ಜಾಹಿರಾತು ಮೂಲಕ ಸುಪ್ರೀಂ, ಹೈಕೋರ್ಟ್ ಜಡ್ಜ್ ಗಳ ನೇಮಕ ಸಾಧ್ಯವಿಲ್ಲ - ಹೈಕೋರ್ಟ್

ನ್ಯಾಯಾಂಗ ಕಛೇರಿಯನ್ನು ಸಾಮಾನ್ಯ ಸರ್ಕಾರಿ ಸೇವೆಗಳಿಗೆ ಹೋಲಿಸಲಾಗದು ಆದ್ದರಿಂದ ಜಾಹಿರಾತು ಮೂಲಕ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್ ಜಡ್ಜ್ ಗಳ ನೇಮಕ ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

Last Updated : Oct 18, 2018, 02:29 PM IST
ಜಾಹಿರಾತು ಮೂಲಕ ಸುಪ್ರೀಂ, ಹೈಕೋರ್ಟ್ ಜಡ್ಜ್ ಗಳ ನೇಮಕ ಸಾಧ್ಯವಿಲ್ಲ - ಹೈಕೋರ್ಟ್  title=

ಬೆಂಗಳೂರು: ನ್ಯಾಯಾಂಗ ಕಛೇರಿಯನ್ನು ಸಾಮಾನ್ಯ ಸರ್ಕಾರಿ ಸೇವೆಗಳಿಗೆ ಹೋಲಿಸಲಾಗದು ಆದ್ದರಿಂದ ಜಾಹಿರಾತು ಮೂಲಕ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್ ಜಡ್ಜ್ ಗಳ ನೇಮಕ ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅರವಿಂದ್ ಕಾಮತ್ ಪುತ್ತೂರು ಮತ್ತು ವಿ.ಎಲ್.ಜಗದೀಶ್ ಮತ್ತು ಸಾಮಾನ್ಯ ವ್ಯಕ್ತಿ ಎಂದು ಗುರಿಸಿಕೊಂಡಿರುವ ಪ್ರಶಾಂತ್ ಮೂರ್ತಿ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿವಿ ನಾಗರತ್ನಾ "ಸುಪ್ರಿಂಕೋರ್ಟ್  ಮತ್ತು ಹೈಕೋರ್ಟ್ ಕಚೇರಿಗಳು ಸಾಂವಿಧಾನಿಕ ಹುದ್ದೆಗಳಾಗಿದ್ದು, ಇವುಗಳು ಇನ್ನ್ಯಾವುದೇ ಸರ್ಕಾರಿ ಸೇವೆಗಳಂತಲ್ಲ. ಆದ್ದರಿಂದ ಸುಪ್ರಿಂ ಮತ್ತು ಹೈಕೋರ್ಟ್ ನ್ಯಾಯಾಧಿಶರ ಹುದ್ದೆಯನ್ನು ಜಾಹೀರಾತು ಮತ್ತು ಇನ್ನಿತರ ನೋಟಿಫಿಕೇಶನ್ ಗಳ ಮೂಲಕ ನೇಮಕ ಮಾಡಿಕೊಳ್ಳಲು ಬರುವುದಿಲ್ಲ" ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಲಾಗಿದೆ. 

ಈ ಮೂವರು ಸಲ್ಲಿಸಿದ್ದ ಪಿಐಎಲ್ ಅರ್ಜಿಯಲ್ಲಿ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗಳನ್ನು ನೋಟಿಫಿಕೆಶನ್ ಮತ್ತು ಜಾಹಿರಾತುಗಳನ್ನು ನೀಡುವುದರ ಮೂಲಕ ಅರ್ಜಿಗಳನ್ನು ಆಹ್ವಾನಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ಈಗ ಹೈಕೋರ್ಟ್ ಈಗ ಈ ಅರ್ಜಿಯನ್ನು ವಜಾಗೊಳಿಸಿದೆ.

ಸಾಮಾನ್ಯವಾಗಿ ನ್ಯಾಯಾಂಗದಲ್ಲಿ ಕೊಲಿಜಿಯಂ ಪದ್ದತಿಯ ಮೂಲಕ  ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ನ್ಯಾಯಾಧೀಶರನ್ನು ಆಯ್ಕೆ ಮಾಡಲಾಗುತ್ತದೆ.ಈ ಪದ್ದತಿಯನ್ನು ಕೊನೆಗಾಣಿಸಿ  ಜಾಹೀರಾತು ನೀಡುವುದರ ಮೂಲಕ ಆರ್ಜಿಗಳನ್ನು ಆಹ್ವಾನಿಸಬೇಕು ಎನ್ನುವುದು ಅರ್ಜಿದಾರರ ವಾದವಾಗಿತ್ತು. 

 

Trending News