ಮಗನ ಕ್ಷೇತ್ರಕ್ಕೆ ಅಪ್ಪನ ಉಸ್ತುವಾರಿ: ಗಡಿ ಜಿಲ್ಲೆಯಲ್ಲಿ ಕೈ ಅಭ್ಯರ್ಥಿಯ ದಾಖಲೆಯ ಜಯ

Chamrajnagar Lok Sabha Election: ಲೋಕಸಭಾ ಚುನಾವಣೆ ಸಮಯದಲ್ಲಿ ಶಾಸಕರಿಗೆ ಸಂಸದರ ಸ್ಥಾನ ಗೆಲ್ಲಿಸಿಕೊಡುವ ಜವಾಬ್ದಾರಿ ಹೊರಿಸಲಾಗಿತ್ತು. ಜೊತೆಗೆ, ಕನಿಷ್ಠ 20 ಸಾವಿರ ಲೀಡ್ ತಂದು‌ಕೊಡಬೇಕೆಂದು ಹೊಣೆ ಹೊರಿಸಲಾಗಿತ್ತು. 

Written by - Yashaswini V | Last Updated : Jun 5, 2024, 03:31 PM IST
  • ಸಿಎಂ ಸ್ವಕ್ಷೇತ್ರ ವರುಣ ಕೂಡ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವುದರಿಂದ ಸಿದ್ದರಾಮಯ್ಯಗೆ ಕ್ಷೇತ್ರ ಪ್ರತಿಷ್ಠೆಯೂ ಆಗಿತ್ತು.
  • ಈಗ ಸಿದ್ದರಾಮಯ್ಯ ಟಾಸ್ಕ್ ನ್ನು ಶಾಸಕರು ಕಂಪ್ಲೀಟ್ ಮಾಡಿದ್ದು ಎಚ್‌.ಸಿ.ಮಹಾದೇವಪ್ಪ ರ ಟಿ.ನರಸಿಪುರ ಬಿಟ್ಟರೇ ಉಳಿದ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆ ಭರ್ಜರಿ ಮತಗಳು ಬಂದಿದೆ.
  • ಶಾಸಕರು ತಮಗೆ ಕೊಟ್ಟಿದ್ದ ಟಾಸ್ಕ್ ನ್ನು ಕಂಪ್ಲೀಟ್ ಮಾಡಿದ್ದಾರೆ. ಜೆಡಿಎಸ್ ಶಾಸಕ ಇರುವ ಹನೂರಲ್ಲಿ ಅತೀಹೆಚ್ಚು ಲೀಡ್ ಬಂದಿದೆ.
ಮಗನ ಕ್ಷೇತ್ರಕ್ಕೆ ಅಪ್ಪನ ಉಸ್ತುವಾರಿ: ಗಡಿ ಜಿಲ್ಲೆಯಲ್ಲಿ  ಕೈ ಅಭ್ಯರ್ಥಿಯ ದಾಖಲೆಯ ಜಯ  title=

Chamrajnagar Lok Sabha Results: ಚಾಮರಾಜನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲ್ಲಿ ಮಕಾಡೆ ಮಲಗಿದ್ದ ಬಿಜೆಪಿ ಲೋಕ ಚುನಾವಣೆಯಲ್ಲಿ ಚೇತರಿಸಿಕೊಳ್ಳಲಿದೆ ಎಂಬ ಮಾತು ಹುಸಿಯಾಗಿದ್ದು ಮಕಾಡೆ ಮಲಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಬಿಜೆಪಿ ಶಾಸಕರು ಕಳೆದ ಚುನಾವಣೆಯಲ್ಲಿ ಸೋತಿದ್ದರು. ಲೋಕ ಚುನಾವಣೆಯಲ್ಲಿ ಚೇತರಿಸಿಕೊಳ್ಳಬಹುದೆಂಬ ಮಾತು ಹುಸಿಯಾಗಿದ್ದು ಕೊಳ್ಳೇಗಾಲದಲ್ಲಿ  33 ಸಾವಿರ ಮತ ಕಾಂಗ್ರೆಸ್ ಗೆ ಲೀಡ್ ಕೊಟ್ಟಿದ್ದರೇ ಬಿಜೆಪಿ ಜಿಲ್ಲಾಧ್ಯಕ್ಷ ಇರುವ ಗುಂಡ್ಲುಪೇಟೆ ಕ್ಷೇತ್ರದಲ್ಲಿ 17 ಸಾವಿರ ಮತ ಕಾಂಗ್ರೆಸ್ ಬುಟ್ಟಿ ಸೇರಿದೆ‌‌.

ವಿಧಾನಸಭಾ ಚುನಾವಣೆಯ ಸೋಲು ಲೋಕ ಅಖಾಡದಲ್ಲಿ ಮುಂದುವರೆದಿದ್ದು ಕೈ ಗ್ಯಾರಂಟಿ, ಶಾಸಕರು ನಿರಂತರ ಓಡಾಟ, ಬಿಜೆಪಿಯ ಸಂಘಟನೆ ಕೊರತೆ ಫಲಿತಾಂಶದ ಮೂಲಕ ಜಾಹೀರಾಗಿದೆ.

ಇದನ್ನೂ ಓದಿ- ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಬೊಮ್ಮಾಯಿ ಜಯ

ಸಿಎಂ ಟಾಸ್ಕ್ ಕಂಪ್ಲೀಟ್: 
ಲೋಕಸಭಾ ಚುನಾವಣೆ (Loksabha Election) ಸಮಯದಲ್ಲಿ ಶಾಸಕರಿಗೆ ಸಂಸದರ ಸ್ಥಾನ ಗೆಲ್ಲಿಸಿಕೊಡುವ ಜವಾಬ್ದಾರಿ ಹೊರಿಸಲಾಗಿತ್ತು. ಜೊತೆಗೆ, ಕನಿಷ್ಠ 20 ಸಾವಿರ ಲೀಡ್ ತಂದು‌ಕೊಡಬೇಕೆಂದು ಹೊಣೆ ಹೊರಿಸಲಾಗಿತ್ತು. 

ಸಿಎಂ ಸ್ವಕ್ಷೇತ್ರ ವರುಣ ಕೂಡ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವುದರಿಂದ ಸಿದ್ದರಾಮಯ್ಯಗೆ ಕ್ಷೇತ್ರ ಪ್ರತಿಷ್ಠೆಯೂ ಆಗಿತ್ತು. ಈಗ ಸಿದ್ದರಾಮಯ್ಯ ಟಾಸ್ಕ್ ನ್ನು ಶಾಸಕರು ಕಂಪ್ಲೀಟ್ ಮಾಡಿದ್ದು ಎಚ್‌.ಸಿ.ಮಹಾದೇವಪ್ಪ ರ ಟಿ.ನರಸಿಪುರ ಬಿಟ್ಟರೇ ಉಳಿದ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆ ಭರ್ಜರಿ ಮತಗಳು ಬಂದಿದೆ, ಶಾಸಕರು ತಮಗೆ ಕೊಟ್ಟಿದ್ದ ಟಾಸ್ಕ್ ನ್ನು ಕಂಪ್ಲೀಟ್ ಮಾಡಿದ್ದಾರೆ. ಜೆಡಿಎಸ್ ಶಾಸಕ ಇರುವ ಹನೂರಲ್ಲಿ ಅತೀಹೆಚ್ಚು ಲೀಡ್ ಬಂದಿದೆ.

ಮಗನ ಕ್ಷೇತ್ರಕ್ಕೆ ಅಪ್ಪನ ಉಸ್ತುವಾರಿ: 
ಸದ್ಯ ಮೈಸೂರು ಜಿಲ್ಲೆ ಉಸ್ತುವಾರಿ ಆಗಿರುವ ಸಚಿವ ಎಚ್.ಸಿ.ಮಹಾದೇವಪ್ಪ (Minister HC Mahadevappa) ಈಗ ಚಾಮರಾಜನಗರ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳುತ್ತಾರೆ ಎಂಬ ಮಾತು ದಟ್ಟವಾಗಿದೆ. ಪುತ್ರ ಸುನಿಲ್ ಬೋಸ್ ಮೊದಲ ಬಾರಿ ಸಂಸದನಾಗಿರುವ ಹಿನ್ನೆಲೆ ಮಾರ್ಗದರ್ಶನ ಹಾಗೂ ಕ್ಷೇತ್ರದಲ್ಲಿ ಓಡಾಟ ನಡೆಸಲು ಮೈಸೂರು ಬಿಟ್ಟು ಚಾಮರಾಜನಗರದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ (Chamarajanagar Lok Sabha Constituency) ಈ ಹಿಂದೆ ಮಹಾದೇವಪ್ಪ ಸ್ಪರ್ಧಿಸಿ ಶ್ರೀನಿವಾಸಪ್ರಸಾದ್  ವಿರುದ್ಧ ಪರಾಭವಗೊಂಡಿದ್ದರು. ಈಗ ಅದೇ ಕ್ಷೇತ್ರದಲ್ಲಿ ಮಗ ಜಯಿಸಿದ್ದು ತಮ್ಮ ಮೊದಲ ಚುನಾವಣೆಯಲ್ಲೆ ಸಂಸತ್ ಸದಸ್ಯರಾಗಿದ್ದಾರೆ. 

ಇದನ್ನೂ ಓದಿ- Lok Sabha Election Result 2024: ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಸೋಲು, ಹೈದರಾಬಾದ್‌ನಲ್ಲಿ ಓವೈಸಿಗೆ ಗೆಲುವು!

ಕೈ ಅಭ್ಯರ್ಥಿಗೆ ದಾಖಲೆ ಜಯ : 
ಚಾಮರಾಜನಗರ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾಗಿರುವ ಸುನಿಲ್ ಬೋಸ್ ಕ್ಷೇತ್ರದಲ್ಲೇ ದಾಖಲೆ ಮಟ್ಟದಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಆರ್.ಧ್ರುವನಾರಾಯಣ ತಮ್ಮ ಪ್ರತಿಸ್ಪರ್ಧಿ ಎ.ಆರ್.ಕೃಷ್ಣಮೂರ್ತಿ ವಿರುದ್ದ 1.41 ಲಕ್ಷ ಮತಗಳಿಂದ ಜಯಿಸಿದ್ದರು. ಆದರೆ, ಸುನಿಲ್ ಬೋಸ್ 1,88,943 ಮತಗಳ ಅಂತರದಲ್ಲಿ ಗೆದ್ದು ಚಾಮರಾಜನಗರ ಲೋಕ ಅಖಾಡದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಸು‌ನಿಲ್ ಬೋಸ್  ಗೆಲುವಿಗೆ ಕಾರಣ 
1.ಏಳು ಶಾಸಕರಿಗೂ  ಟಾಸ್ಕ್ ಕೊಟ್ಟಿದ್ದು ವರದಾನ.
2.ಮನೆ ಮನೆಗೆ ಭೇಟಿ‌ ಕೊಡುವ ಮೂಲಕ ವ್ಯಾಪಕ ಪ್ರಚಾರ.
3.ಗ್ಯಾರಂಟಿ ಯೋಜನೆ ಜಾರಿಯ ಉಪಯೋಗ.
4.ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ನವರ ಹೆಚ್ಚಿನ ಓಡಾಟ.
5.ಎಂಟು ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳು ಕಾಂಗ್ರೆಸ್ ‌ತೆಕ್ಕೆಯಲ್ಲಿರುವುದು. 
6.ಮೈಸೂರು ಚಾಮರಾಜನಗರ ಭಾಗದಲ್ಲಿ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ.ಮಹದೇವಪ್ಪನವರ ಕಸರತ್ತು.

ಬಿಜೆಪಿಯ  ಹೀನಾಯ ಸೋಲಿಗೆ ಕಾರಣ :  
1.ಜಿಲ್ಲೆಯಲ್ಲಿ ಪ್ರಬಲ‌ ನಾಯಕರ  ಹಾಗೂ ಸ್ಟಾರ್ ಪ್ರಚಾರಕರ  ಕೊರತೆ.
2.ಕಾಂಗ್ರೆಸ್ ಗ್ಯಾರಂಟಿ ಮುಂದೆ ಮುಗ್ಗರಿಸಬೇಕಾದದ್ದು.
3.ಮೋದಿ ಅಲೆಗೆ ಸಿಮೀತವಾಗಿ, ಸರಿಯಾದ ಪ್ರಚಾರ ಮಾಡದಿರುವುದು. 
4.ಹಿಂದಿನ ಸಂಸದರಿಂಷ ಅಭಿವೃದ್ಧಿ ಕುಂಠಿತ ಆರೋಪ 
5.ಸ್ಥಳೀಯ ಮುಖಂಡರು ಕೊನೆಯ ಕ್ಷಣದಲ್ಲಿ ಪಕ್ಷ ತೊರೆದದ್ದು ಹಾಗೂ ಸಂಸದರು ತಟಸ್ಥವಾದದ್ದು. 
6.ಎಂಟರಲ್ಲಿ ಏಳು ಶಾಸಕರು ಕಾಂಗ್ರೆಸ್ ನವರೇ ಇದ್ದದ್ದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News