ರಾಜ್ಯ ರೈತರಿಗೆ ಸಂಕ್ರಾಂತಿ ಕೊಡುಗೆ: 1.7 ಲಕ್ಷ ಸಾಲ ಖಾತೆಗಳಿಗೆ 876 ಕೋಟಿ ರೂ. ಬಿಡುಗಡೆ

ಜನವರಿ 11 ರವರೆಗೆ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿರುವ ಸಾಲ ಮನ್ನಾ.  

Last Updated : Jan 15, 2019, 07:32 AM IST
ರಾಜ್ಯ ರೈತರಿಗೆ ಸಂಕ್ರಾಂತಿ ಕೊಡುಗೆ: 1.7 ಲಕ್ಷ ಸಾಲ ಖಾತೆಗಳಿಗೆ 876 ಕೋಟಿ ರೂ. ಬಿಡುಗಡೆ title=

ಬೆಂಗಳೂರು: ಈ ಬಾರಿಯ ಸುಗ್ಗಿ ಹಬ್ಬಕ್ಕೆ ರೈತರಿಗೆ ರಾಜ್ಯ ಸರ್ಕಾರ ಉಡುಗೊರೆ ನೀಡಿದ್ದು, ಜನವರಿ 11 ರವರೆಗೆ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ 1.1 ಲಕ್ಷ ಸಹಕಾರಿ ಬ್ಯಾಂಕುಗಳ ಸಾಲಖಾತೆಗಳಿಗೆ 616 ಕೋಟಿ ರೂ. ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ 58 ಸಾವಿರ ಸಾಲಖಾತೆಗಳಿಗೆ 260 ಕೋಟಿ ರೂ. ರೈತರ ಬೆಳೆಸಾಲ ಮನ್ನಾ ಮೊತ್ತ ಬಿಡುಗಡೆ ಮಾಡಲಾಗಿದೆ. 

ಈ ಎರಡೂ ಬ್ಯಾಂಕುಗಳಲ್ಲಿ ಒಟ್ಟು 1.7 ಲಕ್ಷ ಸಾಲ ಖಾತೆಗಳಳಿಗೆ 876 ಕೋಟಿ ರೂ. ಗಳಷ್ಟು ಸಾಲ ಮನ್ನಾ ಮೊತ್ತ ಬಿಡುಗಡೆ ಮಾಡಿದಂತಾಗಿದೆ.

ಜನವರಿ 11 ರ ವರೆಗೆ ಒಟ್ಟು 10 ಲಕ್ಷಕ್ಕೂ ಹೆಚ್ಚು ರೈತರು ಸಾಲ ಮನ್ನಾ ಯೋಜನೆಗಾಗಿ ಅರ್ಹತೆ ಹೊಂದಿದ್ದು, ಸಹಕಾರಿ ಬ್ಯಾಂಕುಗಳ ಹಾಗೂ ವಾಣಿಜ್ಯ ಬ್ಯಾಂಕುಗಳ ಸಾಲ ಖಾತೆಗಳ ಜಿಲ್ಲಾವಾರು ವಿವರ ಇದರೊಂದಿಗೆ ಲಗತ್ತಿಸಿದೆ.

ಸಾಲಖಾತೆಗಳಿಗೆ ಮನ್ನಾ ಮೊತ್ತವನ್ನು ಈ ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೆ ನಿಯಮಿತವಾಗಿ ಪಾವತಿಸಲಾಗುತ್ತಿದೆ. ಸಹಕಾರಿ ಬ್ಯಾಂಕುಗಳಲ್ಲಿ ಸಾಲವನ್ನು ತೀರಿಸುವ ವಾಯಿದೆ ಮುಗಿದ ನಂತರ ಮನ್ನಾ ಮೊತ್ತ ಬಿಡುಗಡೆ  ಮಾಡಲಾಗುತ್ತದೆ ಎಂದು ಹೇಳಲಾಗಿದೆ.
 

Trending News