ಬಳ್ಳಾರಿ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ವಿರುದ್ಧ ಎಫ್ಐಆರ್ ದಾಖಲಿಸಿದ ಎಸ್ಐಟಿ

    

Last Updated : Dec 8, 2017, 09:20 AM IST
ಬಳ್ಳಾರಿ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ವಿರುದ್ಧ ಎಫ್ಐಆರ್ ದಾಖಲಿಸಿದ ಎಸ್ಐಟಿ title=

ಬೆಂಗಳೂರು: ಬಳ್ಳಾರಿ ಶಾಸಕ ಅನಿಲ್ ಲಾಡ್ ಮಾಲಿಕತ್ವದ ಕೆನರಾ ಮಿನರಲ್ಸ್ ಪ್ರವೈಟ್ ಲಿಮಿಟೆಡ್ ಕಂಪನಿಯಿಂದ ಅಕ್ರಮ ಗಣಿಗಾರಿಕೆ ನಡೆಸಲಾಗಿದೆ ಎಂದು ಹೇಳಲಾಗಿದ್ದು ಅನಿಲ್ ಲಾಡ್ ಸೇರಿದಂತೆ ಇತರ ಅನಾಮಿಕ ವ್ಯಕ್ತಿಗ ವಿರುದ್ಧ ಎಸ್ಐಟಿ ಎಫ್ಐಆರ್ ದಾಖಲಿಸಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಕೆನರಾ ಮಿನರಲ್ಸ್ ಪ್ರವೈಟ್ ಲಿಮಿಟೆಡ್ 2010 ರಿಂದ 2012 ರವರೆಗೆ 82,275 ಮೆಟ್ರಿಕ್ ಟನ್ ಅದಿರು ಸಾಗಾಟ ಮಾಡಿದೆ. ಪರವಾನಗಿ ಇಲ್ಲದಿದ್ದರೂ ನಿಯಮ ಮೀರಿ ಅದಿರು ತೆಗೆದಿರುವ ಆರೋಪದಡಿಯಲ್ಲಿ ಕಳೆದ ತಿಂಗಳು ಎಫ್ಐಆರ್ ದಾಖಲು ಮಾಡಲಾಗಿದೆ.

ಸುಮಾರು 13 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಮಾಹಿತಿ ಕಲೆಹಾಕಿರುವ ಎಸ್ಐಟಿ ಐಜಿಪಿ ಚರಣ್ ರೆಡ್ಡಿ ನೇತೃತ್ವದ ತಂಡ ಎಫ್ಐಆರ್ ದಾಖಲಿಸಿ ತನಿಖೆ ಚುರುಕುಗೊಳಿಸಿ ದಾಖಲಾತಿಗಳ ಸಂಗ್ರಹದಲ್ಲಿ ತೊಡಗಿದೆ.

Trending News