ಬೆಂಕಿಯ ಜ್ವಾಲೆಯಾದ ಬೆಳಂದೂರು ಕೆರೆ, ನಂದಿಸಲು ಹರಸಾಹಸ ಪಟ್ಟ ಅಗ್ನಿಶಾಮಕ ದಳ

    

Last Updated : Jan 20, 2018, 12:39 PM IST
ಬೆಂಕಿಯ ಜ್ವಾಲೆಯಾದ ಬೆಳಂದೂರು ಕೆರೆ, ನಂದಿಸಲು ಹರಸಾಹಸ ಪಟ್ಟ ಅಗ್ನಿಶಾಮಕ ದಳ title=

ಬೆಂಗಳೂರು: ಬೆಂಗಳೂರಿನ ಕುಖ್ಯಾತ ಬೆಳಂದೂರು ಕೆರೆಗೆ ಮತ್ತೆ ಬೆಂಕಿ ಹತ್ತಿಕೊಂಡಿದೆ ಈಗ ಇದನ್ನು ನಂದಿಸುವ  ಕಾರ್ಯಾಚರಣೆಗಳು ನಡೆಯುತ್ತಿವೆ.

ಸ್ಥಳೀಯರು ತೇವ ಪ್ರದೇಶದ ಮಧ್ಯದಲ್ಲಿ ದಟ್ಟವಾದ ಹೊಗೆ ಗುರುತಿಸಿದ್ದು ನಂತರ ಕೆಲವೇ ಕ್ಷಣಗಳಲ್ಲಿ ಹೊತ್ತಿ ಉರಿಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದನ್ನು ತಿಳಿದು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಕೊಳಚೆನೀರು, ರಾಸಾಯನಿಕ ಎಫ್ಲುಯೆಂಟ್ಸ್ ಮತ್ತು ನಿರ್ಮಾಣ ಶಿಲಾಖಂಡರಾಶಿಗಳಿಂದ ತುಂಬಿದ್ದರಿಂದಾಗಿ ಕೆರೆಯಲ್ಲಿನ ಬೆಂಕಿಯನ್ನು ನಂದಿಸಲು ಅಧಿಕಾರಿಗಳು ಹರಸಾಹಸಪಟ್ಟರು.ಬೆಂಕಿ ನಂದಿಸುವ ವೇಳೆಯಲ್ಲಿ ಸೇನಾ ಸಿಬ್ಬಂಧಿಯೋಬ್ಬನಿಗೆ ಹಾವು ಕಚ್ಚಿದ್ದು ಅವನಿಗೆ ವೈಧ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಹಸಿರು ಪ್ರಾತಿಕಾರದ ನಿರ್ದೇಶನದ ನಡುವೆಯೂ ಸರ್ಕಾರ ಮತ್ತು ಇತರ ಸಂಸ್ಥೆಗಳು ಕೆರೆಯಲ್ಲಿನ ಮಾಲಿನ್ಯವನ್ನು ತಡೆಗಟ್ಟುವಲ್ಲಿ ವಿಫಲವಾಗಿವೆ. 

ಇನ್ಫೋಟೆಕ್ ಹಬ್ ಹತ್ತಿರ 1,000 ಎಕರೆಗಳಷ್ಟು ವ್ಯಾಪಿಸಿರುವ ಈ ಕೆರೆ ನಗರದಲ್ಲಿ ಉತ್ಪತ್ತಿಯಾಗುವ ಶೇಖಡಾ 60 ರಷ್ಟು ಭಾಗದ ಮಾಲಿನ್ಯವನ್ನು ಹೊಂದಿದೆ. ರಕ್ಷಣಾ ಅಧಿಕಾರಿಗಳ ಪ್ರಕಾರ, ಎಎಸ್ಸಿ ಸೆಂಟರ್ನ 5,000 ಸೇನಾ ಯೋಧರ ಪ್ರಬಲ ಆಕ್ರಮಣವು ಮೇಜರ್ ಜನರಲ್ ಎನ್ ಎಸ್ ರಾಜ್ಪುರೋಹಿತ್ ಅವರ ನೇತೃತ್ವದಲ್ಲಿ ಕೆರೆಯಲ್ಲಿನ  ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಮೇಯರ್ ಆರ್ ಸಂಪತ್ ರಾಜ್ ಬೆಂಕಿಯ ರಾಸಾಯನಿಕಗಳ ಶೇಖರಣೆಯ ಪರಿಣಾಮದಿಂದಾಗಿ  ಬೆಂಕಿ ಹೊತ್ತಿಕೊಂಡಿದೆ ಎಂದು ಅಭಿಪ್ರಾಯಪಟ್ಟರು. ಈಗಾಗಲೇ ನೀರಿನ ಮಾದರಿಗಳನ್ನು ಸಂಗ್ರಹಿಸಿ ಅದರ ಕಾರಣವನ್ನು ಕಂಡುಹಿಡಿಯಲಾಗುತ್ತಿದೆ ಎಂದರು. ಈ ಘಟನೆಯ ನಂತರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ರಕ್ಷಣಾ ಇಲಾಖೆ ಪರಸ್ಪರ ಈ ಕೆರೆಯಲ್ಲಿನ ಬೆಂಕಿಪ್ರಕರಣಕ್ಕೆ ಪ್ರತ್ಯಾರೋಪ ಮಾಡಿವೆ. 

 

 

 

Trending News