Road Accident: ಎರಡು ಲಾರಿಗಳ ನಡುವೆ ಪರಸ್ಪರ ಡಿಕ್ಕಿ, ಸ್ಥಳದಲ್ಲಿಯೇ ಧಗಧಗನೆ ಹೊತ್ತಿ ಉರಿದ ಲಾರಿಗಳು

Road Accident: ಓವರ್ ಟೇಕ್ ಮಾಡಲು ಹೋಗಿ ಅಪಘಾತ, ಓರ್ವ ಸಾವು, ಮತ್ತೊಬ್ಙನಿಗೆ ಗಾಯ 

Written by - Zee Kannada News Desk | Last Updated : Mar 25, 2022, 05:28 PM IST
  • ಚಿಕ್ಕಬಳ್ಳಾಪುರದಿಂದ ಎರಡು ಲಾರಿಗಳು ಬೆಂಗಳೂರಿನ ಕಡೆ ಬರುತ್ತಿದ್ದಾಗ ತಾಲ್ಲೂಕಿನ ಆವತಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳು ಅಪಘಾತಕ್ಕೀಡಾಗಿವೆ
  • ಎರಡೂ ಲಾರಿಗಳು ಆಂಧ್ರದಿಂದ ಸಿಮೆಂಟ್ ತುಂಬಿಕೊಂಡು ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ
  • ಎಡಬದಿಯಿಂದ ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಮುಂದೆ ಹೋಗುತಿದ್ದ ಲಾರಿಗೆ ಡಿಕ್ಕಿ
Road Accident: ಎರಡು ಲಾರಿಗಳ ನಡುವೆ ಪರಸ್ಪರ ಡಿಕ್ಕಿ, ಸ್ಥಳದಲ್ಲಿಯೇ ಧಗಧಗನೆ ಹೊತ್ತಿ ಉರಿದ ಲಾರಿಗಳು title=
Two lorries collide with each other, trucks burned

ಬೆಂಗಳೂರು: ಓವರ್ ಟೇಕ್ ಮಾಡಲು ಹೋಗಿ ಎರಡು ಲಾರಿಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎರಡೂ ಲಾರಿಗಳಿಗೆ ಬೆಂಕಿ ಹೊತ್ತಿಕೊಂಡು ಒಬ್ಬ ಚಾಲಕ ಲಾರಿಯಲ್ಲಿ ಬೆಂಕಿಗೆ ಸಿಲುಕಿ ಸುಟ್ಟು ಕರಕಲಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ ಆವತಿಯ ಭುಕ್ತಿ ಡಾಬಾ ಬಳಿ ಸಂಭವಿಸಿದೆ..

ಬಾಗೇಪಲ್ಲಿಯ ಗೊರ್ತಪಲ್ಲಿಯ ನಿವಾಸಿ ವಸಂತ ಕುಮಾರ್ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಇನ್ನು ಇನ್ನೊಂದು ಲಾರಿ ಚಾಲಕ ವೇಲು ಆಶ್ಚರ್ಯಕರ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ- MukaMaramma Konda: ಮಂಡ್ಯದಲ್ಲಿ ಕೊಂಡ ದುರಂತ ಪ್ರಕರಣ, ಕೊಂಡಕ್ಕೆ ಬಿದ್ದ ಪೂಜಾರಿಗೆ ಗಂಭೀರ ಗಾಯ

ರಾತ್ರಿ ಸುಮಾರು 10 ರಿಂದ 10.30ರಲ್ಲಿ ಚಿಕ್ಕಬಳ್ಳಾಪುರದಿಂದ ಎರಡು ಲಾರಿಗಳು ಬೆಂಗಳೂರಿನ ಕಡೆ ಬರುತ್ತಿದ್ದಾಗ ತಾಲ್ಲೂಕಿನ ಆವತಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಲಾರಿಗಳು ಅಪಘಾತಕ್ಕೀಡಾಗಿವೆ. ಎರಡೂ ಲಾರಿಗಳು ಆಂಧ್ರದಿಂದ ಸಿಮೆಂಟ್ ತುಂಬಿಕೊಂಡು ಬರುತ್ತಿದ್ದಾಗ ಆವತಿ ಬಳಿಯ ಭುಕ್ತಿ ಡಾಬಾ ಬಳಿ ಚಾಲಕ ವಸಂತ್ ಕುಮಾರ್‌ ಎಡಬದಿಯಿಂದ ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಮುಂದೆ ಹೋಗುತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. 

ಈ ವೇಳೆ ಲಾರಿಯು ರಸ್ತೆ ವಿಭಜಕವನ್ನು ದಾಟಿ ಪಲ್ಟಿ ಹೊಡೆದಿದೆ‌‌. ಈ ಸಂದರ್ಭದಲ್ಲಿ ಲಾರಿಯ ಚಾಲಕ ವೇಲು ಲಾರಿಯಿಂದ ಕೆಳಗೆ ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಹಿಂಬದಿಯಿಂದ ಡಿಕ್ಕಿ ಹೊಡೆದ ಲಾರಿ ನಿಯಂತ್ರಣಕ್ಕೆ ಸಿಗದೇ ಮುಂಬದಿ ಬಾನೆಟ್‌ ಪೂರ್ಣವಾಗಿ ಜಖಗೊಂಡು ರಸ್ತೆ ವಿಭಜಕದ ಮೇಲೆ ನಿಂತಿದೆ. ಇದೇ ವೇಳೆ ಎರಡು ಲಾರಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಹಿಂಬದಿ ಲಾರಿಯಲ್ಲಿದ್ದ ಚಾಲಕ ವಸಂತ್ ಕುಮಾರ್ ಹೊರ ಬರಲಾರದೆ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ಚಿತ್ರದುರ್ಗ : ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ

ಇನ್ನು ಸ್ಥಳಕ್ಕಾಗಮಿಸಿದ ವಿಜಯಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳವು ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News