School Fees ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನೆ ಎದುರು ಪೋಷಕರ ಪ್ರತಿಭಟನೆ

ಪ್ರತಿಭಟನೆ ಮಾಡುವ ಮುನ್ನ ಪೊಲೀಸರ ಅನುಮತಿ ಪಡೆಯಬೇಕು. ಅನುಮತಿ ಇಲ್ಲದೇ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡುವಂತಿಲ್ಲ ಎಂಬ ಕಾರಣ ನೀಡಿ ಬಲವಂತವಾಗಿ ಪ್ರತಿಭಟನಾನಿರತ ಪೋಷಕರನ್ನು ಬಂಧಿಸಲಾಗಿದೆ‌.  

Written by - Yashaswini V | Last Updated : Jan 12, 2021, 10:15 AM IST
  • ಸಮಸ್ಯೆ ಸೃಷ್ಟಿಸುತ್ತಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಹೆಚ್ಚಿದ ಪೋಷಕರ ಆಕ್ರೋಶ
  • ಸುರೇಶ್ ಕುಮಾರ್ ಮನೆ ಮುಂದೆ ಕಸ ಗುಡಿಸುವ ಮೂಲಕ ಶಾಂತವಾಗಿ ಪ್ರತಿಭಟಿಸಲು ಮುಂದಾಗಿದ್ದ ಪೋಷಕರು
  • ಸುರೇಶ್ ಕುಮಾರ್ ಮನೆ ಸಂಪರ್ಕಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ ಪೊಲೀಸರು
School Fees ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನೆ ಎದುರು ಪೋಷಕರ ಪ್ರತಿಭಟನೆ title=
Parents protest in front of Education minister house

ಬೆಂಗಳೂರು: ಶುಲ್ಕ ವಿಚಾರವಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ (S Suresh Kumar)  ವಿರುದ್ಧ ಅವರ ಮನೆ ಎದುರು ವಿನೂತನವಾಗಿ ಪ್ರತಿಭಟನೆ ಮಾಡಲು ಮುಂದಾಗಿದ್ದ ಪೋಷಕರನ್ನು ಪೋಲಿಸರು ಎಳೆದಾಡಿ ಅರೆಸ್ಟ್ ಮಾಡಿದ್ದಾರೆ.

ಶಾಲೆ (Schools) ಆರಂಭಿಸುವುದರಿಂದ ಹಿಡಿದು ಶುಲ್ಕ ನಿಗಧಿ ಮಾಡುವವರೆಗೂ ಪ್ರತಿ ಹಂತದಲ್ಲೂ ಗೊಂದಲ ಸೃಷ್ಟಿಸಿದ್ದರು. ಈಗ ಶಾಲೆಗಳು ಆರಂಭವಾದರೂ ಶುಲ್ಕ ವಿಚಾರವಾಗಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಬೇಸತ್ತಿದ್ದ ಪೋಷಕರು ಇಂದು ಸುರೇಶ್ ಕುಮಾರ್ ಮನೆ ಎದುರು ವಿನೂತನವಾಗಿ ಪ್ರತಿಭಟನೆ ಮಾಡಲು ಮುಂದಾಗಿದ್ದರು.

ಇದನ್ನು ಓದಿ - ದುಬಾರಿ ಶುಲ್ಕ ಪಾವತಿ ಬಗ್ಗೆ ಫೇಸ್‌ಬುಕ್‌ನಲ್ಲಿ ಅಳಲು ತೋಡಿಕೊಂಡ ಶಿಕ್ಷಣ ಸಚಿವ ಸುರೇಶ್ ಕುಮಾರ್

ಎಸ್. ಸುರೇಶ್ ಕುಮಾರ್ (S Suresh Kumar) ಮನೆ ಮುಂದೆ ಬೆಳಿಗ್ಗೆ 7 ಗಂಟೆಯಿಂದ 7.10ರವರೆಗೆ ಕಸ ಗುಡಿಸುವ ಮೂಲಕ ಶಾಂತಯುತ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಸಚಿವರ ಮನೆ ಮುಂದೆ ಪೋಷಕರ ಪ್ರತಿಭಟನೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಸುರೇಶ್ ಕುಮಾರ್ ಮನೆ ಸಂಪರ್ಕಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ. ಅಲ್ಲದೆ ಕಸ ಬಳಿದು ಪ್ರತಿಭಟನೆ ಮಾಡಲು ಮುಂದಾಗುತ್ತಿದ್ದಂತೆ ಪೋಷಕರನ್ನು ಬಂಧಿಸಿದ್ದಾರೆ.

ಶಾಂತಯುತವಾಗಿ ಪ್ರತಿಭಟನೆ ನಡೆಸಲು ಬಂದ ಪೋಷಕರನ್ನು ಎಳೆದಾಡಿದ ಪೊಲೀಸರು ಬಳಿಕ ಪ್ರತಿಭಟನಾನಿರತ ಪೋಷಕರನ್ನು ಪೊಲೀಸ್ ವಾಹನಗಳವರೆಗೆ ಎಳೆದೊಯ್ದರು. ಪ್ರತಿಭಟನೆ (Protest) ಮಾಡುವ ಮುನ್ನ ಪೊಲೀಸರ ಅನುಮತಿ ಪಡೆಯಬೇಕು. ಅನುಮತಿ ಇಲ್ಲದೇ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡುವಂತಿಲ್ಲ ಎಂಬ ಕಾರಣ ನೀಡಿ ಬಲವಂತವಾಗಿ ಪೋಷಕರನ್ನು ಬಂಧಿಸಲಾಗಿದೆ‌.

ಇದನ್ನು ಓದಿ - ಈ ರಾಜ್ಯದಲ್ಲಿ ಶುಲ್ಕವನ್ನು 20% ರಷ್ಟು ಕಡಿಮೆ ಮಾಡುವಂತೆ ಖಾಸಗಿ ಶಾಲೆಗಳಿಗೆ ಹೈಕೋರ್ಟ್ ಆದೇಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News