VIDEO: ರಾಮನಗರ ಮತಗಟ್ಟೆಗೆ ಬಂದ ಕೊಳಕುಮಂಡಲ ಹಾವು!!!

ರಾಮನಗರ ತಾಲೂಕಿನ ಮೊಟ್ಟೆದೊಡ್ಡಿ ಗ್ರಾಮದಲ್ಲಿನ ಮತಗಟ್ಟೆಗೆಯೊಳಗೆ ಇದ್ದಕ್ಕಿದ್ದಂತೆ ಬಂದ ಕೊಳಕು ಮಂಡಲ ಹಾವು ಜನರಲ್ಲಿ ಆತಂಕ ಸೃಷ್ಟಿಸಿತ್ತು.

Last Updated : Nov 3, 2018, 10:25 AM IST
VIDEO: ರಾಮನಗರ ಮತಗಟ್ಟೆಗೆ ಬಂದ ಕೊಳಕುಮಂಡಲ ಹಾವು!!! title=

ರಾಮನಗರ: ರಾಮನಗರ ವಿಧಾನಸಭೆ ಉಪಚುನಾವಣೆಗೆ ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಆದರೆ ಇದೇ ಸಂದರ್ಭದಲ್ಲಿ ಕೊಳಕು ಮಂಡಲ ಹಾವೊಂದು ಮತಗಟ್ಟೆಯೊಂದಕ್ಕೆ ಆಗಮಿಸಿ ಕೆಲಕಾಲ ಆತಂಕ ಸೃಷ್ಟಿಮಾಡಿತು.

ರಾಮನಗರ ತಾಲೂಕಿನ ಮೊಟ್ಟೆದೊಡ್ಡಿ ಗ್ರಾಮದಲ್ಲಿನ ಮತಗಟ್ಟೆಗೆಯೊಳಗೆ ಇದ್ದಕ್ಕಿದ್ದಂತೆ ಬಂದ ಕೊಳಕು ಮಂಡಲ ಹಾವು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಇದರಿಂದಾಗಿ ಮತದಾನ ಕೆಲಕಾಲ ಸ್ಥಗಿತಗೊಂಡಿತ್ತು. ಆದರೆ ಕೆಲ ಸಮಯದ ನಂತರ ಅಲ್ಲಿದ್ದ ಸ್ಥಳಿಯರು ಆ ಹಾವನ್ನು ಹಿಡಿದುಹೊರಬಿಟ್ಟರು. ಬಳಿಕ ಮತದಾನ ಶಾಂತವಾಗಿ ಮುಂದುವರೆದಿದೆ.

ರಾಮನಗರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಕಣದಿಂದ ಹಿಂದೆ ಸರಿದಿರುವುದರಿಂದ ಪಕ್ಷೇತರ ಅಭ್ಯರ್ಥಿಗಳಿದ್ದರೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ಗೆಲುವು ನಿರಾಯಾಸವಾಗಲಿದೆ ಎನ್ನಲಾಗುತ್ತಿದೆ. ರಾಮನಗರದಲ್ಲಿ ಒಟ್ಟು 1502 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 

Trending News