Big Breaking: ಯಡಿಯೂರಪ್ಪ ಇರುವ ಮಣಿಪಾಲ್ ಆಸ್ಪತ್ರೆಗೆ ಸಿದ್ದರಾಮಯ್ಯ ಕೂಡ ದಾಖಲು

ಕಳೆದ ಹದಿನೈದು ದಿನಗಳ ಹಿಂದೆ ಸಿದ್ದರಾಮಯ್ಯ ಅವರಿಗೆ ಮೂತ್ರ ಕೋಶದ ಸೋಂಕು ಕಾಣಿಸಿಕೊಂಡಿತ್ತು. 

Last Updated : Aug 4, 2020, 07:34 AM IST
Big Breaking: ಯಡಿಯೂರಪ್ಪ ಇರುವ ಮಣಿಪಾಲ್ ಆಸ್ಪತ್ರೆಗೆ ಸಿದ್ದರಾಮಯ್ಯ ಕೂಡ ದಾಖಲು title=

ಬೆಂಗಳೂರು: ಯುರಿನರಿ ಇನ್ಫೆಕ್ಷನ್ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ನಿನ್ನೆ ಮಧ್ಯರಾತ್ರಿ 3.30ರ ಸುಮಾರಿಗೆ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷ ಎಂದರೆ ಇದೇ ಮಣಿಪಾಲ್ ಆಸ್ಪತ್ರೆಯಲ್ಲಿ COVID -19 ಪಾಸಿಟಿವ್ ಬಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಹದಿನೈದು ದಿನಗಳ ಹಿಂದೆ ಸಿದ್ದರಾಮಯ್ಯ ಅವರಿಗೆ ಮೂತ್ರ ಕೋಶದ ಸೋಂಕು ಕಾಣಿಸಿಕೊಂಡಿತ್ತು. ಅಂದಿನಿಂದಲೂ ಸಿದ್ದರಾಮಯ್ಯ ಮನೆಮದ್ದು ಸೇವಿಸುತ್ತಿದ್ದರು.‌ ದಿನಕ್ಕೆ ಮೂರು ಬಾರಿ‌ ಬಾರ್ಲಿ ಗಂಜಿ ಕುಡಿಯಿತ್ತಿದ್ದರು. ಆದರೆ ನಿನ್ನೆ ತಡರಾತ್ರಿ ಕಾಣಿಸಿಕೊಂಡ ನೋವು ಹೆಚ್ಚಾದುದರಿಂದ, ಪುತ್ರ ಹಾಗೂ ಶಾಸಕ ಡಾ. ಯತೀಂದ್ರ ಸೂಚನೆ ಮೇರೆಗೆ ಕೂಡಲೆ ಸಿದ್ದರಾಮಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಸಿಎಂ ಯಡಿಯೂರಪ್ಪ ಸೇರಿ ಅವರ ಮನೆಯಲ್ಲೇ 11 ಮಂದಿಗೆ COVID-19 ಪಾಸಿಟಿವ್

ಸಿದ್ದರಾಮಯ್ಯ ಅವರು ಮಣಿಪಾಲ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ  ಕೋವಿಡ್ -19 (Covid 19)  ಪರೀಕ್ಷೆ ಮಾಡಲಾಗಿದೆ. ಸದ್ಯ COVID -19 ಪರೀಕ್ಷಗೆ ಒಳಗಾಗಿರುವ ಸಿದ್ದರಾಮಯ್ಯ ಅವರ ವರದಿಗಾಗಿ ವೈದ್ಯರು ಮತ್ತು ಕುಟುಂಬ ವರ್ಗ ಕಾಯುತ್ತಿದ್ದಾರೆ. ಯುರಿನರಿ ಇನ್ಫೆಕ್ಷನ್ ನೋವು ಈಗ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದಿಬಂದಿದೆ.

ಯಡಿಯೂರಪ್ಪ ಪುತ್ರಿಗೂ COVID-19 ಪಾಸಿಟಿವ್, ವಿಜಯೇಂದ್ರಗೆ ನೆಗೆಟಿವ್

ಮಣಿಪಾಲ್ ಆಸ್ಪತ್ರೆಯಲ್ಲಿ (Manipal Hospital) ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳಿಬ್ಬರಿಗೂ ಒಂದೇ ಮಹಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.‌ ಮಹಡಿಯ ಎಡಭಾಗದ ವಾರ್ಡ್ ನಲ್ಲಿ ಸಿದ್ದರಾಮಯ್ಯ ಮತ್ತು ಬಲ ಭಾಗದ ವಾರ್ಡಿನಲ್ಲಿ ಯಡಿಯೂರಪ್ಪ ಇದ್ದಾರೆ. ಇಬ್ಬರಿಗೂ ವಿಶೇಷ ವಾರ್ಡ್ ಕಲ್ಪಿಸಲಾಗಿದೆ. ಇಬ್ಬರಿಗೂ ಓದಲು ಪೇಪರ್ ಹಾಗೂ ವಾಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
 

Trending News