ರೈತರ ಬೆಳೆಸಾಲ ಮನ್ನಾ: 2.9 ಲಕ್ಷ ಸಾಲ ಖಾತೆಗಳಿಗೆ 1440 ಕೋಟಿ ರೂ. ಬಿಡುಗಡೆ

ಸುಗ್ಗಿ ಹಬ್ಬಕ್ಕೆ ರೈತರಿಗೆ  ಉಡುಗೊರೆ ನೀಡಿದ್ದ ರಾಜ್ಯ ಸರ್ಕಾರ, ಜನವರಿ 11 ರವರೆಗೆ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ 1.1 ಲಕ್ಷ ಸಹಕಾರಿ ಬ್ಯಾಂಕುಗಳ ಸಾಲಖಾತೆಗಳಿಗೆ 616 ಕೋಟಿ ರೂ. ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ 58 ಸಾವಿರ ಸಾಲಖಾತೆಗಳಿಗೆ 260 ಕೋಟಿ ರೂ. ರೈತರ ಬೆಳೆಸಾಲ ಮನ್ನಾ ಮೊತ್ತ ಬಿಡುಗಡೆ ಮಾಡಿತ್ತು.

Last Updated : Jan 29, 2019, 07:41 AM IST
ರೈತರ ಬೆಳೆಸಾಲ ಮನ್ನಾ: 2.9 ಲಕ್ಷ ಸಾಲ ಖಾತೆಗಳಿಗೆ 1440 ಕೋಟಿ ರೂ. ಬಿಡುಗಡೆ  title=
File Image

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್ ಸಿಕ್ಕಿದ್ದು, ರೈತರ ಬೆಳೆಸಾಲ ಮನ್ನಾ ಯೋಜನೆಯಡಿ ಜನವರಿ 28 ರ ವರೆಗೆ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಒಟ್ಟು  2.9 ಲಕ್ಷ ಸಾಲ ಖಾತೆಗಳಿಗೆ 1440 ಕೋಟಿ ರೂ. ಬಿಡುಗಡೆಗೊಳಿಸಿದ್ದಾರೆ.

ಜನವರಿ 28ರ ವರೆಗೆ ಸಹಕಾರಿ ಬ್ಯಾಂಕುಗಳ 1.4 ಲಕ್ಷ ಸಾಲಖಾತೆಗಳಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.

768 ಕೋಟಿ ರೂ. ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ 150125 ಸಾಲಖಾತೆಗಳಿಗೆ 672.5  ಕೋಟಿ ರೂ.  ಬೆಳೆಸಾಲ ಮನ್ನಾ ಮೊತ್ತ ಬಿಡುಗಡೆ ಮಾಡಲಾಗಿದೆ.

ಈ ಹಿಂದೆ ಸುಗ್ಗಿ ಹಬ್ಬಕ್ಕೆ ರೈತರಿಗೆ  ಉಡುಗೊರೆ ನೀಡಿದ್ದ ರಾಜ್ಯ ಸರ್ಕಾರ, ಜನವರಿ 11 ರವರೆಗೆ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ 1.1 ಲಕ್ಷ ಸಹಕಾರಿ ಬ್ಯಾಂಕುಗಳ ಸಾಲಖಾತೆಗಳಿಗೆ 616 ಕೋಟಿ ರೂ. ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ 58 ಸಾವಿರ ಸಾಲಖಾತೆಗಳಿಗೆ 260 ಕೋಟಿ ರೂ. ರೈತರ ಬೆಳೆಸಾಲ ಮನ್ನಾ ಮೊತ್ತ ಬಿಡುಗಡೆ ಮಾಡಿತ್ತು.

Trending News