ಮಂಡ್ಯದ ಜನತೆ ಮನಸ್ಸು ಗೆದ್ದ ತೃಪ್ತಿ ನನಗಿದೆ: ಸುಮಲತಾ ಅಂಬರೀಶ್

ಮಂಡ್ಯದ ಜನರು ಅಂಬರೀಶ್ ಅವರ ಮೇಲೆ ಇಟ್ಟಿದ್ದ ಪ್ರೀತಿ, ಅಭಿಮಾನ ನನಗೆ ಗೊತ್ತಿದೆ- ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್

Last Updated : Apr 22, 2019, 03:40 PM IST
ಮಂಡ್ಯದ ಜನತೆ ಮನಸ್ಸು ಗೆದ್ದ ತೃಪ್ತಿ ನನಗಿದೆ: ಸುಮಲತಾ ಅಂಬರೀಶ್ title=

ಬೆಂಗಳೂರು: ಚುನಾವಣೆ ಎಂದ ಮೇಲೆ ಸೋಲು/ಗೆಲುವು ಎನ್ನುವುದು ಇದ್ದಿದ್ದೇ. ನಾನು ಈ ಚುನಾವಣೆಯಲ್ಲಿ ಗೆಲ್ಲಬಹುದು, ಇಲ್ಲವೇ ಸೋಲಬಹುದು. ಆದರೆ ಮಂಡ್ಯದ ಜನತೆಯ ಮನಸ್ಸು ಗೆದ್ದ ತೃಪ್ತಿ ನನಗಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

ಮಂಡ್ಯದ ಜನರು ಅಂಬರೀಶ್ ಅವರ ಮೇಲೆ ಇಟ್ಟಿದ್ದ ಪ್ರೀತಿ, ಅಭಿಮಾನ ನನಗೆ ಗೊತ್ತಿದೆ. ಈಗಲೂ ಅವರ ಅಭಿಮಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದರು.

ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಮಾ, ನಾನು ಯಾವುದೇ ಸಮೀಕ್ಷೆ ಮಾಡಿಸಿಲ್ಲ. ಆದರೆ, ಜನತೆ ನಾವು ನಂಬಿದ ಜನ ನಮ್ಮ ಕೈ ಬಿಟ್ಟಿಲ್ಲ. ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Trending News