ಶೀಘ್ರವೇ ತ್ಯಾಜ್ಯದಿಂದ ವಿದ್ಯುತ್ ತಯಾರಕಾ ಘಟಕ ಸ್ಥಾಪನೆ- ಡಾ.ಜಿ. ಪರಮೇಶ್ವರ್

ಹೊಸದಾಗಿ ಪ್ಲಾಂಟ್‌ ನಿರ್ಮಾಣ ಹೆಚ್ಚು‌ ಸಮಯ ಹಿಡಿಯುವುದಲ್ಲದೇ, ಇದರ ನಿರ್ವಹಣದ ಗುಣಮಟ್ಟ ತಿಳಿಯಲು ಸಮಯ ಬೇಕಾಗಲಿದೆ.

Last Updated : Nov 13, 2018, 02:49 PM IST
ಶೀಘ್ರವೇ ತ್ಯಾಜ್ಯದಿಂದ ವಿದ್ಯುತ್ ತಯಾರಕಾ ಘಟಕ  ಸ್ಥಾಪನೆ- ಡಾ.ಜಿ. ಪರಮೇಶ್ವರ್ title=

ಬೆಂಗಳೂರು: ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಸಂಬಂಧ ಸತಾರಾಂ ಕಂಪನಿಗೆ ಈಗಿರುವ ಕನ್ನಳ್ಳಿ- ಸೀಗೆಹಳ್ಳಿಯಲ್ಲಿ ಪ್ರಾಯೋಗಿಕವಾಗಿ ನಡೆಸಲು ಹಾಗೂ ನೆಲಮಂಗಲದಲ್ಲಿ ಹೊಸದಾಗಿ ವಿದ್ಯುತ್ ತಯಾರಕಾ ಘಟಕ ನಿರ್ಮಿಸಲು ಅವಕಾಶ ನೀಡುವ ಸಂಬಂಧ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಚರ್ಚಿಸಿದರು.

ಬಿಬಿಎಂಪಿ ಹಿರಿಯ ಅಧಿಕಾರಿಗಳು ಹಾಗೂ ಸತಾರಾಂ ಕಂಪನಿ ಮುಖ್ಯಸ್ಥರೊಂದಿಗೆ ಅವರು ಮಂಗಳವಾರ ಸಭೆ ನಡೆಸಿದರು. ಸತಾರಾಂ ಈಗಾಗಲೇ ಚೆನ್ನೈ, ಯೂರೋಪ್, ಬ್ರೆಸಿಲ್‌ ಸೇರಿದಂತೆ 14 ನಲ್ಲಿ ವೇಸ್ಟ್‌ ಟು ಎನರ್ಜಿ ಪ್ಲಾಂಟ್‌ ನಡೆಸುತ್ತಿದೆ. ಇದೇ ಮಾದರಿಯಲ್ಲಿ ನೆಲಮಂಗಲದಲ್ಲಿ ಪ್ಲಾಂಟ್ ತೆರೆಯುವ ಸಂಬಂಧ ಪ್ರಾತ್ಯಕ್ಷಿಕೆ ವೀಕ್ಷಿಸಿದ ಪರಮೇಶ್ವರ್ ಆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. 

ಹೊಸದಾಗಿ ಪ್ಲಾಂಟ್‌ ನಿರ್ಮಾಣ ಹೆಚ್ಚು‌ ಸಮಯ ಹಿಡಿಯುವುದಲ್ಲದೇ, ಇದರ ನಿರ್ವಹಣದ ಗುಣಮಟ್ಟ ತಿಳಿಯಲು ಸಮಯ ಬೇಕಾಗಲಿದೆ. ಹೀಗಾಗಿ ಈಗಿರುವ ಸೀಗೆಹಳ್ಳಿ ಹಾಗೂ ಕಲ್ಲಳ್ಳಿ ಪ್ಲಾಂಟ್‌ನಲ್ಲಿಯೇ ಪ್ರಾಯೋಗಿಕವಾಗಿ ಕೆಲಸ ಪ್ರಾರಂಭಿಸುವುದು ಸೂಕ್ತ ಎಂಬ ಅಭಿಪ್ರಾಯ ಹೊರಹಾಕಿದರು. 

ಒಟ್ಟಾರೆ ಇನ್ನು ಕೆಲವೇ ದಿನಗಳಲ್ಲಿ 'ವೇಸ್ಟ್‌ ಟು ಎನರ್ಜಿ ಪ್ಲಾಂಟ್‌' ನಿರ್ಮಾಣ ಮಾಡುವ ಸಂಬಂಧ ಕ್ಯಾಬಿನೆಟ್‌ನಲ್ಲಿಯು ಶೀಘ್ರವೇ ಒಪ್ಪಿಗೆ ಪಡೆದು ಕನಿಷ್ಠ ಒಂದು ಪ್ಲಾಂಟ್ ನಿರ್ಮಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದರು.

Trending News