡಿಸಿದಾಗ ಮಾತ್ರ ನೀರಿನ್ನು ಮಿತವಾಗಿ ಬಳಸುತ್ತಾರೆ. ತಮ್ಮ ಕ್ಷೇತ್ರ ಮುಧೋಳ ವ್ಯಾಪ್ತಿಯ ಹಲಗಲಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ವಿದ್ದಾಗ ಪ್ರತಿ ಮನೆಗೆ ಮೀಟರ್ ಅಳವಡಿಸಿ ನೀರು ಪೂರೈಕೆ ಮಾಡಿದಾಗ ಮೂರನೇ ಒಂದರಷ್ಟು ನೀರು ಉಳಿತಾಯವಾಗಿದೆ ಎಂದು ಉಲ್ಲೇಖಿಸಿದ ಅವರು, ಕೇಂದ್ರ ಸರ್ಕಾರವು 3.68 ಲಕ್ಷ ಕೋಟಿ ರೂ ಅನ್ನು ನೀರಾವರಿ ಮತ್ತು ಕುಡಿಯುವ ನೀರು ಪೂರೈಕೆಗಾಗಿ ಬಜೆಟ್ ನಲ್ಲಿ  ಮೀಸಲಿಟ್ಟಿದ್ದು, ರಾಜ್ಯದ ಯೋಜನೆಗಳಿಗೆ ಶೇ.50ರಷ್ಟು ಅನುದಾನ ನೀಡಲಿದೆ‌. ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ 48 ಲಕ್ಷ ಶೌಚಾಲಯಗಳನ್ನು ನಿರ್ಮಿಸಿದರೂ ಜನತೆ ಅವುಗಳನ್ನು ಪೂರ್ಣಪ್ರಮಾಣದಲ್ಲಿ  ಬಳಸುತ್ತಿಲ್ಲ. ಸ್ಥಳೀಯ ಜನಪ್ರತಿಗಳ ಸಹಭಾಗಿತ್ವದೊಂದಿಗೆ  ಸಾರ್ವಜನರಿಗೆ ಜಾಗೃತಿ ಮೂಡಿಸಬೇಕು. ಶುದ್ದ ಕುಡಿಯುವ ನೀರು ಮತ್ತು ನೈರ್ಮಲ್ಯದಿಂದ ಆರೋಗ್ಯ ಸುರಕ್ಷಿತವಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ವಸತಿ ಸಚಿವರಾದ ವಿ.ಸೋಮಣ್ಣ , ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜು ಪರವೇಜ್, ಸಂಸ್ಥೆಯ ಅಧ್ಯಕ್ಷರಾದ  ಶ್ರೀಮತಿ ಐಶ್ವರ್ಯ ನಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.

Trending News