Viral Video: ಕಾಡಿನಲ್ಲಿ 3 ನಾಗರ ಹಾವುಗಳೊಂದಿಗೆ ಯುವಕನ ಹುಚ್ಚಾಟ!

Viral Video: ಶಿರಸಿಯ ಯುವಕನೊಬ್ಬ ಮೂರು ನಾಗರ ಹಾವುಗಳ ಜೊತೆ ಹುಚ್ಚಾಟ ಆಡಿದ ವಿಡಿಯೋ ವೈರಲ್ ಆಗಿದೆ. 

Written by - Zee Kannada News Desk | Last Updated : Mar 17, 2022, 05:29 PM IST
  • ಕಾಡಿನಲ್ಲಿ 3 ನಾಗರ ಹಾವುಗಳೊಂದಿಗೆ ಯುವಕನ ಹುಚ್ಚಾಟ
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ
  • ಅರಣ್ಯಾಧಿಕಾರಿ ಸುಶಾಂತ ನಂದಾ ಅವರು ಹಂಚಿಕೊಂಡಿರುವ ವಿಡಿಯೋ
Viral Video: ಕಾಡಿನಲ್ಲಿ 3 ನಾಗರ ಹಾವುಗಳೊಂದಿಗೆ ಯುವಕನ ಹುಚ್ಚಾಟ!  title=
ವಿಡಿಯೋ ವೈರಲ್

ಹಾವು ಎಂದಾಕ್ಷಣ ಮನಸ್ಸಿಗೆ ಬರುವ ಮೊದಲ ಮಾತು ಭಯ! ವ್ಯಕ್ತಿಯೊಬ್ಬ ಮೂರು ಹಾವುಗಳೊಂದಿಗೆ (Snake) ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹುಬ್ಬೇರಿಸುವಂತೆ ಮಾಡುತ್ತದೆ. 

 

 

ಅರಣ್ಯಾಧಿಕಾರಿ ಸುಶಾಂತ ನಂದಾ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಕರ್ನಾಟಕದ ಶಿರಸಿಯ ಯುವಕನೊಬ್ಬ ಮೂರು ನಾಗರ ಹಾವುಗಳ (Cobra) ಜತೆ ಹುಚ್ಚಾಟ ಆಡುವ ವಿಡಿಯೋ ವೈರಲ್ ಆಗಿದೆ. ಈ ವೇಳೆ ಒಂದು ಹಾವು ಅವನ ಮೇಲೆ ದಾಳಿ ಮಾಡಿದೆ.

ಇದನ್ನೂ ಓದಿ- ಆಮ್ ಆದ್ಮಿ ಪಕ್ಷದಿಂದ ರಾಜ್ಯಸಭೆಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮ ನಿರ್ದೇಶನ?

20 ವರ್ಷದ ಸೈಯದ್ ಕಾಡಿನಲ್ಲಿ ನಾಗರಹಾವುಗಳ ಮುಂದೆ ಕುಳಿತಿರುವುದನ್ನು ವಿಡಿಯೋದಲ್ಲಿ (Viral Video) ಕಾಣಬಹುದು. ಅವನು ಅವುಗಳ ಬಾಲವನ್ನು ಎಳೆಯುತ್ತಾನೆ. ಬಳಿಕ ಹಾವುಗಳ ಸುತ್ತ ಕೈಯನ್ನು ಸುತ್ತುತ್ತಿರುತ್ತಾನೆ. ಈ ವೇಳೆ ಹಾವೊಂದು ಹಠಾತ್ತನೆ ಆತನ ಮೇಲೆ ದಾಳಿ ಮಾಡಿದೆ.
 
ಇದನ್ನೂ ಓದಿ- Jaggesh Birthday:ಅಪ್ಪು ವಿಶ್​ ಮಾಡಿದ್ದ ವಿಡಿಯೋ ಮತ್ತೆ ವೈರಲ್.. ಭಾವುಕರಾದ ನಟ ಜಗ್ಗೇಶ್

ವರದಿಯ ಪ್ರಕಾರ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಚಿಕಿತ್ಸೆ ನೀಡಲಾಗುತ್ತಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News