ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆ: ಜನರು ತಕ್ಕ ಉತ್ತರ ಕೊಡ್ತಾರೆ- ಸಚಿವೆ ಶಶಿಕಲಾ ಜೊಲ್ಲೆ

'ನಮ್ಮ ಪೂರ್ವಜರು ನಂಬಿ, ಬಾಳಿ ಬದುಕಿದ ವ್ಯವಸ್ಥೆಯನ್ನೇ ಕೀಳಾಗಿ ಪ್ರತಿಬಿಂಬಿಸಿರುವ ಸತೀಶ್‌ ಜಾರಕಿಹೊಳಿ ಮನಸ್ಥಿತಿಯ ಬಗ್ಗೆ ನನಗೆ ವಿಷಾದವಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಕಿಡಿಕಾರಿದ್ದಾರೆ.

Written by - Prashobh Devanahalli | Edited by - Puttaraj K Alur | Last Updated : Nov 7, 2022, 10:08 PM IST
  • ಹಿಂದೂ ಪದ ಅಶ್ಲೀಲ ಎನ್ನುವವರ ಮನಸ್ಥಿತಿಯನ್ನು ಜನರು ಮೊದಲು ಅರಿತುಕೊಳ್ಳಬೇಕಿದೆ
  • ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆಗೆ ಸಚಿವೆ ಶಶಿಕಲಾ ಜೊಲ್ಲೆ ತಿರುಗೇಟು
  • ಹಿಂದೂ ವಿರೋಧಿ ಹೇಳಿಕೆ ನೀಡುವವರಿಗೆ ಜನರೇ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತಾರೆ
ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆ: ಜನರು ತಕ್ಕ ಉತ್ತರ ಕೊಡ್ತಾರೆ- ಸಚಿವೆ ಶಶಿಕಲಾ ಜೊಲ್ಲೆ  title=
ಸತೀಶ್ ಜಾರಕಿಹೊಳಿಗೆ ಶಶಿಕಲಾ ಜೊಲ್ಲೆ ತಿರುಗೇಟು

ನಿಪ್ಪಾಣಿ: ಹಿಂದೂ ಪದ ಅಶ್ಲೀಲ ಎನ್ನುವರ ಮನಸ್ಥಿತಿಯನ್ನು ಜನರು ಅರಿತುಕೊಳ್ಳಬೇಕಿದೆ. ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆಗೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ನಿಪ್ಪಾಣಿಯಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವರು, ‘ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಂಬಿಕೆಯನ್ನು ಕೀಳು ಪದಗಳಿಗೆ ಹೋಲಿಸಿರುವ ಸತೀಶ್‌ ಜಾರಕಿಹೊಳಿ ಮನಸ್ಥಿತಿಯನ್ನು ಜನರು ಅರಿತುಕೊಳ್ಳಬೇಕಾಗಿದೆ. ಹಿಂದುತ್ವ ಎನ್ನುವುದು ಬಹುಜನರ ಧಾರ್ಮಿಕ ನಂಬಿಕೆ. ಬಹುಸಂಖ್ಯಾತರ ಭಾವನೆಗೆ ಜಾರಕಿಹೊಳಿ ಧಕ್ಕೆ ತಂದಿದ್ದಾರೆ. ಅವರ ಹಿಂದೂ ವಿರೋಧಿ ಹೇಳಿಕೆಗೆ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತಾರೆ’ ಎಂದು ಕಿಡಿಕಾರಿದ್ದಾರೆ.    

ಇದನ್ನೂ ಓದಿ: ಬಿಜೆಪಿಯಲ್ಲಿ ಗಲ್ಲಿ ಕ್ರಿಕೆಟ್‌ನಂತೆ ಹಲವು ಟೀಂಗಳು ಸೃಷ್ಟಿಯಾಗಿವೆ!: ಕಾಂಗ್ರೆಸ್

‘ನಮ್ಮ ಪೂರ್ವಜರು ನಂಬಿ, ಬಾಳಿ ಬದುಕಿದ ವ್ಯವಸ್ಥೆಯನ್ನೇ ಕೀಳಾಗಿ ಪ್ರತಿಬಿಂಬಿಸಿರುವ ಸತೀಶ್‌ ಜಾರಕಿಹೊಳಿಯವರ ಮನಸ್ಥಿತಿಯ ಬಗ್ಗೆ ನನಗೆ ವಿಷಾದವಿದೆ. ಹಿಂದೂ ಧರ್ಮ ಮತ್ತು ನಮ್ಮ ಭಾರತದ ಇತಿಹಾಸದ ಬಗ್ಗೆ ಸತೀಶ್‌ ಜಾರಕಿಹೊಳಿಯವರು ಇನ್ನಷ್ಟು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಒಂದು ಪಕ್ಷದ ಸಿದ್ದಾಂತಗಳನ್ನು ವಿರೋಧಿಸುವ ಭರದಲ್ಲಿ ಭಾರತ ದೇಶದ ಅವಿಭಾಜ್ಯ ಅಂಗವಾಗಿರುವ ಹಿಂದುಗಳನ್ನು ಅವಹೇಳನ ಮಾಡುವುದು ಎಷ್ಟರ ಮಟ್ಟಿಗೆ ಸರಿ?’ ಎಂದು ಪ್ರಶ್ನಿಸಿದ್ದಾರೆ.

‘ಕೆಲವೊಂದು ಹೇಳಿಕೆಗಳು ಕೇವಲ ಅವರ ವೈಯಕ್ತಿಕ ಮಟ್ಟವನ್ನು ತೋರಿಸುವುದಲ್ಲದೇ, ಅವರು ಪ್ರತಿನಿಧಿಸುವ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತವೆ. ಹಿಂದುತ್ವ ಎನ್ನುವುದು ಬಹುಜನರ ಧಾರ್ಮಿಕ ನಂಬಿಕೆ. ಬಹುಸಂಖ್ಯಾತರ ಭಾವನೆಗೆ ಜಾರಕಿಹೊಳಿ ಧಕ್ಕೆ ತಂದಿದ್ದಾರೆ. ಜನರೇ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.  

ಇದನ್ನೂ ಓದಿ: ಸಿದ್ದರಾಮಯ್ಯಗೆ ಪರಮೇಶ್ವರ್, ಖರ್ಗೆ & ಡಿಕೆಶಿ ಖೆಡ್ಡಾ ತೋಡುವುದು ಖಚಿತ: ಬಿಜೆಪಿ

ಸತೀಶ್‌ ಜಾರಕಿಹೊಳಿಯವರಿಗೆ ಹಿಂದೂ ಶಬ್ದದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ. ಇಂತಹ ಕೀಳುಮಟ್ಟದ ಹೇಳಿಕೆಯನ್ನು ನೀಡಿರುವ ಅವರು ಸಾರ್ವಜನಿಕವಾಗಿ ಜನರ ಕ್ಷಮೆ ಕೇಳಬೇಕು’ ಎಂದು ಶಶಿಕಲಾ ಜೊಲ್ಲೆಯವರು ಆಗ್ರಹಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News