ಬೆಂಗಳೂರು: ಸುಮಾರು 50,000 ರೂ.ಗಳ ಸಾಲ ಪಡೆದು ತೀರಿಸದ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿ ದೊಡೆದ 7 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಇಲ್ಲಿನ ಕೊಡಿಗೆಹಳ್ಳಿಯಲ್ಲಿ ಗುರುವಾರ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ವೈರಲ್ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಈ ವೀಡಿಯೋದಲ್ಲಿ ಮಹಿಳೆಯನ್ನು ಕಂಬಕ್ಕೆ ಕಟ್ಟಿಹಾಕಿ ಆಕೆಯ ಸುತ್ತ ಕೆಲ ಗಂಡಸರು ಸುತ್ತುವರೆದಿದ್ದು, "ಅವಳನ್ನು ಚಪ್ಪಲಿ, ಪೊರಕೆಯಿಂದ ಹೊಡೆಯಿರಿ" ಎಂದು ಹೇಳುತ್ತಿರುವುದು ಸ್ಪಷ್ಟವಾಗಿ ಕೇಳಿಬಂದಿದೆ.
#WATCH A woman was tied to a pole in Kodigehalli, Bengaluru, yesterday, allegedly for not repaying a loan she took. Police have arrested 7 people in connection with the incident. #Karnataka pic.twitter.com/jpwX3Cr0Gu
— ANI (@ANI) June 14, 2019
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೂಲದವರಾದ ರಾಜಮಣಿ(36) ಎಂಬುವರು ಸಣ್ಣ ಹೋಟೆಲ್ ಮತ್ತು ಚಿಟ್ ಫಂಡ್ ನಡೆಸುತ್ತಿದ್ದು, ಕೆಲವರಿಂದ 50,000 ರೂ. ಹಣ ಪಡೆದಿದ್ದರು ಎನ್ನಲಾಗಿದೆ. ಈಗ ಆ ಹಣವನ್ನು ಹಿಂತಿರುಗಿಸುವಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, 7 ಜನರನ್ನು ಬಂಧಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.