ಗಂಡು ಮಗುವಿಗೆ ಜನ್ಮ ನೀಡಿದ ರಾಣಿ ತ್ರಿಷಿಕ ಕುಮಾರಿ ದೇವಿ

ಕುಟುಂಬವು ಜನನ ವಿವರಗಳನ್ನು ಪ್ರಕಟಿಸಬಾರದು ಎಂದು ಆಸ್ಪತ್ರೆ ಅಧಿಕಾರಿಗಳಿಗೆ ಮನವಿ ಮಾಡಿದೆ.

Last Updated : Dec 7, 2017, 08:53 AM IST
ಗಂಡು ಮಗುವಿಗೆ ಜನ್ಮ ನೀಡಿದ ರಾಣಿ ತ್ರಿಷಿಕ ಕುಮಾರಿ ದೇವಿ title=

ಬೆಂಗಳೂರು: ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ರಾಣಿ ತ್ರಿಷಿಕ ಕುಮಾರಿ ದೇವಿ ಆರೋಗ್ಯವಂತ ಗಂಡು ಮಗುವಿಗೆ ಕಳೆದ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ಮೈಸೂರು ರಾಜ ಮನೆತನಕ್ಕೆ ಯುವರಾಜನ ಆಗಮನದಿಂದಾಗಿ ಅರಮನೆಯ ಸಂತಸ ಇಮ್ಮಡಿಗೊಂಡಿದೆ.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಮೈಸೂರು ರಾಣಿ ಪ್ರಮೋದಾದೇವಿ 2015ರ ಫೆಬ್ರವರಿ 23ರಂದು ದತ್ತು ತೆಗೆದುಕೊಂಡರು. ನಂತರ ಮೈಸೂರು ರಾಜ ಮನೆತನದ 27ನೇ ಮಹಾರಾಜರಾಗಿದ್ದಾರೆ. 

2016 ರ ಜೂನ್ 27 ರಂದು, ಅವರ ಪಟ್ಟಾಭಿಷೇಕದ ನಂತರ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಸ್ಥಾನದ ಡುಂಗರಪುರ ರಾಜ ಕುಟುಂಬದ ಹರ್ಷವರ್ಧನ್ ಸಿಂಗ್ ಮತ್ತು ಮಹೇಶ್ರೀ ಕುಮಾರಿ ಅವರ ಮಗಳು ತ್ರಿಷಿಕಾ ಕುಮಾರಿ ಅವರನ್ನು ಮದುವೆಯಾದರು. 

Trending News