Sarcasm Aadhaar Card: ಟಿಪ್ಪು ಅನ್ನು ಕೊಂದಿದ್ದು ಉರಿಗೌಡ ಹಾಗೂ ನಂಜೇಗೌಡ ಎಂಬ ವಿವಾದವು ಕೆಲವುದಿನಗಳಿಂದ ಬಾರಿ ಚರ್ಚೆಗೆ ಗ್ರಾಸವಾಗಿತ್ತು.ಈ ವಿವಾದಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದರು. ಇದೀಗ ಸಿದ್ದರಾಮಯ್ಯ ಆಪ್ತರಿಂದ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೆಸರಿನಲ್ಲಿ ವ್ಯಂಗ್ಯ ಆಧಾರ್ ಕಾರ್ಡ್ ಯೊಂದುಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ: Forest destruction: ಕಾಲುವೆ ನೆಪಕ್ಕೆ ಔಷಧಿ ಸಸ್ಯಗಳು ಬಲಿ
ಅದರ ಮುಂದುವರಿದಂತೆ ಅದರ ಇತ್ತ ರಾಜ್ಯ ರಾಜಕೀಯದಲ್ಲಿ ವಿವಾದ ಹುಟ್ಟು ಹಾಕಿರುವ ಉರಿಗೌಡ, ನಂಜೇಗೌಡ ಅವರುಗಳನ್ನು ಆಧರಿಸಿ ಸಿನಿಮಾ ಮಾಡುವುದಾಗಿ ಸಚಿವ ಮುನಿರತ್ನ ಟೈಟಲ್ ರಿಜಿಸ್ಟರ್ಗೆ ಅರ್ಜಿ ಹಾಕಿ, ಪೋಸ್ಟರ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ಇದನ್ನೂ ಓದಿ: Muniratna : ಉರಿಗೌಡ ದೊಡ್ಡನಂಜೇಗೌಡ ಸಿನಿಮಾ ಮಾಡುವ ನಿರ್ಧಾರದಿಂದ ಹಿಂದೆ ಸರಿದ ಮುನಿರತ್ನ!
ಬಳಿಕ ಆ ವಿಷಯ ಕುರಿತಂತೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡಲಾಗಿತ್ತು . ಅವರ ಭೇಟಿಯ ನಂತರ ಮುನಿರತ್ನ ಸಿನಿಮಾ ಉರಿಗೌಡ ನಂಜೇಗೌಡರ ಚಿತ್ರ ಕೈಬಿಡುವುದಾಗಿ ಹೇಳಲಾಯಿತು.
ಅದರ ಬೆನ್ನಲೇ ಇದೀಗ ಸಿದ್ದರಾಮಯ್ಯ ಆಪ್ತರಿಂದ ಉರಿಗೌಡ ನಂಜೇಗೌಡ ವಿಚಾರಕ್ಕೆ ಸಂಬಂಧಿಸಿದಂತೆ ಹೆಸರಿನಲ್ಲಿ ತೀವ್ರ ವ್ಯಂಗ್ಯ ನಿಟ್ಟಿನಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಲಾಗಿದೆ.
ಸೃಷ್ಟಿಯಾಗಿರುವ ಆಧಾರ್ ಕಾರ್ಡ್ ಹೀಗಿದೆ
ತಾಯಿ: ಅಶ್ವತ್ಥ ನಾರಾಯಣ
ತಂದೆ: ಸಿಟಿ ರವಿ
ಹುಟ್ಟಿದ್ದು: ಚುನಾವಣೆ ಹತ್ತಿರ ಬಂದಾಗ
ಜನ್ಮಸ್ಥಳ: ಬಿಜೆಪಿ ಕಚೇರಿ, ಮಲ್ಲೇಶ್ವರ
ಆಧಾರ್ ಸಂಖ್ಯೆ: 420 420 420 420
ವ್ಯಂಗ್ಯ ಆಧಾರ್ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಹರಿದಾಡುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ