ಬಜೆಟ್ ನಲ್ಲಿ ಸಿದ್ದರಾಮಯ್ಯ ಸರ್ಕಾರದಿಂದ ನೌಕರರ ವೇತನದಲ್ಲಿ ಶೇ 24-30ರಷ್ಟು ಏರಿಕೆ ಸಾಧ್ಯತೆ

    

Last Updated : Jan 27, 2018, 05:06 PM IST
ಬಜೆಟ್ ನಲ್ಲಿ ಸಿದ್ದರಾಮಯ್ಯ ಸರ್ಕಾರದಿಂದ ನೌಕರರ ವೇತನದಲ್ಲಿ  ಶೇ 24-30ರಷ್ಟು ಏರಿಕೆ ಸಾಧ್ಯತೆ title=

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆಯೊಂದನ್ನು ನೀಡುತ್ತಿದೆ. 

ಅದೇನಂತಿರಾ ಹಾಗಾದರೆ, ಬರುವ ಇದೆ ಫೆಬ್ರುವರಿಯಲ್ಲಿ ಕೊನೆಯ ಬಜೆಟ್ ಮಂಡಿಸಲು ಅಣಿಯಾಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಸುಮಾರು 6.2 ಲಕ್ಷ ಸರ್ಕಾರಿ ನೌಕರರ ವೇತನದಲ್ಲಿ ಶೇಕಡಾ 24 ರಿಂದ 30 ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಅಲ್ಲದೆ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳು ಎರಡನೇಯ ಶನಿವಾರದಂದು ಸರ್ಕಾರಿ ರಜೆ ಘೋಷಣೆ ಮಾಡುವ ಸಂಭವವಿದೆ ಎಂದು  ಸಹ ಹೇಳಲಾಗುತ್ತಿದೆ. ಸದ್ಯ ಸರ್ಕಾರದ ಈ ಕ್ರಮವು ಕೇಂದ್ರ ಸರ್ಕಾರದ ನೌಕರಿಗೆ ಇರುವ ಸಂಭಳದ ಮಾದರಿಯಲ್ಲಿ ಅವರ ವೇತನವನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಕಳೆದ ಬಾರಿಯ ಬಜೆಟ್ ನಲ್ಲಿಯೇ ರಾಜ್ಯ ಸರ್ಕಾರಿ ನೌಕರ ವೇತನದಲ್ಲಿ ಹೆಚ್ಚಳ ಮಾಡುವ ಚಿಂತನೆಗೆ ಪುಷ್ಟಿ ದೊರೆತಿತ್ತು ,ಅದಕ್ಕೆ ಪೂರಕವಾಗಿ ಸಿದ್ದರಾಮಯ್ಯ ನವರು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸ್ ಮೂರ್ತಿ ಯವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದರು. ಈಗ ಈ ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸಿದ್ದು, ಜನವರಿ 31 ರ ಒಳಗಾಗಿ  ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಒಂದುವೇಳೆ ಸರ್ಕಾರವು ಇದಕ್ಕೆ ಒಪ್ಪಿಗೆ ನೀಡಿದ್ದೆ ಆಗಿದ್ದಲ್ಲ್ಲಿ ರಾಜ್ಯ ಸರ್ಕಾರಿ ನೌಕರಿಗೆ ಇದು ನಿಜಕ್ಕೂ ಬಂಪರ್ ಕೊಡುಗೆಯಾಗಲಿದೆ. 

  

Trending News