ಸಹಜ ಬೇಸಾಯಕ್ಕಿದೆ ಇಲ್ಲೊಂದು 6 ತಿಂಗಳ ಕೋರ್ಸ್...!

Last Updated : Mar 5, 2021, 10:58 AM IST
  • ಆಧುನಿಕ ಕೃಷಿಗೆ ಹೋಲಿಕೆ ಮಾಡಿ ನಾವು ಸಹಜ ಕೃಷಿಯನ್ನು ನೋಡುವುದಾದರೆ ಇದು ಮನುಷ್ಯನ ಬೌಧಿಕ ಮತ್ತು ಆಸಕ್ತಿಯಿಂದ ಸಂಪೂರ್ಣವಾಗಿ ನಿಯಂತ್ರಿಸುವ ಮತ್ತು ಹಿಡಿತ ಸಾಧಿಸುವ ಕೃಷಿಯಾಗಿದೆ.
  • ಸಹಜ ಕೃಷಿಯ ಮೊದಲ ಹೆಜ್ಜೆ ಅದರ ಕುರಿತು ನಾವು ಗಳಿಸುವ ಅರಿವು ಮತ್ತು ದೂರದೃಷ್ಟಿ, ನಂತರ ಅದರ ಸೂಕ್ತ ಅಳವಡಿಕೆ, ಅಮೇಲೆ ನಮಗೆ ಸಾಕಾಗುವಷ್ಟನ್ನು ಪಕೃತಿ ನೀಡುತ್ತಾ ಹೋಗುತ್ತದೆ.
  • ಕೃಷಿಯನ್ನು ಯಾವುದೇ ದೇಶದಲ್ಲಿ ಒಂದು ಉನ್ನತ ವೃತ್ತಿಯಾಗಿ ಮತ್ತು ಆಹಾರ ಉತ್ಪಾದಕ ರೈತರನ್ನು ದೇವರೆಂದು ಕರೆಯುತ್ತಾರೆ.
ಸಹಜ ಬೇಸಾಯಕ್ಕಿದೆ ಇಲ್ಲೊಂದು 6 ತಿಂಗಳ ಕೋರ್ಸ್...! title=
ಸಾಂದರ್ಭಿಕ ಚಿತ್ರ

ಆಧುನಿಕ ಕೃಷಿಗೆ ಹೋಲಿಕೆ ಮಾಡಿ ನಾವು ಸಹಜ ಕೃಷಿಯನ್ನು ನೋಡುವುದಾದರೆ ಇದು ಮನುಷ್ಯನ ಬೌಧಿಕ ಮತ್ತು ಆಸಕ್ತಿಯಿಂದ ಸಂಪೂರ್ಣವಾಗಿ ನಿಯಂತ್ರಿಸುವ ಮತ್ತು ಹಿಡಿತ ಸಾಧಿಸುವ ಕೃಷಿಯಾಗಿದೆ.

ಇದು ಒಂದು ಕೃಷಿ ವಿಜ್ಞಾನ.ಸ್ಥಳೀಯ ಜನರಿಗೆ ಪ್ರಕೃತಿಯಲ್ಲಿ ನಮಗೆ ಬೇಕಾದ್ದನ್ನು ನೀಡುವ ವಿಶಿಷ್ಟ ಗುಣವಿದೆ ಎಂಬುದು ಚನ್ನಾಗಿ ಗೊತ್ತಿತ್ತು. ಪ್ರಕೃತಿ ಜೊತೆ ಸಹ ಜೀವನ ನಡೆಸುತ್ತಾ ಅವರು ಸ್ವರ್ಗ ಸುಖವನ್ನು ಅನುಭವಿಸುತ್ತಿದ್ದರು. ಸಾವಿರಾರು ವರ್ಷಗಳಿಂದ ತಲೆಮಾರಿನಿಂದ ತಲೆಮಾರಿಗೆ ಜೀವಿವೈವಿಧ್ಯತೆ, ಹೇರಳವಾದ ಸಂಪನ್ಮೂಲ, ಸಾಂಪ್ರದಾಯಿಕ ಜ್ಞಾನ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳದೆ ವರ್ಗಾವಣೆಯಾಗುತ್ತಾ ಬಂದಿದೆ.

ಇದನ್ನೂ ಓದಿ: ಜೈವಿಕ ಕೃಷಿ ಪದ್ಧತಿ ಉತ್ತೇಜಿಸಲು ವಿನಯ್ ಗುರೂಜಿ ಮನವಿ

ಸಹಜ ಕೃಷಿಯೆಂದರೆ ಬೇರೇನು ಅಲ್ಲ ನಮ್ಮ ಪೂರ್ವಜರು ನಡೆಸುಕೊಂಡು ಬಂದ ಕೃಷಿಯಾಗಿದೆ ಮತ್ತು ಅದು ದಿನೇದಿನೇ ಸುದಾರಣೆಗೊಳ್ಳುವ ಬಗ್ಗೆ ತಿಳಿಸುವ ಕೃಷಿಯಾಗಿದೆ.ಸಹಜ ಕೃಷಿಯ ಮೊದಲ ಹೆಜ್ಜೆ ಅದರ ಕುರಿತು ನಾವು ಗಳಿಸುವ ಅರಿವು ಮತ್ತು ದೂರದೃಷ್ಟಿ, ನಂತರ ಅದರ ಸೂಕ್ತ ಅಳವಡಿಕೆ, ಅಮೇಲೆ ನಮಗೆ ಸಾಕಾಗುವಷ್ಟನ್ನು ಪಕೃತಿ ನೀಡುತ್ತಾ ಹೋಗುತ್ತದೆ.ಕೃಷಿಯನ್ನು ಯಾವುದೇ ದೇಶದಲ್ಲಿ ಒಂದು ಉನ್ನತ ವೃತ್ತಿಯಾಗಿ ಮತ್ತು ಆಹಾರ ಉತ್ಪಾದಕ ರೈತರನ್ನು ದೇವರೆಂದು ಕರೆಯುತ್ತಾರೆ.

ಸರ್ವ ಜೀವಿಗಳ ಸೃಷ್ಠಿಯ ಶಕ್ತಿಹೊಂದಿರುವ ಭೂತಾಯಿ ಎಲ್ಲಾ ವ್ಯವಸ್ಥೆಗಳಲ್ಲಿ ಸರ್ವೋನ್ನತವಾದದ್ದು. ಮನುಷ್ಯ ಇತ್ತೀಚಿನ ದಿನಗಳಲ್ಲಿ ನಾನೇ ಶ್ರೇಷ್ಠನೆಂದು ಬೀಗುತ್ತಿದ್ದಾನೆ, ಅತಿಬೇಗನೆ ಫಲ ಪಡೆಯಲು ಕೆಟ್ಟ ಕಾರ್ಯಯೋಜನೆಗಳ ಮೂಲಕ ಭೂತಾಯಿಯ ಶೋಷಣೆಮಾಡುತ್ತಿದ್ದಾನೆ. ಕಳೆದ 40-50 ವರ್ಷಗಳಿಂದ ನೈಸರ್ಗಿಕ ಸಂಪನ್ಮೂಲಗಳು ಬರಿದಾಗುತ್ತಾ ಸಾಗಿವೆ.

ಕೃಷಿಯನ್ನು ತೀವ್ರಗೊಳಿಸಲು ರಾಸಾಯನಿಕ ಗೊಬ್ಬರ, ಕೀಟನಾಶಕ,ಶಿಲೀಂದ್ರನಾಶಕ, ರೋಗನಾಶಕ, ಕಳೆನಾಶಕ, ಭಾರಯುತ ಯಂತ್ರ ಹಾಗೂ ಉಪಕರಣಗಳ ಬಳಕೆಯಿಂದಾಗಿ ಅತಿದೊಡ್ಡ ತುಂಬಿಕೊಡಲಾಗದಷ್ಟು ನಷ್ಟ ಭೂತಾಯಿಯ ಮೇಲಾಗಿದೆ.ಇಂದು ನಾವು ತುಂಬಾ ಚನ್ನಾಗಿ ಕಾಣುವ ತರಕಾರಿ ಹಣ್ಣುಗಳನ್ನು ನೋಡುತ್ತಿದ್ದೇವೆ. ಇವೆಲ್ಲವು ಪಾಲಿಹೌಸ್/ಗ್ರೀನ್ ಹೌಸ್ ಗಳಿಂದ ಬೆಳೆದು ತಂದವುಗಳಾಗಿರುತ್ತವೆ. ಇಂದು ಬಹುಹಂತದ ಕೃಷಿ, ಹೈಡ್ರೋಫೋನಿಕ್ಸ್, ನ್ಯೂಟ್ರಿಯಂಟ್ ಫಿಲ್ಮ್ ಟೆಕ್ನಾಲಜಿ ಕೃಷಿಗಳು ಬಹಳ ಪ್ರಖ್ಯಾತಿ ಪಡೆದಿವೆ. ಜನರೆಲ್ಲ ಮಣ್ಣಿನ ಸಹಾಯವಿಲ್ಲದೆ, ಸೂರ್ಯನ ಕಿರಣಗಳ ಸೋಸುವಿಕೆಯಿಂದ ಬೆಳೆದ ತರಕಾರಿಗಳು ಶುದ್ಧ ಮತ್ತು ತಾಜಾ ಎಂದು ತಿಳಿದಿದ್ದಾರೆ, ಆದರೆ ಇದು ಶುದ್ಧ ತಪ್ಪು ತಿಳುವಳಿಕೆ.

ಇದನ್ನೂ ಓದಿ: ಸುಧಾರಿತ ಬೇಸಾಯ ಕ್ರಮದ ಮೂಲಕ ಆಲೂಗಡ್ಡೆ ಬೆಳೆಯನ್ನು ಹೀಗೆ ಬೆಳೆಯಿರಿ..!

ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ಸಹಾಯ ಮತ್ತು ವಿಘಟಿತ ಸಾವಯವ ಅಂಶದ ಸಹಾಯವಿಲ್ಲದೆ ಬೆಳೆದ ಆಹಾರ ಎಂದಿಗೂ ಶುದ್ಧ ಮತ್ತು ತಾಜಾತನವನ್ನು ಹೊಂದಿರಲು ಸಾಧ್ಯವಿಲ್ಲ.ಇಂದು ಅತಿಯಾದ ಆಹಾರ ಉತ್ಫಾದನೆಯನ್ನು ಗಮನಿಸುತ್ತಿದ್ದೇವೆ ಇದೆಲ್ಲವೂ ಆಧುನಿಕ ಯಂತ್ರೋಪಕರಣ ಮತ್ತು ರಾಸಾಯನಿಕ ಕೃಷಿಯಿಂದ ಸಾಧ್ಯವಾಗಿದೆ, ಆದರೆ ಇದು ಸುಸ್ಥಿರ ಕೃಷಿಯಲ್ಲ, ಮಣ್ಣನ್ನು ಹಾಳುಮಾಡುವ ಮತ್ತು ಅನೇಕ ಗ್ರಾಮೀಣ ಯುವಜನರ ಕೆಲಸವನ್ನು ಕಿತ್ತುಕೊಂಡು ಅವರು ನಗರಗಳಿಗೆ ವಲಸೆ ಹೋಗುವಂತೆ ಮಾಡುವ ಕೃಷಿ ಖಂಡಿತವಾಗಿಯೂ ಸುಸ್ಥಿರ ಕೃಷಿಯಲ್ಲ.

ಇದರಿಂದ ನಮ್ಮ ಭವಿಷ್ಯಕ್ಕೆ ದೊಡ್ಡ ಗಂಡಾಂತರವೇ ಬಂದೊದಗಿದೆ.ಸಹಜ ಬೇಸಾಯ ಶಾಲೆ ಬಹುಮುಖ ಚಿಂತನೆಯೊಂದಿಗೆ ಸ್ವಾವಲಂಭಿ ಮತ್ತು ಸುಸ್ಥಿರ ಗ್ರಾಮೀಣ ಆರ್ಥಿಕತೆಯನ್ನು ಸಾಧಿಸಲು ಹೊರಟಿದೆ. ಸ್ವಾವಲಂಭಿ ಮತ್ತು ಸುಸ್ಥಿರ ಕೃಷಿಗಾಗಿ ಸಹಜ ಬೇಸಾಯ ಶಾಲೆಯು ತುಮಕೂರು ವಿಜ್ಞಾನ ಕೇಂದ್ರ, ಭೂಶಕ್ತಿ ಕೇಂದ್ರ, ಅರೋವೇದ ಮತ್ತು ಸಾಕ್ಷಿ ಸಂಸ್ಥೆಗಳ ಸಹಯೋಗದೊಂದಿಗೆ ಪರಿಣಾಮಕಾರಿ ತರಬೇತಿ ಕೊರ್ಸ್ ನ್ನು ನಡೆಸುತ್ತಾ ಬರುತ್ತಿದೆ. ಇದು ಒಂದು ಅನೌಪಚಾರಿಕ ಹಾಗೂ ತರಗತಿ ಒಳಗೆ ಮತ್ತು ಕೃಷಿ ಭೂಮಿ ಜೊತೆಗೆ ನಡೆಯುವ ಕೋರ್ಸ್ ಆಗಿದೆ.

ಇದನ್ನೂ ಓದಿ: ಸಾವಯವ ಕೃಷಿ ಮೂಲಕ ಇಡೀ ರಾಜ್ಯದ ಗಮನ ಸೆಳೆದ ಈ ಗ್ರಾಮ

ಸ್ಥಳ:- ಗಾಂಧೀ ಸಹಜ ಬೇಸಾಯ ಆಶ್ರಮ,
ಕೋರ್ಸ್ ನಡೆಯುವ ದಿನಗಳು:- 24 ದಿನಗಳು (ತಿಂಗಳಿಗೆ 4 ದಿನಗಳಂತೆ/ 2 ವಾರಾಂತ್ಯ ಶನಿವಾರ & ಭಾನುವಾರ)

ಕೋರ್ಸ್ ನ ಪಠ್ಯಕ್ರಮ

ರಾಸಾಯನಿಕ ಕೃಷಿ, ಸಾವಯವ ಕೃಷಿ ಮತ್ತು ಸಹಜ ಕೃಷಿಗಳ ನಡುವಿನ ವ್ಯತ್ಯಾಸ.ಶಾಶ್ವತ ಕೃಷಿ, ಜೀವಚೈತನ್ಯ ಕೃಷಿ, ಪಾರಂಪರಿಕ ಕೃಷಿ, ವೇದಕಾಲದ ಕೃಷಿ, ಅರಣ್ಯ ಕೃಷಿ, ಜೆಡ್.ಬಿ.ಎನ್.ಎಫ್ ಮತ್ತು ಎಸ್.ಪಿ.ಎನ್.ಎಫ್ ಕುರಿತು ಕಿರು ಪರಿಚಯ.

ಸಹಜ ಕೃಷಿಯ ತತ್ವಸಿದ್ಧಾಂತಗಳು.

ಮಣ್ಣು

ಮಣ್ಣಿನ ವಿಂಗಡಣೆ, ಕರ್ನಾಟಕದಲ್ಲಿ ಮಣ್ಣಿನ ವಿಧಗಳು, ಮಣ್ಣಿನ ಸಂರಚನೆ, ಮಣ್ಣಿನ ವಿನ್ಯಾಸ, ಮಣ್ಣಿನಲ್ಲಿನ ಗಾಳಿ ಮತ್ತು ನೀರು ಸಂಭಂದ, ನೀರನ್ನು ಹಿಡಿದಿಡುವ ಸಾಮರ್ಥ್ಯ, ಫೀಲ್ಢ್ ಸಾಮರ್ಥ್ಯ, ಸೊರಗುವ ಮತ್ತು ಅತಿತೋಯ್ದ ಘಟ್ಟ, ಮಣ್ಣಿನ ಚಲನಾತ್ಮಕತೆ, ಸಮಗ್ರ ವಿಜ್ಞಾನವಾಗಿ ಮಣ್ಣಿನ ಆರೋಗ್ಯ.

ನೀರು

ಮಳೆಪ್ರಮಾಣ, ನಮ್ಮ ಜಮೀನಿನಲ್ಲಿ ಬೀಳುವ ಮಳೆ ನೀರನ್ನು ಅಳತೆ ಮಾಡುವ ವಿಧಾನ, ಜಮೀನಿನ ಪೂರ್ತಿ ಮಳೆ ನೀರು ಸಂಗ್ರಹಣೆ/ಕೊಯ್ಲು ಮಾಡುವ ವಿಧಾನ, ನಿರಾವರಿಗೆ ಸವಾಲಾಗಿ ಮಣ್ಣಿನ ತೇವಾಂಶ, ವಾತಾವರಣದಿಂದ ಸಸ್ಯ ಹೇಗೆ ತೇವಾಂಶ ಹೀರಿಕೊಳ್ಳುತ್ತದೆ. ಸಸ್ಯ ಜೀವನ ಚಕ್ರದಲ್ಲಿ ನೀರಿನ ಮಹತ್ವ, ಗ್ರಾಮದಲ್ಲಿ ಜಲಾನಯನ ಅಭಿವೃದ್ಧಿ, ಕೃಷಿಗೆ ಮಾರಕವಾಗಿ ಹೂಳೆತ್ತುವಿಕೆ. ಕೃಷಿಗೆ ಶಾಪ ಮತ್ತು ಮಿಥ್ಯೆಯಾಗಿ ಕೊಳವೆಭಾವಿ,  ಮುಖ್ಯ ವಾಣಿಜ್ಯ ಬೆಳೆಗಳಿಗೆ ವೆಚ್ಚವಾಗುವ ವರ್ಚ್ಯುಯಲ್ ನೀರನ್ನು ಅಳಯುವುದು ಮತ್ತು ನಿಯಂತ್ರಣ, ವಲಯವಾರು ಕೃಷಿಪದ್ಧತಿ, ಕೃಷಿ ತಂತ್ರಜ್ಞಾನದ ಕಾರ್ಪೋರೇಟೀಕರಣ, ನೀರಿನ ಗಣಿಗಾರಿಕೆ, ಕೃಷಿ ಭೂಮಿಯಲ್ಲಿ  ನೀರಾವಿ ಅಳತೆ. ಮರುಭೂಮಿಕರಣ.

ಸಹಜ ಕೃಷಿಯ ಮೂಲ ತತ್ವಗಳು:

ಹಸಿರು ಮತ್ತು ಕೃಷಿ ತ್ಯಾಜ್ಯ ಹೊದಿಕೆ, ಬಹು ಬೆಳೆ ಪದ್ಧತಿ, ಮಣ್ಣಿನಲ್ಲಿನ ಜೀವಾಣುಗಳ ವೈವಿಧ್ಯತೆ, ಸೂಕ್ಷ್ಮ ಜೀವಾಣುಗಳ ಒಕ್ಕೋಟ, ತ್ಯಾಜ್ಯ ವಿಘಟಕ, ಪಂಚಗವ್ಯ, ಕಾಡಿನ ಜೀವಾಣುಗಳ ಸಂಗ್ರಹಣೆ, ಜೀವಾಮೃತ, ಜೀವ ಚೈತನ್ಯ ಕೃಷಿ, ಕುನಾಪಜಲ, ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿ ದೇಸಿ ಹಸು/ಕುರಿ/ಮೇಕೆಗಳ ಮಹತ್ವ, ದೇಸಿ ಬೀಜ ಬ್ಯಾಂಕ್, ನಮ್ಮ ತೋಟದ ಶೇ 10 ಭೂಮಿ ಕಾಡುಮರ, ಹೂ ಮತ್ತು ವೈಧ್ಯಕೀಯ ಸಸ್ಯಗಳಿಂದ ಕೂಡಿರಬೇಕು, ವಿಕೇಂದ್ರಕೃತ ಮಾರುಕಟ್ಟೆ.

ಬೆಳೆ ವ್ಯವಸ್ಥೆ:

ಬೆಳೆ ನಿಯತಾವರ್ತತೆ, ಅಂತರ್ ಬೆಳೆ, ರಕ್ಷಕ ಬೆಳೆ, ಸಹಚರ ಬೆಳೆ, ಭೂ ಬಳಕೆ ಬೆಳೆ, ರಿಲೇ ಬೆಳೆ.

ಮಣ್ಣಿನ ವಿಧ ಮತ್ತು ವಾತಾವರಣ ಸ್ಥಿತಿಗತಿಗೆ ಹೊಂದಿಕೊಂಡಂತೆ ಮಂಡಲ ಪದ್ಧತಿ.
ಅತಿಯಾದ ನೀರಿರುವ ಪ್ರದೇಶಕ್ಕೆ ಮಂಡಲ, ಕಡಿಮೆ ನೀರಿರುವ ಪ್ರದೇಶಕ್ಕೆ ಮಂಡಲ, ಅರಣ್ಯ ಕೃಷಿ ಮಂಡಲ, ತೋಟಗಾರಿಕೆ-ಕೃಷಿ-ಮೇವಿನ ಬೆಳೆ ಮಂಡಲ,

ಮಳೆಯಾಶ್ರಿತ ಕೃಷಿ:

ಮಳೆಯಾಶ್ರಿತ ಕೃಷಿಗಿರುವ ಸವಾಲುಗಳು, ಮರುಭೂಮಿಕರಣಗೊಳ್ಳುತ್ತಿರುವ ಒಣಪ್ರದೇಶ, ಮಳೆ ಬೀಳುವ ಪ್ರಮಾಣ ಮತ್ತು ಹವಾಮಾನ ವೈಪರೀತ್ಯ, ಸಣ್ಣ ಮತ್ತು ಅತಿಸಣ್ಣ ಭೂ ಹಿಡುವಳಿದಾರರು ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವ ಮತ್ತು ನಿಯಂತ್ರಿಸುವ ಬಗೆ, ಮಳೆ ನೀರು ಕೋಯ್ಲು ವಿಧಾನ, ಮಳೆಯಾಶ್ರಿತ ಕೃಷಿಗೆ ಮಂಡಲ, ಮಳೆಯಾಶ್ರಿತ ಕೃಷಿಯಲ್ಲಿ ಸುಸ್ಥಿರತೆ ಮತ್ತು ಜಾನುವಾರು ಸಾಕಾಣಿಕೆ.

ಸೂರ್ಯ ಕಿರಣ ಮತ್ತು ಅದರ ಮಹತ್ವ:

ಒಂದು ನಿರ್ಧಿಷ್ಟ ಪ್ರದೇಶದಲ್ಲಿ ಸೂರ್ಯಕಿರಣದ ಅಳತೆ, ಸೂರ್ಯಕಿರಣ ಆಧರಿಸಿ ಬಹುಬೆಳೆ ಪದ್ಧತಿ, ಗರಿಷ್ಠ ಇಳುವರಿ ಪಡೆಯಲು ಸೂರ್ಯಕಿರಣ ಕೊಯ್ಲು, ಕಡಿಮೆ ನೀರಿರುವ ಪ್ರದೇಶವು ನೀರಾವರಿ ಪ್ರದೇಶಕ್ಕಿಂತ ವರವಿದ್ದಂತೆ.

ಸಸ್ಯ ಪ್ರಸರಣ ಪದ್ಧತಿ:

ಬೀಜ ಪ್ರಸರಣೆ, ಅಂಗಾಂಶ  ಸಂಸ್ಕೃತಿ, ಕಸಿ, ಲೇಯರಿಂಗ್, ಬಡ್ಡಿಂಗ್, ಬೀಜ ತಳಿಗಳು, ಹೈಬ್ರೀಡ್ ಬೀಜ, ಜಿ.ಎಂ.ಒ

ಸಸ್ಯ ಪೋಷಕಾಂಶ:

ಅವಶ್ಯ ಸಸ್ಯ ಪೋಷಕಾಂಶ, ಸಸ್ಯ ಬೆಳವಣಿಗೆಗೆ ಬೇಕಾದ ಇಂಗಾಲ, ಜಲಜನಕ ಮತ್ತು ಸಾರಜನಕಗಳ ಪ್ರತಿಶತ, ವಿವಿಧ ಬೆಳೆಗಳಲ್ಲಿ ಗರಿಷ್ಠ ಇಳುವರಿ ಪಡೆಯಲು ಯಾವರೀತಿ ಉಪಚರಿಸಬೇಕು? ಮತ್ತು ಮನುಷ್ಯನ ಕನಿಷ್ಠ ಕೆಲಸ, ಸಂಪೂರ್ಣ ಮಣ್ಣಿನ ಪೋಷಕಾಂಶ, ಸಸ್ಯ ಆರೋಗ್ಯ- ಮನುಷ್ಯನ ಆರೋಗ್ಯ.

ಯಾವುದೇ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯುವುದು ಹೇಗೆ?

ಸಸ್ಯ ಎಲೆ ಸೂಚಿ, ಸಸ್ಯ ಅಂತರ, ಕನಿಷ್ಠ ಮತ್ತು ಸ್ಥಿರ ತೇವಾಂಶ, ಸ್ಥಿರ ತಾಪಮಾನ, ಮಣ್ಣಿನ ಸೂಚಿ

ಕೀಟ ಮತ್ತು ರೋಗ.

ಕೀಟ ಮತ್ತು ಭಕ್ಷಕ, ಕೀಟ ನಿಯಂತ್ರಣ ಪಧ್ಧತಿ, ಕೀಟ ಮತ್ತು ರೋಗದ ಆರಂಭಿಕ ಮತ್ತು ಅಪಾಯಕಾರಿ ಹಂತಗಳು, ಕೀಟ ಮತ್ತು ರೋಗ ನಿವಾರಿಸಲು ಸಹಜ ಕೃಷಿ ಒಂದೇ ಮಾರ್ಗ, ಕರ್ನಾಟಕದ ಮುಖ್ಯ ಬೆಳೆಗೆ ಬರುವ ರೋಗ ಮತ್ತು ಕೀಟಗಳ ಬಗ್ಗೆ ಚರ್ಚೆ.

ಗುಡಿ ಕೈಗಾರಿಕೆಗಳ ಕುರಿತು ಒಂದು ಅಧ್ಯಯನ.

ಜೇನು ಸಾಕಾಣಿಕ, ಪಶು ಸಂಗೋಪನೆ, ಮೀನುಗಾರಿಕೆ, ದೇಸಿ ಪದ್ಧತಿಯಲ್ಲಿ ಗೃಹ ಆಹಾರ ಸಸ್ಕರಣೆ, ಅಣಬೆ ಬೇಸಾಯ, ತುಪ್ಪ ತಯಾರಿಸುವ ವಿಧಾನ.

ಕಾರ್ಪೋರೇಟೀಕರಣಗೊಳ್ಳುತ್ತಿರುವ ಭಾರತದ ಕೃಷಿ, ಬೀಜಗಳು, ಅನ್ವೇಶಣೆ ಹೆಸರಲ್ಲಿ ಸ್ಥಳೀಯ ಜ್ಞಾನ, ವ್ಯಾಪಾರಿ ಉದಾರಿಕರಣ ಮತ್ತು ಮುಕ್ತ ವ್ಯಾಪಾರ ಒಪ್ಪಂದ, ಹವಾಮಾನ ಚಾಲಕಿ ಅಥವಾ ಕಾರ್ಪೋರೇಟ್ ಚಾಲಕಿ ಕೃಷಿ ಮತ್ತು ಇದರ ಪರಿಣಾಮ, ಕೃಷಿಯಲ್ಲಿ ಮಹಿಳೆಯರು, ಮಹಿಳಾ ಒಕ್ಕೂಟ ಕೃಷಿ, ಮಹಿಳೆ ಮತ್ತು ಲಿಂಗ ಸಮಾನತೆ, ಸುಸ್ಥಿತ ಕೃಷಿಗೆ ಸವಾಲಾಗಿ ಯಶಸ್ವಿ ಕೃಷಿ, ಒಪ್ಪಂದ ಕೃಷಿ ಮತ್ತು ಸಣ್ಣ ಹಿಡುವಳಿ ಮೇಳೆ ಅದರ ಪರಿಣಾಮ, ಡಬ್ಲು.ಟಿ.ಒ ಮತ್ತು ರೈತ ಮತ್ತು ಕೃಷಿ ಮೇಲೆ ಅದರ  ಪರಿಣಾಮ.

ಇದನ್ನೂ ಓದಿ: ಸಾವಯವ ಕೃಷಿಗೆ ಆದ್ಯತೆ ನೀಡಲು ಡಿಸಿಎಂ ಗೋವಿಂದ ಎಂ ಕಾರಜೋಳ ಕರೆ

ಕೃಷಿ ಭೂಮಿಯಲ್ಲಿ ನಡೆಸುವ ಪ್ರಯೋಗಗಳು

ಬೇಳೆ ಮತ್ತು ಧಾನ್ಯಗಳ ಬೀಜದುಂಡೆ ಮಾಡುವ ವಿಧಾನ, ಕಸಿ ಪದ್ಧತಿ, ಗಾಳಿ ಲೇಯರಿಂಗ್, ಬಡ್ಡಿಂಗ್, ಕಾಂಪೋಸ್ಟ್ ಮಾಡುವುದು ಮತ್ತು ಅದರ ಪರಿಣಾಮ, ಸಸ್ಯ ನೆಡುವ ವಿಧಾನಗಳು, ಕ್ರಸೆಂಟ್ ಬದು, ಮಡಿಕೆ ನಿರಾವರಿ, ಟ್ರೆಂಚ್ ವ್ಯವಸ್ಥೆ,  ಅಗ್ನಿಹೋತ್ರ ಮತ್ತು ಅದರ ಮಹತ್ವ, ಜೀವ ವೈವಿಧ್ಯತಾ ದಾಖಲೀಕರಣ, ಕೀಟ ನಿಯಂತ್ರಿಸಲು ಹೊಗೆ ಹಾಕುವಿಕೆ, ಸಹಜ ಕೃಷಿ ಒಳಸುರಿಗಳಾದ ಕುನಾಪಜಲ, ಪಂಚಗವ್ಯ, ಮೀನಿನೂಟ, ಕಾಂಫೋಸ್ಟ್, ಜೀವಚೈತನ್ಯ 500-501, ಮಾದರಿ ಕೈತೋಟ ಇತ್ಯಾಧಿಗಳ ತಯಾರಿ ಮತ್ತು ಮಾಡುವಿಕೆ.

ಚರ್ಚೆ ಮತ್ತು ಸಂವಾದ

ಭಾರತದ ಕೃಷಿಯಲ್ಲಿ ದೇಸಿ ಬೀಜದ ಮಹತ್ವ, ಗ್ರಾಮೀಣ ಭಾಗದಲ್ಲಿ ಕೋಯ್ಲೋತ್ತರ ಸಂಗ್ರಹಣೆ, ಅಪಾಯಕಾರಿ ಕಳೆನಾಶಕ, ಮಿಥ್ಯೆಯಾಗಿ ಹಸಿರುಕ್ರಾಂತಿ, ಜಲಾನಯನ ಇತ್ಯಾಧಿಗಳ ಕುರಿತು ಚರ್ಚೆ ಸಂವಾದ.

ಸೂಚನೆ:-
ಪ್ರತಿ ವಾರವೂ ಕೊಡುವ ನಿಯೋಜಿತ ಕಾರ್ಯ ಕಡ್ಡಾಯವಾಗಿ ಮಾಡಬೇಕು.
ಕೃಷಿ ಸಂಭಂದಿ ವಿಷಯಗಳ ಕುರಿತು ಚರ್ಚೆ ಸಂವಾದ ಮಾಡಬೇಕು,
ಸಾಂಸ್ಕೃತಿ ಕಾರ್ಯಕ್ರಮ, ಕಥೆ ಹೇಳುವುದು, ಗುಂಪಿನಲ್ಲಿ ಅನುಭವ ಹಂಚಿಕೊಳ್ಳುವುದು.
ಕೃಷಿಯಲ್ಲಿ ಸ್ಪೆಸಿಮನ್ ಗಳ ಗುರ್ತಿಸುವಿಕೆ ಮತ್ತು ಸಂಗ್ರಹಣೆ.

ಕೋರ್ಸ್ ಶುಲ್ಕ:-
ದಿನಕ್ಕೆ 1000 ರುಪಾಯಿ(24 ದಿನಗಳಿಗೆ 24000 ರುಪಾಯಿ) ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ.
ತರಗತಿಗಳು ಮೇ ಮೊದಲ ವಾರದಿಂದ ಆರಂಭವಾಗುತ್ತವೆ.
ಹೆಸರು ನೊಂದಾಯಿಸಲು ಕೊನೆ ದಿನಾಂಕ – 05 ಏಪ್ರಿಲ್ 2021
20 ನಿಯಮಿತ ಸೀಟುಗಳಿದ್ದು ಮೊದಲು ನೊಂದಾಯಿಸಿದವರಿಗೆ ಪ್ರಾಧಾನ್ಯತೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಮಧುಸೂದನ.ಕೆ.ಪಿ
ಸಂಯೋಜಕ
ಸಹಜ ಬೇಸಾಯ ಶಾಲೆ ತುಮಕೂರು
ಪೋನ್ : 7899650308
schoolofnaturalfarming@gmail.com

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News