ವರ್ಷದ ಮೊದಲ ಅಮವಾಸ್ಯೆ ದಿನವೇ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಮೂವರ ದುರ್ಮರಣ

ಹೊಸ ವರ್ಷದ ಮೊದಲ ಅಮವಾಸ್ಯೆ ದಿನವೇ ಭೀಕರ ರಸ್ತೆ ಅಪಘಾತವಾಗಿದ್ದರಿಂದಾಗಿ ಬಸ್ ಮತ್ತು‌ ಸೀಫ್ಟ್ ಕಾರು ನಡುವೆ ಮುಖಾಮುಖಿ ಡಿಕ್ಕಿ ಸ್ಥಳದಲ್ಲೇ ಮೂವರ ದುರ್ಮರಣ, ಐವರಿಗೆ ಗಾಯ ಸಂಭವಿಸಿದೆ.

Written by - Zee Kannada News Desk | Last Updated : Jan 2, 2022, 11:18 PM IST
  • ಹೊಸ ವರ್ಷದ ಮೊದಲ ಅಮವಾಸ್ಯೆ ದಿನವೇ ಭೀಕರ ರಸ್ತೆ ಅಪಘಾತವಾಗಿದ್ದರಿಂದಾಗಿ ಬಸ್ ಮತ್ತು‌ ಸೀಫ್ಟ್ ಕಾರು ನಡುವೆ ಮುಖಾಮುಖಿ ಡಿಕ್ಕಿ ಸ್ಥಳದಲ್ಲೇ ಮೂವರ ದುರ್ಮರಣ, ಐವರಿಗೆ ಗಾಯ ಸಂಭವಿಸಿದೆ.
ವರ್ಷದ ಮೊದಲ ಅಮವಾಸ್ಯೆ ದಿನವೇ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಮೂವರ ದುರ್ಮರಣ    title=

ಮಂಡ್ಯ: ಹೊಸ ವರ್ಷದ ಮೊದಲ ಅಮವಾಸ್ಯೆ ದಿನವೇ ಭೀಕರ ರಸ್ತೆ ಅಪಘಾತವಾಗಿದ್ದರಿಂದಾಗಿ ಬಸ್ ಮತ್ತು‌ ಸೀಫ್ಟ್ ಕಾರು ನಡುವೆ ಮುಖಾಮುಖಿ ಡಿಕ್ಕಿ ಸ್ಥಳದಲ್ಲೇ ಮೂವರ ದುರ್ಮರಣ, ಐವರಿಗೆ ಗಾಯ ಸಂಭವಿಸಿದೆ.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ಡಿಕೆಶಿ ನಡಿಗೆ ತಾಲೀಮು!: ಸುಳ್ಳಿನಜಾತ್ರೆ ಎಂದು ಬಿಜೆಪಿ ವ್ಯಂಗ್ಯ

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಕೆಂಪನಕೊಪ್ಪಲು ಗೇಟ್ ಬಳಿ ಬೆಳ್ಳೂರು ಕಡೆಗೆ ತೆರಳುತ್ತಿದ್ದ ಬಸ್ ಮೈಸೂರು ಕಡೆಗೆ ಹೊಗುತ್ತಿದ್ದ ಕಾರು ನಡುವೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ.

ಮೃತಪಟ್ಟವರನ್ನು ಕೊಡಗು ಮೂಲದವರು ಎನ್ನಲಾಗಿದೆ.ಕಾರಿನಲ್ಲಿದ್ದ ನಾಲ್ಕು ಮಂದಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ, ಕಾರಿನಲ್ಲಿದ್ದ ಓರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ.ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 3,194 ಹೊಸ ಪ್ರಕರಣಗಳು ದಾಖಲು

ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ಮೃತಪಟ್ಟವರ ಶವ ರವಾನೆ ಮಾಡಲಾಗಿದ್ದು, ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಸೋಮವಾರಪೇಟೆ ಮೂಲದ ಸುದೀಪ್(35), ಶ್ರೀಜಾ(30) ಹಾಗೂ ತಂಗಮ್ಮ(55) ಮೃತ ದುರ್ದೈವಿಗಳು ಎನ್ನಲಾಗಿದೆ.

ಈಗ 15 ವರ್ಷದ ಯುವತಿಯೊಬ್ಬಳು ಸ್ಥಿತಿ ಚಿಂತಾಜನಕವಾಗಿದ್ದು, ಆದಿಚುಂಚನಗಿರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಬಸ್ ಚಾಲಕ ಹಾಗೂ ಬಸ್ ನಲ್ಲಿದ್ದ ನಾಲ್ವರಿಗೆ ಗಾಯಗಳಾಗಿವೆ, ನಾಲ್ವರಿಗೂ ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಜಿ.ಟಿ.ಟಿ.ಸಿಯಲ್ಲಿ ಉಚಿತ ಪೋಸ್ಟ ಡಿಪ್ಲೋಮಾ ಕೋರ್ಸ್ ಅರ್ಜಿ ಆಹ್ವಾನ

ಕೆಲ ದಿನಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮೃತ ಜೋಡಿಯಾಗಿರುವ ಸುದೀಪ್ ಹಾಗು ಶ್ರೀಜಾ ಇಂದು ಅಮಾವಾಸ್ಯೆ ಹಿನ್ನಲೆ ಆದಿಚುಂಚನಗಿರಿ ಕ್ಷೇತ್ರಕ್ಕೆ ತೆರಳಿದ್ದ ಕುಟುಂಬವು ಈಗ ಪೂಜೆ ಮುಗಿಸಿ ವಾಪಸ್ಸು ಸೋಮವಾರ ಪೇಟೆಗೆ ತೆರಳುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದರಿಂದಾಗಿ ಸಾವನ್ನಪ್ಪಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News