ನವದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಆಪ್ತರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಮತ್ತು ಸರ್ಕಾರದ ಮಹತ್ವದ ಹುದ್ದೆಗಳನ್ನು ಹಣಕ್ಕಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಿನೇಶ್ ಗುಂಡುರಾವ್ (Dinesh GunduRao) (ತಮಿಳುನಾಡು, ಪುದುಚೇರಿ, ಗೋವಾ ಉಸ್ತುವಾರಿ) ಮತ್ತು ಎಐಸಿಸಿಯ ವಕ್ತಾರ ಗೌರವ್ ವಲ್ಲಭ್, 'ಬಿ.ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬ ರಾಜ್ಯವನ್ನು ಲೂಟಿ ಮಾಡಿ ಆ ಹಣವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು 'ಮುಖ್ಯಮಂತ್ರಿ' ಸ್ಥಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.ಬಹುಶಃ ಬಿಜೆಪಿ ಹಾಗೂ ಅದರ ರಾಷ್ಟ್ರೀಯ ನಾಯಕರಿಗೂ ಇದರಲ್ಲಿ ಪಾಲಿರುವ ಕಾರಣ ಈ ಬ್ರಹ್ಮಾಂಡ ಭ್ರಷ್ಟಾಚಾರ ನೋಡಿಯೂ ಅವರು ಸುಮ್ಮಿದ್ದಾರೆ" ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: "ಉತ್ತರ ಪ್ರದೇಶದ ನೂತನ ಜನಸಂಖ್ಯಾ ಕಾಯ್ದೆ ಇಡೀ ದೇಶಕ್ಕೂ ಅಳವಡಿಸಲಿ"
जब डॉ. राव इस पद पर बैठे, तो येदियुरप्पा जी के रिश्तेदार मरीस्वामी ने उनसे ₹10 करोड़ मांग लिए। डॉ. राव ने जैसे-तैसे ₹9.50 करोड़ इकट्ठे करके मरीस्वामी को दिए : श्री @GouravVallabh pic.twitter.com/QjjJIaBgoP
— Congress (@INCIndia) July 11, 2021
"ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಸುಧೀಂದ್ರ ರಾವ್ ಅವರು 2019ರ ಡಿಸೆಂಬರ್ 30 ರಂದು ತಮ್ಮ ನೇಮಕದ ಬಗ್ಗೆ ನಡೆದ ಒಪ್ಪಂದ ಹಾಗೂ ಅದಕ್ಕಾಗಿ ₹16ಕೋಟಿ ಲಂಚದ ಬೇಡಿಕೆಯ ಬಗ್ಗೆ ಹೇಳಿದ್ದಾರೆ.ಅದರರ್ಥ ಅವರು ಬಿ.ಎಸ್ ಯಡಿಯೂರಪ್ಪ ಅವರ ಕುಟುಂಬಕ್ಕೆ ಇಷ್ಟು ಹಣವನ್ನು ಲಂಚವಾಗಿ ನೀಡಿದರೆ ಮಂಡಳಿಯ ಅಧ್ಯಕ್ಷತೆ ಪಡೆಯುತ್ತಾರೆ" ಎಂದು ಗುಂಡುರಾವ್ ಆರೋಪಿಸಿದ್ದಾರೆ.
"ಮರಿಸ್ವಾಮಿ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ, ಮೊಮ್ಮಗ ಶಶಿಧರ ಮರಡಿ ಹಾಗೂ ಸೋದರ ಸಂಬಂಧಿ ಸಂಜಯ್ ಅವರಿಗೆ ರಾವ್ ಅವರನ್ನು ಪರಿಚಯಿಸುತ್ತಾರೆ.ರಾವ್ ಅವರ ಅಂದಾಜಿನಂತೆ ಈ ಮೂವರು ಸಿಎಂ ಕುಟುಂಬ ಸದಸ್ಯರು ಲಂಚವಾಗಿ ಸುಮಾರು ₹ 60 ಕೋಟಿಯಷ್ಟು ಹಣ ಪಡೆದಿದ್ದಾರೆ.ಸುಧೀಂದ್ರ ರಾವ್ ಹೇಳುವಂತೆ ಸಿಎಂ ಬಿ.ಎಸ್.ವೈ ಅವರು, ತಮ್ಮ ಕುಟುಂಬ ಸದಸ್ಯರು ದಾವೋಸ್ ಮತ್ತು ಮಾರಿಷಸ್ ಪ್ರವಾಸಕ್ಕೆ ತೆರಳಿದ್ದು, ಮೊಲೆಕ್ಸ್ ಕಂಪನಿ ಅವರ ಪ್ರಯಾಣದ ಅಷ್ಟೂ ಖರ್ಚು ನೋಡಿಕೊಳ್ಳುತ್ತಿದೆ. ಅದಕ್ಕೆ ಸಂಬಂಧಿಸಿದ ಕಡತಗಳನ್ನು ಕೂಡಲೇ ತೆರವು ಮಾಡಬೇಕು ಎಂದಿದ್ದಾರೆ.ಅದರಂತೆ ಅವರು ಆ ಕೆಲಸ ಮುಗಿಸಿ ಕೊಟ್ಟಿದ್ದಾರೆ" ಎಂದು ಗುಂಡುರಾವ್ ಪ್ರತಿಕಾಗೊಷ್ಟಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
Karnataka CM, Mr. Yediyurappa and family are using this position to loot & plunder the state, and this money is being rechannelised to fund their political ambitions, to fund the BJP and also probably to fund the national leadership of BJP.: Shri @dineshgrao pic.twitter.com/3duVekEQBi
— Congress (@INCIndia) July 11, 2021
ಇನ್ನು ಮುಂದುವರೆದು ಮಾತನಾಡಿದ ಗುಂಡುರಾವ್ "ಸುಧೀಂದ್ರ ರಾವ್ ಅವರೇ ಹೇಳುವಂತೆ, ಅವರ ಸಹಿಯನ್ನು ಬೇರೆ ಯಾವುದೋ ಉದ್ದೇಶಕ್ಕೆಂದು ಪಡೆದು, ಅದನ್ನು ಅವರ ರಾಜೀನಾಮೆಗೆ ಬಳಸಿಕೊಳ್ಳಲಾಗಿದೆ.ಏಕೆಂದರೆ ಪಿಸಿಬಿ ಅಧ್ಯಕ್ಷರು ಸ್ವತಃ ರಾಜೀನಾಮೆ ನೀಡದ ಹೊರತು, ನ್ಯಾಯಾಲಯದ ಆದೇಶ ಅಥವಾ ಅದಕ್ಕೆ ಬೇರೆ ಕಾರಣಗಳಿಲ್ಲದಿದ್ದಲ್ಲಿ ಅವರನ್ನು ವಜಾ ಗೊಳಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಾನವ ಹಕ್ಕು ಹೋರಾಟಗಾರ ಸ್ಟಾನ್ ಸ್ವಾಮಿ ಅವರನ್ನು ಜೈಲಿನಲ್ಲಿ ಕೊಲೆ ಮಾಡಲಾಗಿದೆ- ಸಂಜಯ್ ರೌತ್
ಈಗ ಕಾಂಗ್ರೆಸ್ ಪಕ್ಷವು ಈ ವಿಚಾರವಾಗಿ ಮೂರು ಬೇಡಿಕೆಗಳನ್ನು ಇಟ್ಟಿದೆ. ಇದರಲ್ಲಿ ಮೊದಲನೇಯದಾಗಿ ಸಿಎಂ ಹುದ್ದೆಗೆ ಬಿಎಸ್ ಯಡಿಯೂರಪ್ಪ ಅವರು ತಕ್ಷಣ ರಾಜೀನಾಮೆ ನೀಡಬೇಕು, ಕರ್ನಾಟಕ ಹೈಕೋರ್ಟ್ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ, ಇಡೀ ವಿಷಯವನ್ನು ಬಹಿರಂಗಪಡಿಸಿ ಅಪರಾಧಿಗಳನ್ನು ಸೆರೆಮನೆಗೆ ಕಳುಹಿಸಬೇಕು. "ಸಿಬಿಐ, ಇಡಿ ಮತ್ತು ಐಟಿ ಅಧಿಕಾರಿಗಳಂತಹ ಕೇಂದ್ರ ಏಜೆನ್ಸಿಗಳು ಸಮಗ್ರ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸುವಂತೆ ನಾವು ಒತ್ತಾಯಿಸುತ್ತೇವೆ" ಎಂದು ದಿನೇಶ್ ಗುಂಡುರಾವ್ ಆಗ್ರಹಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.