ಈಜಿಪುರ ಕಟ್ಟಡ ಕುಸಿತ ಪ್ರಕರಣದಲ್ಲಿ ಬದುಕುಳಿದಿದ್ದ ಸಂಜನಾ ಸಾವು

ಕಟ್ಟಡ ಕುಸಿತ ವೇಳೆ ಅದೃಷ್ಟವಶಾತ್ ಬದುಕುಳಿದಿದ್ದ ಸಂಜನಾ ಗುರುವಾರ ಸಂಜೆ ಇಹಲೋಕ ತ್ಯಜಿಸಿದ್ದಾಳೆ.

Last Updated : Oct 20, 2017, 08:50 AM IST
ಈಜಿಪುರ ಕಟ್ಟಡ ಕುಸಿತ ಪ್ರಕರಣದಲ್ಲಿ ಬದುಕುಳಿದಿದ್ದ ಸಂಜನಾ ಸಾವು  title=
Pic: ANI

ಬೆಂಗಳೂರು: ಒಂದೆರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಿಲಿಂಡರ್ ಸ್ಪೋಟದಿಂದ ಈಜೀಪುರದಲ್ಲಿ ಎರಡು ಅಂತಸ್ಥಿನ ಕಟ್ಟಡ ಕುಸಿದು ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಈ ಘಟನೆಯಲ್ಲಿ ಅದೃಷ್ಟವಶಾತ್ ಬದುಕುಳಿದಿದ್ದ ಸಂಜನಾ ಗುರುವಾರ ಸಂಜೆ ಇಹಲೋಕ ತ್ಯಜಿಸಿದ್ದಾಳೆ.

 

ಸಿಲಿಂಡರ್ ಸ್ಪೋಟದಿಂದ ದೇ 16 ರಂದು ಗಣೇಶ್ ಮಾಲೀಕತ್ವದ ಎರಡು ಹಂತಸ್ಥಿನ ಕಟ್ಟಡ ಕುಸಿದಿತ್ತು. ಸುಟ್ಟಗಾಯಗಳಿಂದ ಕಟ್ಟಡ ಅಡಿ ಸಂಜನಾ ಸಿಲುಕಿಗೊಂಡಿದ್ದಳು. ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಸಂಜನಾಳನ್ನು ರಕ್ಷಿಸಿತ್ತು. ಸಂಜನಾಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು,  ಆದರೆ ಚಿಕಿತ್ಸೆ ಫಲಕಾರಿಯಾಗದೇ  ಮಗು ಸಂಜನಾ ಸಾವನ್ನಪ್ಪಿದ್ದಾಳೆ.  ಕಳೆದ ಸೋಮವಾರದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದ ಮಗು ಸಂಜನಾ ಮರನವನ್ನಪ್ಪಿದೆ.

ಸರವಣ ಹಾಗೂ ಅಶ್ವಿನಿ ದಂಪತಿ ಪುತ್ರಿ ಸಂಜನಾ. ಘಟನೆಯಲ್ಲಿ ದಂಪತಿ ಕೂಡ ಮೃತಪಟ್ಟಿದ್ದರು. ಸಂಜನಾಳರ ಪೂರ್ತಿ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳುವುದಾಗಿ ಸಚಿವರು ತಿಳಿಸಿದ್ದರು. ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಮಗುವನ್ನು ವೈದ್ಯರು ಬಹಳ ಜಾಗರೂಕರಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಕೊನೆಗೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸಂಜನಾಳ ಮರಣೋತ್ತರ ಪರೀಕ್ಷೆ ಇಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Trending News