ಪರಶುರಾಮ್ ವಾಗ್ಮೊರೆಯೊಂದಿಗೆ ಶ್ರೀ ರಾಮಸೇನೆ ಯಾವುದೇ ಸಂಬಂಧವಿಲ್ಲ- ಪ್ರಮೋದ್ ಮುತಾಲಿಕ್

    

Last Updated : Jun 16, 2018, 06:35 PM IST
ಪರಶುರಾಮ್ ವಾಗ್ಮೊರೆಯೊಂದಿಗೆ ಶ್ರೀ ರಾಮಸೇನೆ ಯಾವುದೇ ಸಂಬಂಧವಿಲ್ಲ- ಪ್ರಮೋದ್ ಮುತಾಲಿಕ್ title=
Photo courtesy: ANI

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿನ ಆರೋಪಿ ಪರಶುರಾಮ ವಾಘ್ಮಾರೆ ಅವರೊಂದಿಗೆ ತಮ್ಮ ಸಂಘಟನೆಯದು ಯಾವುದೇ ಸಂಬಂಧವಿಲ್ಲವೆಂದು ಶ್ರೀ ರಾಮ್ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ.

"ಶ್ರೀರಾಮ್ ಸೇನಾಗೆ ಪರಶುರಾಮರೊಂದಿಗೆ ಯಾವುದೇ ಸಂಬಂಧವಿಲ್ಲ, ಅವರು ಎಸ್ಐಟಿಯ ಮುಂದೆ ಏನು ಹೇಳಿದ್ದಾರೆಂಬುದು ನನಗೆ ತಿಳಿದಿಲ್ಲ, ಕೇವಲ ನನ್ನ ಜೊತೆ ಫೋಟೋಗಳನ್ನು ಕ್ಲಿಕ್ ಮಾಡಿಕೊಳ್ಳುವ ಮೂಲಕ ಅವರು ನಮ್ಮ ಕಾರ್ಯಕರ್ತರಾಗಿರುವುದಿಲ್ಲ ನನ್ನೊಂದಿಗೆ ಫೋಟೋಗಳನ್ನು ಕ್ಲಿಕ್ ಮಾಡುವ ಅನೇಕ ಜನರಿದ್ದಾರೆ" ಎಂದು ಮುತಾಲಿಕ್ ತಿಳಿಸಿದರು.

ಈ ಹಿಂದೆ ಪ್ರಮೋದ್ ಮುತಾಲಿಕ್ ಅವರೊಂದಿಗೆ ವಾಗ್ಮೊರೆ ಇರುವ ಪೋಟೋ ವೈರಲ್ ಆಗಿ ಭಾರಿ ವಿವಾದ   ವಿವಾದಕ್ಕೆ ಕಾರಣವಾದ ಹಿನ್ನಲೆಯಲ್ಲಿ ಈಗ ಮುತಾಲಿಕ್ ಪ್ರತಿಕ್ರಯಿಸಿದ್ದಾರೆ.

ಇನ್ನು ಗೌರಿ ಹತ್ಯೆ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಜೀ. ಪರಮೇಶ್ವರ "ಸದ್ಯ ತನಿಖೆಯು ನಡೆಯುತ್ತಿವುದರಿಂದ ನಾನು ಈಗಲೇ ಏನು ಹೇಳಲು ಇಚ್ಚಿಸುವುದಿಲ್ಲ, ನನ್ನ ಯಾವುದೇ ಹೇಳಿಕೆಗಳು ತನಿಖೆಯ ಮೇಲೆ ಪರಿಣಾಮ ಬೀರಬಾರದು  ಆದ್ದರಿಂದ ತನಿಖೆಯ ಸಂಪೂರ್ಣ ಚಾರ್ಜ್ಶೀಟ್ ಸಲ್ಲಿಸಿದ ನಂತರ ಕಾನೂನು ಪ್ರಕಾರ  ಕ್ರಮ ಕೈಗೊಳ್ಳಲಾಗುವುದು" ಎಂದು ಪರಮೇಶ್ವರ ಸುದ್ದಿಗಾರರಿಗೆ ತಿಳಿಸಿದ್ದಾರೆ. .

ಜೂನ್ 12 ರಂದು ಗೌರಿ ಲಂಕೇಶ್ ರನ್ನು ಗುಂಡಿಕ್ಕಿ ಕೊಂದಿದ್ದ ಆರೋಪಿ ವಾಗ್ಮೊರೆ ಅವರನ್ನು ವಿಶೇಷ ತನಿಖಾ ತಂಡ (ಸಿಟ್) ಬಂಧಿಸಿತ್ತು . ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವ್ಯಕ್ತಿಗಳಾದ ಕೆ. ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜಾ, ಅಮೋಲ್ ಕಾಲೆ, ಮನೋಹರ್ ಎಡ್ವೆ, ಸುಜೀತ್ ಕುಮಾರ್ ಅಲಿಯಾಸ್ ಪ್ರವೀಣ್ ಮತ್ತು ಅಮಿತ್ ದೇಗ್ವೆಕರ್ ಅವರನ್ನು ಬಂಧಿಸಲಾಗಿದೆ.

Trending News