ಹೊಸ ಪಿಂಚಣಿ ವ್ಯವಸ್ಥೆ ರದ್ದತಿ ಹೋರಾಟಕ್ಕೆ ಸರ್ಕಾರಿ ನೌಕರರ ಸಂಘ ರೆಡಿ!

16 ವರ್ಷದಿಂದ ಎನ್​ಪಿಎಸ್​ ಜಾರಿಯಲ್ಲಿದೆ. ಆದರೆ ಈಗ ಷೇರು ಮಾರುಕಟ್ಟೆಯ ಪ್ರತಿಕೂಲ ಸನ್ನಿವೇಶದಿಂದ ಪರಿಸ್ಥಿತಿ ಬದಲಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಲಾಗಿದೆ ಎಂದ ಷಡಾಕ್ಷರಿ, ವೇತನ ಆಯೋಗದಿಂದ 8 ಲಕ್ಷ ನೌಕರರು, 4.5 ಲಕ್ಷ ನಿವೃತ್ತ ನೌಕರರು ಸೇರಿ 12 ಲಕ್ಷ ಮಂದಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.

Written by - Zee Kannada News Desk | Last Updated : Dec 24, 2022, 11:24 PM IST
  • ತಮ್ಮನ್ನು ಕೆಲವರು ಈ ವಿಚಾರದಲ್ಲಿ ಟೀಕಿಸಿದ್ದಾರೆ. ಸರ್ಕಾರದ ಏಜೆಂಟ್​ ಅಂತಾ ದೂರಿದ್ಧಾರೆ
  • ಆದರೆ, ಸದ್ಯ ಏಳನೇ ವೇತನ ಆಯೋಗದ ಬಗ್ಗೆ ಸಂಘ ಗಮನ ಹರಿಸಿದೆ
  • ಈ ನಿಟ್ಟಿನಲ್ಲಿ ಸರ್ಕಾರದ ಮುಂದಿಟ್ಟ ಬೇಡಿಕೆ ಅಸ್ತು ಆಗಿದ್ದು, ವೇತನ ಆಯೋಗ ಕೂಡ ರಚನೆಯಾಗಿದೆ
ಹೊಸ ಪಿಂಚಣಿ ವ್ಯವಸ್ಥೆ ರದ್ದತಿ ಹೋರಾಟಕ್ಕೆ ಸರ್ಕಾರಿ ನೌಕರರ ಸಂಘ ರೆಡಿ! title=

ಬೆಂಗಳೂರು: ರಾಜ್ಯದಲ್ಲಿ ಎನ್​ಪಿಎಸ್​  ಸರ್ಕಾರಿ ನೌಕರರು ಎನ್​ಪಿಎಸ್​ (New Pension Scheme) ನ್ನು ರದ್ದು ಮಾಡಬೇಕು ಎಂದು ಹೋರಾಟ ನಡೆಸ್ತಿದ್ದಾರೆ. ಈ ನಡುವೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್​ ಷಡಾಕ್ಷರಿಯವರ ಹೇಳಿಕೆ ಸಾಕಷ್ಟು ವೈರಲ್​ ಆಗಿತ್ತು. ಅಲ್ಲದೆ ಗೊಂದಲ ಮೂಡಿಸಿತ್ತು. ಸದ್ಯ  ಈ ನಿಟ್ಟಿನಲ್ಲಿ ಸಂಘ ಹೋರಾಟಕ್ಕೆ ಸಿದ್ಧವಿದೆ ಎಂದು ರಾಜ್ಯಾಧ್ಯಕ್ಷ ಸಿಎಸ್​ ಷಡಾಕ್ಷರಿ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಂಘ ಈ ನಿಟ್ಟಿನಲ್ಲಿ ನಿರ್ಣಾಯಕವಾದ ಹೋರಾಟ ನಡೆಸಲಿದೆ. ಮುಂದಿನ ಏಪ್ರಿಲ್​ ನಂತರ ಈ ಸಂಬಂಧ  ಹೋರಾಟ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : Basavaraja Bommai : ಫೆಬ್ರವರಿ ತಿಂಗಳಲ್ಲಿ ರಾಜ್ಯ ಸರ್ಕಾರದ ಬಜೆಟ್ : ಸಿಎಂ ಬೊಮ್ಮಾಯಿ

ತಮ್ಮನ್ನು ಕೆಲವರು ಈ ವಿಚಾರದಲ್ಲಿ ಟೀಕಿಸಿದ್ದಾರೆ. ಸರ್ಕಾರದ ಏಜೆಂಟ್​ ಅಂತಾ ದೂರಿದ್ಧಾರೆ. ಆದರೆ, ಸದ್ಯ ಏಳನೇ ವೇತನ ಆಯೋಗದ ಬಗ್ಗೆ ಸಂಘ ಗಮನ ಹರಿಸಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮುಂದಿಟ್ಟ ಬೇಡಿಕೆ ಅಸ್ತು ಆಗಿದ್ದು, ವೇತನ ಆಯೋಗ ಕೂಡ ರಚನೆಯಾಗಿದೆ. ಬರುವ ಮಾರ್ಚ್​ ಅಂತ್ಯಕ್ಕೆ ಆಯೋಗದ ವರದಿ ಸಲ್ಲಿಸಲಿದ್ದು, ಆ ನಂತರ ಎನ್​ಪಿಎಸ್​ ರದ್ಧತಿಗಾಗಿ ಹೋರಾಟ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.ನಮ್ಮದು ಎರಡು ಪ್ರಮುಖ ಬೇಡಿಕೆ, ಒಂದು ವೇತನ ಆಯೋಗ ರಚನೆ, ಇನ್ನೊಂದು ಎನ್​ಪಿಎಸ್​ ರದ್ದತಿ, ಸದ್ಯ ವೇತನ ಆಯೋಗ ಸಂಬಂಧ ಆದ್ಯತೆ ನೀಡಿದ್ದೇವೆ,

16 ವರ್ಷದಿಂದ ಎನ್​ಪಿಎಸ್​ ಜಾರಿಯಲ್ಲಿದೆ. ಆದರೆ ಈಗ ಷೇರು ಮಾರುಕಟ್ಟೆಯ ಪ್ರತಿಕೂಲ ಸನ್ನಿವೇಶದಿಂದ ಪರಿಸ್ಥಿತಿ ಬದಲಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಲಾಗಿದೆ ಎಂದ ಷಡಾಕ್ಷರಿ, ವೇತನ ಆಯೋಗದಿಂದ 8 ಲಕ್ಷ ನೌಕರರು, 4.5 ಲಕ್ಷ ನಿವೃತ್ತ ನೌಕರರು ಸೇರಿ 12 ಲಕ್ಷ ಮಂದಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.

ಇದನ್ನೂ ಓದಿ : ನಕಲಿ ಭೂ ದಾಖಲೆ ಸೃಷ್ಟಿಸಿ ವಂಚನೆಗೆ ಯತ್ನ: ಬಿಬಿಎಂಪಿ ಕಚೇರಿ ಸಿಬ್ಬಂದಿ ಸಹಿತ ಐವರ ಬಂಧನ!

ಇನ್ನೂ ಎನ್​ಪಿಎಸ್​ ರದ್ದತಿ ಮತ್ತು ವೇತನ ಆಯೋಗದ ವಿಚಾರದಲ್ಲಿ ಸರ್ಕಾರದ ಮೇಲೆ 40 ಸಾವಿರ ಕೋಟಿ ರೂಪಾಯಿ ಹೊರೆಯಾಗಲಿದೆ ಇದು ಸರ್ಕಾರ ಮಟ್ಟಿಗೂ ಕಷ್ಟವಾಗಲಿದೆ. ಹೀಗಾಗಿ ಮೂರುವರೆ ಲಕ್ಷ ನೌಕರರ ಸಮಸ್ಯೆಯನ್ನು ಏಪ್ರಿಲ್​ ನಂತರ ಕ್ರಮಬದ್ಧ ಹೋರಾಟದೊಂದಿಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News