ಕಚೇರಿಗಳಲ್ಲೂ ನೀರಿನ ಬಿಕ್ಕಟ್ಟು : ವರ್ಕ್ ಫ್ರಂ ಹೋಮ್ ಬೇಡಿಕೆಯಿಟ್ಟಿರುವ ನೌಕರರು

Water crisis :  ನೀರಿನ ಸಮಸ್ಯೆ  ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ತೀವ್ರ ನೀರಿನ ಸಮಸ್ಯೆಗೆ ಪರಿಹಾರ ಕ್ರಮವಾಗಿ ಐಟಿ ಕಂಪನಿಗಳು ಮನೆಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಬೇಡಿಕೆ ಇಟ್ಟಿದ್ದು, ಇದು ಐಟಿ ಸಂಸ್ಥೆಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

Written by - Zee Kannada News Desk | Last Updated : Mar 12, 2024, 10:27 AM IST
  • ನೀರಿನ ಸಮಸ್ಯೆಗೆ ಪರಿಹಾರ ಕ್ರಮವಾಗಿ ಐಟಿ ಕಂಪನಿಗಳು ಮನೆಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಬೇಡಿಕೆ ಇಟ್ಟಿದ್ದು, ಇದು ಐಟಿ ಸಂಸ್ಥೆಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
  • ಮತ್ತೊಂದೆಡೆ ಸಮರ್ಪಕವಾಗಿ ಕಾವೇರಿ ನೀರಿನ ಪೂರೈಕೆಯಾಗದೆ ನೀರಿನ ಕೊರತೆಯ ಬಿಸಿ ಎಲ್ಲ ಕಚೇರಿ, ಅಪಾರ್ಟ್‌ಮೆಂಟ್‌ಗಳನ್ನು ಬಾಧಿಸುತ್ತಿದೆ
  • ಇದರಿಂದ ನಗರದ ಕಚೇರಿಗಳಲ್ಲಿನ ನೀರಿನ ಬೇಡಿಕೆ ಕಡಿಮೆಯಾಗುತ್ತದೆ' ಎಂದು ಪರಿಸರ, ನೀರಿನ ಸಂರಕ್ಷಣೆಯಲ್ಲಿ ತೊಡಗಿರುವ ಸಾಮಾಜಿಕ ಕಾರ್ಯಕರ್ತ ಸಂದೀಪ್ ಅನಿರುದ್ದನ್ ಅಭಿಪ್ರಾಯಪಟ್ಟಿದ್ದಾರೆ.
ಕಚೇರಿಗಳಲ್ಲೂ ನೀರಿನ ಬಿಕ್ಕಟ್ಟು : ವರ್ಕ್ ಫ್ರಂ ಹೋಮ್ ಬೇಡಿಕೆಯಿಟ್ಟಿರುವ ನೌಕರರು title=

ಈಗಾಗಲೇ ಕಚೇರಿ, ಅಪಾರ್ಟ್‌ಮೆಂಟ್‌, ಮೆನಗಳಲ್ಲಿನ ನೂರಾರು ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಹೀಗಾಗಿ, ಬೇಸಿಗೆ ಆರಂಭದಲ್ಲೇ ಕಾವೇರಿ ನೀರು ಮತ್ತು ಟ್ಯಾಂಕರ್‌ ನೀರಿನ ಮೇಲೆ ಅವಲಂಬನೆ ಹೆಚ್ಚಾಗಿದೆ. ಮತ್ತೊಂದೆಡೆ ಸಮರ್ಪಕವಾಗಿ ಕಾವೇರಿ ನೀರಿನ ಪೂರೈಕೆಯಾಗದೆ ನೀರಿನ ಕೊರತೆಯ ಬಿಸಿ ಎಲ್ಲ ಕಚೇರಿ, ಅಪಾರ್ಟ್‌ಮೆಂಟ್‌ಗಳನ್ನು ಬಾಧಿಸುತ್ತಿದೆ.ಈ ಕಾರಣದಿಂದ ರಿವೋಟ್ ಆಗಿ ಕೆಲಸ ಮಾಡಲು ಅವಕಾಶ ಇರುವ ಐಟಿ ಉದ್ಯೋಗಿಗಳು ಸ್ವಂತ ಊರುಗಳಲ್ಲಿ, ಮನೆಯಿಂದ ಕೆಲಸ ಮಾಡುವುದರಿಂದ ವಾಣಿಜ್ಯ ಬಳಕೆ ನೀರಿನ ಬೇಡಿಕೆ ಕಡಿಮೆಯಾಗಿ ತಕ್ಕಮಟ್ಟಿಗೆ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಬಹುದು ಎಂದು ತಿಳಿಸಿದ್ದಾರೆ. 

ಹೀಗಿರುವಾಗ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದರೆ ನೀರಿನ ಸಮಸ್ಯೆ ಸುಧಾರಿಸುವವರೆಗೂ ಎಲ್ಲರಿಗೂ ಅನುಕೂಲವಾಗುವುದು ಎಂದು ಉದ್ಯೋಗಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನು ಓದಿ : PM Kisan: ಈ ರೈತರಿಗೆ ಸಿಗಲ್ಲ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಲಾಭ

ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ಐಟಿ ಉದ್ಯೋಗಿಗಳಿಗೆ ನೀರಿನ ಸಮಸ್ಯೆ ನಿಯಂತ್ರಣಕ್ಕೆ ಬರುವವರೆಗೆ ಮನೆಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ಇದರಿಂದ ನಗರದ ಕಚೇರಿಗಳಲ್ಲಿನ ನೀರಿನ ಬೇಡಿಕೆ ಕಡಿಮೆಯಾಗುತ್ತದೆ' ಎಂದು ಪರಿಸರ, ನೀರಿನ ಸಂರಕ್ಷಣೆಯಲ್ಲಿ ತೊಡಗಿರುವ ಸಾಮಾಜಿಕ ಕಾರ್ಯಕರ್ತ ಸಂದೀಪ್ ಅನಿರುದ್ದನ್ ಅಭಿಪ್ರಾಯಪಟ್ಟಿದ್ದಾರೆ.

ಟ್ಯಾಂಕರ್ ನೀರಿನ ಬೆಲೆಯನ್ನು ಸರ್ಕಾರ ನಿಯಂತ್ರಿಸುತ್ತಿದ್ದರೂ, ಅತಿಯಾದ ಅವಲಂಬನೆ ಯಾವಾಗ ಕೈಕೊಡುತ್ತದೆಯೋ ಎಂಬ ಭೀತಿ ಕಾಡುತ್ತಿರುವ ಕಾರಣ ಐಟಿ ಕಂಪನಿಗಳು ಮನೆಯಿಂದ ಕೆಲಸ ಮಾಡುವ ಅವಕಾಶ ನೀಡಬೇಕು ಎಂಬ ಕೋರಿಕೆ ಐಟಿ ವಲಯದಿಂದ ಕೇಳಿ ಬಂದಿದೆ. ಹೊರ ರಾಜ್ಯಗಳ ಉದ್ಯೋಗಿಗಳಿಗೆ ಮಳೆಗಾಲ ಆರಂಭವಾಗುವವರೆಗೆ ಮನೆಯಿಂದ ಕೆಲಸ ಮಾಡುವ ಅವಕಾಶ ನೀಡಬಹುದು. ಸರ್ಕಾರವೇ ಈ ಕುರಿತು ಸೂಚನೆ ನೀಡಬಹುದು ಎಂದು ಜಾಲತಾಣದ ಎಕ್ಸ್ನಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಮನೆಯಿಂದ ಕೆಲಸ ಮಾಡಿದರೆ ಅನುಕೂಲ ಕಚೇರಿಗಳಿಗೆ ಹೋಲಿಸಿದರೆ ಮನೆಯಲ್ಲಿನ ನೀರಿನ ಬಳಕೆ ಮಿತವಾಗಿರುತ್ತದೆ. ಆದರೆ ಮನೆಯಲ್ಲಿಯೂ ನೀರಿನ ಸಮಸ್ಯೆ ಇದ್ದರೆ ಏನು ಮಾಡುವುದು? ನಮ್ಮ ಅಪಾರ್ಟ್‌ಮೆಂಟ್‌ಗೆ ಕಳೆದ ಮೂರು ದಿನಗಳಿಂದ ಕಾವೇರಿ ನೀರು ಬಂದಿಲ್ಲ. ಇರುವ ಎರಡು ಬೋರ್‌ವೆಲ್‌ಗಳ ಪೂಕಿ ಒಂದರಲ್ಲಿ ನೀರು ಬರುತ್ತಿಲ್ಲ. ಹೀಗಾಗಿ ಮನೆಯಿಂದ ಕೆಲಸ ಮಾಡುವುದರಿಂದ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದದೆ ಎನಿಸುವುದಿಲ್ಲ. ಆದರೆ ಉದ್ಯೋಗಿಗಳು ನೀರಿನ ಸಮಸ್ಯೆ ಇಲ್ಲದ ಊರುಗಳಿಂದ ಕೆಲಸ ಮಾಡುವುದಾದರೆ ಅನುಕೂಲ ಆಗಬಹುದು' ಎಂದು ಸ್ಟಾರ್ಟ್‌ಅಪ್ ಕಂಪನಿ ನಡೆಸುತ್ತಿರುವ ಚಂದ್ರಕಾಂತ್ ಅಭಿಪ್ರಾಯಪಟ್ಟರು. 

ಇದನ್ನು ಓದಿ : ಭಾರತದ ಸ್ಟಾರ್ ಕ್ರಿಕೆಟಿಗ ಎಂ.ಎಸ್. ಧೋನಿ ಅಕ್ಕ ಯಾರು ಗೊತ್ತಾ? ಪ್ರತಿ ಹಂತದಲ್ಲೂ ಮಾಹಿಗೆ ಸಪೋರ್ಟ್‌ ಮಾಡಿದ ಚೆಲುವೆ ಈಕೆ!

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ವಿನೋದ್‌ ರಾಜ್‌ ಎಂಬುವವರು,' ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಾಪಸ್‌ ಕಚೇರಿಗೆ ಎಳೆದು ತರಲು ಒಂದು ವರ್ಷ ಬೇಕಾಯಿತು. ಆದರೆ ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿಂದ ಮತ್ತೆ ಮನೆಯಿಂದ ಕೆಲಸಕ್ಕೆ ಅವಕಾಶ ಕಲ್ಪಿಸುವ ಪರಿಸ್ಥಿತಿ ಎದುರಾಗಿದೆ; ಎಂದು ಮಾರ್ಮಿಕವಾಗಿ ಬರೆದು ಪೋಸ್ಟ್‌ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News