KRS ಗೋಡೆ ಕುಸಿತದ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತುವೆ: ಸುಮಲತಾ ಅಂಬರೀಶ್

'ರಾಜ್ಯ ಸರ್ಕಾರ ಈಗ ಮೌನವಾಗಿ ಕೂರಲು ಸಾಧ್ಯವಿಲ್ಲ, ಈ ಬಗ್ಗೆ ಉತ್ತರ ನೀಡಬೇಕು'

Written by - Zee Kannada News Desk | Last Updated : Jul 19, 2021, 01:21 PM IST
  • ಕನ್ನಂಬಾಡಿ ತನ್ನನ್ನು ಕಾಪಾಡುವಂತೆ ಕೂಗಿ ಕೂಗಿ ಹೇಳುತ್ತಿದೆ, ಇದೊಂದು ರೆಡ್ ಅಲರ್ಟ್
  • ಕೆಆರ್‌ಎಸ್ ಗೋಡೆ ಕುಸಿದಿರುವ ವಿಚಾರವಾಗಿ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ
  • ಕಿಡ್ನಿಗೆ ಇನ್ಫೆಕ್ಷನ್ ಆಗಿದೆ ಅಂತಾ ಲಿವರ್ ಗೂ ಏನು ಆಗಲ್ವ ಎಂದು ಪ್ರಶ್ನಿಸಿದ ಸುಮಲತಾ ಅಂಬರೀಶ್
KRS ಗೋಡೆ ಕುಸಿತದ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತುವೆ: ಸುಮಲತಾ ಅಂಬರೀಶ್  title=
ಸಂಸದೆ ಸುಮಲತಾ ಅಂಬರೀಶ್ (Photo Courtesy: ANI)

ನವದೆಹಲಿ: ಅಕ್ರಮ ಗಣಿಗಾರಿಕೆಯಿಂದ ಐತಿಹಾಸಿಕ ಕೆಆರ್‌ಎಸ್ ಡ್ಯಾಂ ಕುಸಿಯುವ ಭೀತಿಯ ಮಧ್ಯೆಯೇ ಭಾನುವಾರ ತಡರಾತ್ರಿ ಡ್ಯಾಂ ಬಳಿಯ ಮೆಟ್ಟಲಿನ ಗೋಡೆ ಬಿರುಕುಬಿಟ್ಟಿದೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್ ಸೋಮವಾರದಿಂದ ಪ್ರಾರಂಭವಾಗಿರುವ ಸಂಸತ್ತಿನ ಅಧಿವೇಶನದಲ್ಲಿ ಈ ಬಗ್ಗೆ ದನಿ ಎತ್ತುವುದಾಗಿ ತಿಳಿಸಿದ್ದಾರೆ.

ಕೆಆರ್‌ಎಸ್ ಡ್ಯಾಂ(KRS Dam)ನ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ(Illegal Mining) ನಿಲ್ಲಿಸಿ ಡ್ಯಾಂ ಉಳಿಸುವ ವಿಚಾರವಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಸೇರಿ ಪ್ರಮುಖರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ. ಅವಕಾಶ ಸಿಕ್ಕರೆ ಈ ವಿಚಾರವನ್ನು ನಾನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಸುಮಲತಾ ಅಂಬರೀಶ್(Sumalatha Ambarish) ಹೇಳಿದ್ದಾರೆ.  

ನಿನ್ನೆ ತಡರಾತ್ರಿ ಸ್ಥಳೀಯರು ನನಗೆ ಕರೆ ಮಾಡಿ ಕೆಆರ್‌ಎಸ್ ಡ್ಯಾಂ(KRS Dam)ನ ಗೋಡೆ ಕುಸಿದಿರುವ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ನಾನು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಕೇಳಿದೆ. ಡ್ಯಾಂ ಬಳಿಯ ಮೆಟ್ಟಿಲಿನ ಗೊಡೆಯಿಂದ ಎರಡ್ಮೂರು ಕಲ್ಲುಗಳು ಬಿದ್ದಿವೆ ಎಂದು ಹೇಳಿದರು. ಈ ಬಗ್ಗೆ ಫೋಟೋ ಮತ್ತು ವಿಡಿಯೋ ಇದ್ದರೆ ಕಳುಹಿಸಿ ಎಂದು ಕೇಳಿದೆ. ನಿನ್ನೆ ಸಂಜೆ 5.15ಕ್ಕೆ ಗೋಡೆ ಕುಸಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: PUC Results: ನಾಳೆ ಬಹುನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ

ಗೋಡೆ ಕುಸಿತದ ಬಗ್ಗೆ ನಾನು ಜಿಲ್ಲಾಧಿಕಾರಿಯವರಲ್ಲಿ ವಿಚಾರಿಸಿದೆ. ರಾತ್ರಿ 9.30ರ ಸಮಯದಲ್ಲಿ ಹಳೆ ಗೋಡೆ ಕುಸಿತವಾಗಿದೆ ಎಂದು ಹೇಳಿದರು. ಈ ಘಟನೆ ಯಾವಾಗ ಆಗಿದೆ ಎಂಬ ವಿಚಾರದಲ್ಲಿ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ. ಕೆಆರ್‌ಎಸ್ ಗೋಡೆ ಕುಸಿದಿರುವ ವಿಚಾರವಾಗಿ ಬೇಜವಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕೆಆರ್‌ಎಸ್ ಸದ್ಯಕ್ಕೆ ಸೇಫ್ ಆಗಿದೆ. ಅದು ಚೆನ್ನಾಗಿ ಇರಬೇಕು ಎನ್ನುವುದು ನಮ್ಮ ಬಯಕೆ. ಆದರೆ ಇದೊಂದು ರೆಡ್ ಅಲರ್ಟ್. ಕನ್ನಂಬಾಡಿ ತನ್ನನ್ನು ಕಾಪಾಡುವಂತೆ ಕೂಗಿ ಹೇಳುತ್ತಿದೆ ಎಂದು ಅವರು ಹೇಳಿದ್ದಾರೆ.

ಯಾರು ಕೂಡ ಗೋಡೆ ಕುಸಿತಕ್ಕೆ ಸರಿಯಾದ ಕಾರಣ ಹೇಳುತ್ತಿಲ್ಲ. ರಾಜ್ಯ ಸರ್ಕಾರ ಈಗ ಮೌನವಾಗಿ ಕೂರಲು ಸಾಧ್ಯವಿಲ್ಲ, ಈ ಬಗ್ಗೆ ಉತ್ತರ ನೀಡಬೇಕು. ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಸುಮಲತಾ, ಕೆಆರ್‌ಎಸ್ ಗೆ ಯಾವುದೇ ರಿಸ್ಕ್ ಇಲ್ಲವೆಂದು ಕೈಕಟ್ಟಿ ಕೂರಲು ಸಾಧ್ಯವಾ? ರಾಜಕಾರಣ ಜೊತೆಗೂಡಿಸಿ ಮಾತನಾಡುವವರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿ ಪರೋಕ್ಷವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಮತ್ತು ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ: Karnataka Unlock: ಜುಲೈ 26 ರಿಂದ ಪದವಿ ಕಾಲೇಜು ತೆರೆಯಲು ಅವಕಾಶ, ಚಿತ್ರಮಂದಿರ ಓಪನ್

ಈ ರೀತಿಯ ಡ್ಯಾಂಅನ್ನು ಮುಂದೆ ನಿರ್ಮಿಸಲು ಸಾಧ್ಯವಿಲ್ಲ. ಅದನ್ನು ‌ಉಳಿಸಿಕೊಂಡು ಹೋಗುವ ಜವಬ್ದಾರಿಯನ್ನು ತೆಗೆದುಕೊಳ್ಳಬೇಕು. ಕಿಡ್ನಿಗೆ ಇನ್ಫೆಕ್ಷನ್ ಆಗಿದೆ ಅಂತಾ ಲಿವರ್ ಗೂ ಏನು ಆಗಲ್ವ? ಕೊರೊನಾ ಚೀನಾದಲ್ಲಿದೆ, ಇಲ್ಲಿ ಏನು ಆಗಲ್ಲವೆಂದು ಸುಮ್ಮನೆ ಕುಳಿತರೆ ಆಗುತ್ತಾ? ಮಳೆಯಿಂದ ಕೆಆರ್‌ಎಸ್ ಡ್ಯಾಂನ ಗೋಡೆ ಕುಸಿದಿದೆ ಎನ್ನುವ ಶಾಸಕ ರವೀಂದ್ರ ಶ್ರೀಕಂಠಯ್ಯವರ‌ ಹೇಳಿಕೆ ಬೇಜವಬ್ದಾರಿಯಿಂದ ಕೂಡಿದೆ ಎಂದು ಸುಮಲತಾ ಕಿಡಿಕಾರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News