ಮತದಾರರಿಗೆ ಭರ್ಜರಿ ಆಫರ್ : ಓಟ್ ಮಾಡಿ ಬಂದವರಿಗೆ ಊಟ ತಿಂಡಿ ಫ್ರೀ

Lokasabha Election : ಕೆಲವರು ಮತದಾನದ ಬಗ್ಗೆ ನಿರ್ಲಕ್ಷ್ಯ ಮಾಡ್ತಾರೆ.ರಜೆ ಅನ್ನೋ ಕಾರಣಕ್ಕೆ ಮತದಾನದಂದು ಟ್ರಿಪ್ ಗೆ ಹೊರಡ್ತಾರೆ. ಹೀಗಾಗಿ ಮತದಾನ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಹೋಟೆಲ್ ಮಾಲೀಕರು ಸಜ್ಜಾಗಿದ್ದಾರೆ.

Written by - Bhavya Sunil Bangera | Last Updated : Apr 24, 2024, 04:43 PM IST
  • ಲೋಕ ಸಮರಕ್ಕೆ ಇನ್ನೇನು ಒಂದೇ ದಿನ ಬಾಕಿ
  • ಮತದಾನದ ಅರಿವು ಮೂಡಿಸಲು ಭಾರಿ ಕಸರತ್ತು
  • ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸುವುದು ಪ್ರಯೊಬ್ಬ ನಾಗರೀಕನ ಜವಾಬ್ದಾರಿ.
ಮತದಾರರಿಗೆ ಭರ್ಜರಿ ಆಫರ್ : ಓಟ್ ಮಾಡಿ ಬಂದವರಿಗೆ ಊಟ ತಿಂಡಿ ಫ್ರೀ title=

ಬೆಂಗಳೂರು : ಲೋಕ ಸಮರಕ್ಕೆ ಇನ್ನೇನು ಒಂದೇ ದಿನ ಬಾಕಿ.ಹೀಗಿರುವಾಗ ಮತದಾನದ ಅರಿವು ಮೂಡಿಸಲು ಭಾರಿ ಕಸರತ್ತು ಮಾಡಲಾಗುತ್ತಿದೆ. ಒಂದು ಕಡೆ ಕಾಲ್ನಡಿಗೆ ಜಾಥಾ  ಮಾಡುತ್ತಿದ್ದರೆ, ಮತ್ತೊಂದೆಡೆ, ಹೋಟೆಲ್ ಮಾಲೀಕರಿಂದ  ಮತದಾರರಿಗಾಗಿ ಆಫರ್ ಮೇಲೆ ಆಫರ್ ಸಿಗುತ್ತಿದೆ. 

ಲೋಕಸಭಾ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸುವುದು ಪ್ರಯೊಬ್ಬ ನಾಗರೀಕನ ಜವಾಬ್ದಾರಿ.ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಮತದಾನವೆ ಪ್ರಜಾಪ್ರಭುತ್ವ ಧ್ವನಿ. ಆದ್ರೆ ಕೆಲವರು ಮತದಾನದ ಬಗ್ಗೆ ನಿರ್ಲಕ್ಷ್ಯ ಮಾಡ್ತಾರೆ.ರಜೆ ಅನ್ನೋ ಕಾರಣಕ್ಕೆ ಮತದಾನದಂದು ಟ್ರಿಪ್ ಗೆ ಹೊರಡ್ತಾರೆ. ಹೀಗಾಗಿ ಮತದಾನ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ  ಹೋಟೆಲ್ ಮಾಲೀಕರು ಸಜ್ಜಾಗಿದ್ದಾರೆ.

ಇದನ್ನೂ ಓದಿ : Karaga Festival: ಐತಿಹಾಸ ಕ್ಷಣಕ್ಕೆ ಸಾಕ್ಷಿಯಾದ ರಾಜಧಾನಿಯ ಅದ್ದೂರಿ ಕರಗ..!

ಹೌದು, ಮತದಾನ ಒಂದು ಜವಾಬ್ದಾರಿಯುತ ಹೊಣೆಗಾರಿಕೆ. ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆ ಆಗಲೆಂದು ಹಲವು ವಿಧಾನದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನ ಇದ್ದು, ಅದರ ಜೊತೆಗೆ ವಿಕೆಂಡ್ ಹಿನ್ನೆಲೆ ಸಾಲು ಸಾಲು ರಜೆಗಳು ಸಿಗುವ ಕಾರಣ ಟ್ರಿಪ್‌ಗೆ ಹೋಗುವ ಪ್ಲಾನ್ ರೂಪಿಸುತ್ತಾರೆ.ಆದರೆ ಇದನ್ನು ತಡೆಯುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ದೀಗ ಹೋಟೆಲ್ ಮಾಲೀಕರು ಓಟ್ ಮಾಡಿದವರಿಗೆ ಉಚಿತ ಊಟ ಸೇವೆ ನೀಡಲು ನಿಸರ್ಗ ಹೊಟೆಲ್ ಮಾಲೀಕರು ಮುಂದಾಗಿದ್ದಾರೆ.

ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಹೋಟೆಲ್ ಮತದಾರರಿಗೆ ಬಿಗ್ ಆಫರ್ ನೀಡುತ್ತಿದೆ. ನಿಸರ್ಗ ಹೊಟೆಲ್ ಅಲ್ಲದೆ ರಾಜ್ಯದ ಇತರೆ ಹೊಟೆಲ್ ಗಳೂ ಈ  ಅವಕಾಶ ನೀಡುತ್ತಿದೆ. ಬಹುತೇಕ ಹೋಟೆಲ್ ಗಳಲ್ಲಿ 10% ಆಫರ್ ಕೂಡಾ ಇದೆಯಂತೆ. ಓಟ್ ಮಾಡಿ ಇದು ನಿಮ್ಮ ಕರ್ತವ್ಯ ಎನ್ನುತ್ತಿರುವ  ಹೋಟೆಲ್ ಮಾಲೀಕರು ಪೋಸ್ಟರ್ ಮೂಲಕ ಅರಿವು ಮೂಡಿಸ್ತಿದ್ದಾರೆ.

ಇದನ್ನೂ ಓದಿ : ಆಮೀಷಕ್ಕೆ ಒಳಗಾಗದೆ ಸ್ವಯಿಚ್ಛೆಯಿಂದ ಎಲ್ಲರೂ ಮತ ಚಲಾಯಿಸಿ: ತುಷಾರ್ ಗಿರಿ ನಾಥ್

ಒಟ್ಟಿನಲ್ಲಿ ಮತದಾನ ಅನ್ನೋದು ಪ್ರತಿಯೊಬ್ಬ ಪ್ರಜೆಯ ಹಕ್ಕು. ಹೀಗಾಗಿ ಮತದಾನದ ಕುರಿತು ವಿಭಿನ್ನವಾಗಿ ಅರಿವು ಮೂಡಿಸುತ್ತಿರುವ ಹೋಟೆಲ್ ಮಾಲೀಕರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News