ಫುಡ್ ಡೆಲಿವರಿ ಬಾಯ್ ಮೇಲೆ ರೆಸ್ಟೋರೆಂಟ್ ಸಿಬ್ಬಂದಿ ದಬ್ಬಾಳಿಕೆ, ಡೆಲಿವರಿ ಬಾಯ್ ನೆರವಿಗೆ ನಿಂತ ಕನ್ನಡ ಪರ ಸಂಘಟನೆಗಳು

ಕ್ಷುಲ್ಲಕ ಕಾರಣಕ್ಕೆ ಡೆಲಿವೆರಿ ಬಾಯ್ ಮೇಲೆ ಕೋಪಗೊಂಡ ರೆಸ್ಟೋರೆಂಟ್ ಸಿಬ್ಬಂದಿ  ದಬ್ಬಾಳಿಕೆ ನಡೆಸಿರುವ ಘಟನೆ, ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ರೆಸ್ಟೋರೆಂಟ್ ನಲ್ಲಿ ನಡೆದಿದೆ. 

Written by - Zee Kannada News Desk | Last Updated : Dec 24, 2021, 01:48 PM IST
  • ಕ್ಷುಲ್ಲಕ ಕಾರಣಕ್ಕೆ ಡೆಲಿವೆರಿ ಬಾಯ್ ಮೇಲೆ ದಬ್ಬಾಳಿಕೆ
  • ಡೆಲಿವರಿ ಬಾಯ್ ಕುತ್ತಿಗೆ ಹಿಡಿದು ಹೊರ ದಬ್ಬಿದ ಸಿಬ್ಬಂದಿ
  • ಡೆಲಿವರಿ ಬಾಯ್ ನೆರೆವಿಗೆ ಬಂದ ಕನ್ನಡ ಪರ ಸಂಘಟನೆಗಳು
 ಫುಡ್ ಡೆಲಿವರಿ ಬಾಯ್ ಮೇಲೆ ರೆಸ್ಟೋರೆಂಟ್ ಸಿಬ್ಬಂದಿ ದಬ್ಬಾಳಿಕೆ, ಡೆಲಿವರಿ ಬಾಯ್ ನೆರವಿಗೆ ನಿಂತ ಕನ್ನಡ ಪರ ಸಂಘಟನೆಗಳು   title=
ಡೆಲಿವರಿ ಬಾಯ್ ನೆರೆವಿಗೆ ಬಂದ ಕನ್ನಡ ಪರ ಸಂಘಟನೆಗಳು

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಡೆಲಿವೆರಿ ಬಾಯ್ ಮೇಲೆ ಕೋಪಗೊಂಡ ರೆಸ್ಟೋರೆಂಟ್ ಸಿಬ್ಬಂದಿ  ದಬ್ಬಾಳಿಕೆ ನಡೆಸಿರುವ ಘಟನೆ, ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ರೆಸ್ಟೋರೆಂಟ್ ನಲ್ಲಿ (Bengaluru Restaurant) ನಡೆದಿದೆ.  ಡೆಲಿವೆರಿ ನೀಡುವುದು ತಡವಾಗುತ್ತದೆ, ಬೇಗನೆ ಫುಡ್ ಸಪ್ಲೈ ಮಾಡಿ ಎಂದು ಡೆಲಿವೇರಿ ಬಾಯ್ ಕೇಳಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ವೈಟ್ ಫೀಲ್ಡ್ ಬಳಿಯ ಲಿಯಾನ್ ಗ್ರಿಲ್ ರೆಸ್ಟೋರೆಂಟ್ ನಲ್ಲಿ ಘಟನೆ ನಡೆದಿದೆ. 

ಸಂಜಯ್ ಎಂಬ ಡೆಲಿವರಿ ಬಾಯ್ (Delivery Boy) ಫುಡ್ ಪ್ಯಾಕೇಟ್ ಪಡೆಯಲು ಲಿಯಾನ್ ಗ್ರಿಲ್ ರೆಸ್ಟೋರೆಂಟ್ ಗೆ ಬಂದಿದ್ದರು.  ಈ ವೇಳೆ ಗ್ರಾಹಕರಿಗೆ ಫುಡ್ ತಲುಪಿಸುವುದು ತಡವಾಗುತ್ತಿದೆ, ಬೇಗನೆ ಸಪ್ಲೈ ಮಾಡಿ (food supply) ಎಂದು ಕೇಳಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಫುಡ್ ಬೆಗೆನೆ ಸಪ್ಲೈ ಮಾಡುವಂತೆ ಕೇಳಿದ್ದಕ್ಕೆ ಕೋಪಗೊಂಡ ಹೋಟೆಲ್ ಸಿಬ್ಬಂದಿ, ಜಗಳಕ್ಕೆ ನಿಂತಿದ್ದಾರೆ ಎಂದು ಆರೋಪಿಲಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಹೋಟೆಲ್ ಸಿಬ್ಬಂದಿ ಫುಡ್ ಡೆಲಿವರಿ ಬಾಯ್  ಕುತ್ತಿಗೆ ಹಿಡಿದು ಹೊರ ದಬ್ಬಿದ್ದಾರೆ ಎಂದು ಆರೋಪಿಸಲಾಗಿದೆ.  

ಇದನ್ನೂ ಓದಿ : Car Accident: ಕಗ್ಗತ್ತಲಿನಲ್ಲಿ ದಾರಿ ಕಾಣದೆ ಕೆರೆಗೆ ಬಿದ್ದ ಕಾರು, ಉಸಿರುಗಟ್ಟಿ ವ್ಯಕ್ತಿ ಸಾವು

ಇಷ್ಟೆಲ್ಲಾ ಘಟನೆ ನಡೆದ ಬಳಿಕ ಡೆಲಿವರಿ ಬಾಯ್ ನೆರೆವಿಗೆ ಕನ್ನಡ ಪರ ಸಂಘಟನೆಗಳು (Kannada organisation) ಧಾವಿಸಿವೆ. ಕನ್ನಡ ಪರ ಸಂಘಟನೆಗಳು, ರೆಸ್ಟೋರೆಂಟ್ ಮಾಲೀಕರನ್ನ‌ ಸಂಪರ್ಕಿಸಿ, ನಡೆದ ಘಟನೆಯನ್ನು ವಿವರಿಸಿದ್ದಾರೆ. ನಂತರ ಹೋಟೆಲ್  ಮ್ಯಾನೇಜರ್ ಪ್ರಶಾಂತ್ ಅವರನ್ನು ಭೇಟಿಯಾಗಿ‌ ಮಹಿಳಾ ಸಿಬ್ಬಂದಿಯ ವಜಾಕ್ಕೆ ಆಗ್ರಹಿಸಿದ್ದಾರೆ. ಮಹಿಳಾ ಸಿಬ್ಬಂದಿಯ  ಕೃತ್ಯವನ್ನು ಗಮನಿಸಿದ ಮ್ಯಾನೇಜರ್ ಅವರನು ಕೂಡಲೇ ಕೆಲಸದಿಂದ ವಜಾಗೊಳಿಸಿದ್ದಾರೆ. 

ಅಲ್ಲದೆ, ಮಹಿಳೆಯಿಂದ ಡೆಲಿವೆರಿ ಬಾಯ್ ಕ್ಷಮಾಪಣೆ ಕೇಳಿಸಿದ ಘಟನೆಯೂ ನಡೆದಿದೆ. ಇದಾದ ನಂತರ ಕನ್ನಡ ಸಂಘಟನೆಗಳು, ಡೆಲಿವರಿ‌ ಬಾಯ್ ಗೆ ಒಂದು ದಿನದ ಸಂಬಳ‌ ಕೊಡಿಸಿದ್ದಾರೆ. ವೈಟ್ ಫೀಲ್ಡ್ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದೆ. 

ಇದನ್ನೂ ಓದಿ : New Year: ನ್ಯೂ ಇಯರ್ ಪಾರ್ಟಿಗೆ ಬ್ರೇಕ್..! ಹೊಸ ವರ್ಷಕ್ಕೆ ನಂದಿ ಬೆಟ್ಟಕ್ಕಿಲ್ಲ ಪ್ರವೇಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News