Road Accident: ರಾಮನಗರ ಜಿಲ್ಲೆಯ ಕುಂಬಳಗೋಡು ಬಳಿ ರಸ್ತೆ ಅಪಘಾತ, ಆರು ಜನರ ದುರ್ಮರಣ

Road Accident - ರಾಮನಗರ ಜಿಲ್ಲೆಯ ಕುಂಬಳಗೋಡು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಈ ಅಪಘಾತದಲ್ಲಿ ಆರು ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 

Edited by - Nitin Tabib | Last Updated : Jan 10, 2022, 10:34 PM IST
  • ಕುಂಬಳಗೋಡು ಬಳಿ ಭೀಕರ ರಸ್ತೆ ಅಪಘಾತ.
  • ಸ್ಥಳದಲ್ಲಿಯೇ ಆರು ಸಾವು
  • ಹಲವರು ಜೆಲ್ಲಿ ಅವಶೇಷಗಳ ಅಡಿ ಸಿಲುಕಿರುವ ಭೀತಿ
Road Accident: ರಾಮನಗರ ಜಿಲ್ಲೆಯ ಕುಂಬಳಗೋಡು ಬಳಿ ರಸ್ತೆ ಅಪಘಾತ, ಆರು ಜನರ ದುರ್ಮರಣ title=
Road Accident (Representational Image)

ರಾಮನಗರ: Road Accident - ರಾಮನಗರ (Ramnagar) ಜಿಲ್ಲೆಯ ಕುಂಬಳಗೋಡಿನ ಕಿಣಿಮಿಣಿಕೆ ಬಳಿ (Kumbalagodu) ಬಳಿ ವಾಹನಗಳ ಮೇಲೆ ಟಿಪ್ಪರ್ (Tipper Accident) ಕುಸಿದು ಬಿದ್ದ ಪರಿಣಾಮ ಬೈಕ್ ಸವಾರ ಸೇರಿದಂತೆ ಸ್ಥಳದಲ್ಲಿಯೇ ಆರು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 

ಪ್ರಾಥಮಿಕ ವರದಿಗಳ ಪ್ರಕಾರ ರಸ್ತೆ ಕಾಮಗಾರಿಯೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಇಂದು ಸಂಜೆಯ ಸುಮಾರಿಗೆ ಜೆಲ್ಲಿ ಹೊತ್ತು ವೇಗವಾಗಿ ಸಾಗಿಸುತ್ತಿದ್ದ ಟಿಪ್ಪರ್ ವೊಂದು ಎರಡು ಕಾರುಗಳು ಹಾಗೂ ಒಂದು ಬೈಕ್ ಮೇಲೆ ಆಯ ತಪ್ಪಿ ಪಲ್ಟಿ ಹೊಡೆದು ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ-CM Tested Positive For Covid-19: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕೊವಿಡ್ ಸೋಂಕು ದೃಢ

ಈ ಘಟನೆಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಜೆಲ್ಲಿ ಅವಶೇಷಗಳ ಅಡಿ ಹಲವರು ಸಿಲುಕಿ ಹಾಕಿಕೊಂಡಿರುವ ಭೀತಿ  ವ್ಯಕ್ತವಾಗಿದೆ. ಪ್ರಸ್ತುತ ಸ್ಥಳಕ್ಕೆ ಕುಂಬಳಗೋಡು ಪೋಲೀಸರ ತಂಡ ದೌಡಾಯಿಸಿದ್ದು ತನಿಖೆ ಕೈಗೊಂಡಿದ್ದಾರೆ. ಈ ಘಟನೆಯಲ್ಲಿ ಒಟ್ಟು ಎರಡು ಕಾರುಗಳು ಹಾಗೂ ಒಂದು ಬೈಕ್ ಮೇಲೆ ಟಿಪ್ಪರ್ ಬಿದ್ದಿದೆ. ಅಪಘಾತದ ಪರಿಣಾಮ ಬಿಡದಿಯಿಂದ ಕೆಂಗೇರಿ ಮಾರ್ಗದಲ್ಲಿ 10 ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ ಸ್ಥಿತಿ ನಿರ್ಮಾಣವಾಗಿದೆ. ಘಟನೆಯಲ್ಲಿ ಮೃತಪಟ್ಟ 6 ದುರ್ದೈವಿಗಳ ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇವರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಪುರುಷರು ಶಾಮೀಲಾಗಿದ್ದಾರೆ. 

ಇದನ್ನೂ ಓದಿ-DK Shivakumar : ಸಿಎಂ ಮತ್ತು ಸಚಿವ ಸುಧಾಕರ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ!

ಘಟನೆಯಲ್ಲಿ ಜಖಂಗೊಂಡ KA-02 MM- 7749 ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ಮೃತರನ್ನು ನಿಖಿತಾ ರಾಣಿ (29), ವೀಣಮ್ಮ(42), ಇಂದ್ರಕುಮಾರ್ (14), ಕೀರ್ತಿಕುಮಾರ್ (40) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಜಖಂಗೊಂಡ ಇನ್ನೊಂದು ಕಾರು KA 05 MJ 9924 ನಲ್ಲಿದ್ದ ಟೊಯೋಟಾ ಕಂಪನಿಯ ಸಿಬ್ಬಂದಿ ಶಿವ ಪ್ರಕಾಶ್ ಮೃತಪಟ್ಟಿದ್ದು, ಬೈಕ್ ನಲ್ಲಿ ತೆರಳುತ್ತಿದ್ದ ಜಿತೀನ್ ಬಿ. ಜಾರ್ಜ್ ಕೂಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 

ಇದನ್ನೂ ಓದಿ-ವೀಕೆಂಡ್ ಕರ್ಫ್ಯೂ ಎಫೆಕ್ಟ್ :  BMTC ಗೆ ₹6 ಕೋಟಿ, KSRTC ಗೆ 10 ಕೋಟಿ ಆದಾಯ ನಷ್ಟ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News