ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ 15 ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (Anti-Corruption Bureau- ACB) ದಾಳಿ ನಡೆಸಿದೆ. 15 ಅಧಿಕಾರಿಗಳಿಗೆ ಸಂಬಂಧಪಟ್ಟ 60 ಸ್ಥಳಗಳ ಮೇಲೆ ನಡೆದ ಈ ದಾಳಿಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ನಗದು, ಆಸ್ತಿ ಪತ್ರಗಳು ಪತ್ತೆಯಾಗಿವೆ.
ದಾಳಿಯಲ್ಲಿ 100 ಅಧಿಕಾರಿಗಳು ಭಾಗಿ :
ಕರ್ನಾಟಕ ಸರ್ಕಾರದ 15 ಅಧಿಕಾರಿಗಳ ವಿರುದ್ಧ ನಡೆದ ದಾಳಿಯಲ್ಲಿ 8 ಎಸ್ಪಿಗಳು, 100 ಅಧಿಕಾರಿಗಳು ಮತ್ತು 300 ನೌಕರರು ಪಾಲ್ಗೊಂಡಿದ್ದರು. ಭ್ರಷ್ಟಾಚಾರ ನಿಗ್ರಹ ದಳದ (ACB) ತಂಡವು ಸರ್ಕಾರಿ ಅಧಿಕಾರಿಗಳಿಗೆ ಸೇರಿದ 60 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಶೋಧದ ನಂತರ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : MLC ಚುನಾವಣೆ: ಬರೀ ಏಳು ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿದ ಜೆಡಿಎಸ್
8.5 ಕಿಲೋ ಚಿನ್ನಾಭರಣ ಹಾಗೂ ಲಕ್ಷಗಟ್ಟಲೆ ನಗದು ಪತ್ತೆ :
ಭ್ರಷ್ಟಾಚಾರ ನಿಗ್ರಹ ದಳದ (ACB) ನಡೆಸಿದ ಶೋಧ ಕಾರ್ಯಾಚರಣೆ ವೇಳೆ 8.5 ಕೆಜಿಗೂ ಹೆಚ್ಚು ಚಿನ್ನ ಮತ್ತು ಲಕ್ಷಗಟ್ಟಲೆ ನಗದು ಪತ್ತೆಯಾಗಿದೆ. ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರ ಮನೆಯಲ್ಲಿ ಸುಮಾರು 7 ಕೆಜಿ ಚಿನ್ನ, ಗೋಕಾಕ್ ಹಿರಿಯ ಮೋಟಾರು ನಿರೀಕ್ಷಕ ಸದಾಶಿವ ಮಾರಲಿಂಗಣ್ಣನವರ್ ಅವರ ಮನೆಯಲ್ಲಿ 1.135 ಕೆಜಿ ಚಿನ್ನ ಮತ್ತು 822172 ರೂ.ನಗದು ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿ ತಿಳಿಸಿದ್ದಾರೆ. ಟಿ.ಎಸ್.ರುದ್ರೇಶಪ್ಪ ಅವರ ಗದಗನ ನಿವಾಸದಲ್ಲಿ ಕನಿಷ್ಠ 3.5 ಕೋಟಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿವೆ. ಇದಲ್ಲದೆ ಅವರ ಮನೆಯಲ್ಲಿದ್ದ 15 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಈ ಅಧಿಕಾರಿಗಳ ಮೇಲೆ ದಾಳಿ
1. ಕೆ.ಎಸ್.ಲಿಂಗೇಗೌಡ
ಎಕ್ಸಿಕ್ಯೂಟಿವ್ ಇಂಜಿನಿಯರ್, ಸ್ಮಾರ್ಟ್ ಸಿಟಿ, ಮಂಗಳೂರು
2. ಶ್ರೀನಿವಾಸ್ ಕೆ.
ಎಕ್ಸಿಕ್ಯೂಟಿವ್ ಇಂಜಿನಿಯರ್, ಎಚ್‌ಎಲ್‌ಬಿಸಿ ಮಂಡ್ಯ
3. ಲಕ್ಷ್ಮೀ
ನರಶಿಮಯ್ಯ ಕಂದಾಯ ನಿರೀಕ್ಷಕರು, ದೊಡ್ಡಬಳ್ಳಾಪುರ
4. ವಾಸುದೇವ್
ಮಾಜಿ ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ ಬೆಂಗಳೂರು
5. ಬಿ ಕೃಷ್ಣಾರೆಡ್ಡಿ
ಜನರಲ್ ಮ್ಯಾನೇಜರ್, ನಂದಿನಿ ಡೈರಿ, ಬೆಂಗಳೂರು
6. ಟಿ.ಎಸ್.ರುದ್ರೇಶಪ್ಪ
ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಗದಗ
7. ಎ.ಕೆ.ಮಾಸ್ತಿ
ಸಹಕಾರಿ ಅಭಿವೃದ್ಧಿ ಅಧಿಕಾರಿ, ಸವದತ್ತಿ
8. ಸದಾಶಿವ ಮಾರಲಿಂಗಣ್ಣನವರ್
ಹಿರಿಯ ಮೋಟಾರು ನಿರೀಕ್ಷಕರು, ಗೋಕಾಕ
9. ನಾಥಜಿ ಹಿರಾಜಿ ಪಾಟೀಲ್
ಗ್ರೂಪ್ ಸಿ, ಬೆಳಗಾವಿ, ಹೆಸ್ಕಾಂ
10. ಕೆ.ಎಸ್.ಶಿವಾನಂದ
ನಿವೃತ್ತ ಉಪನೋಂದಣಾಧಿಕಾರಿ, ಬಳ್ಳಾರಿ
11. ರಾಜಶೇಖರ್
ಫಿಸಿಯೋಥೆರಪಿಸ್ಟ್, ಸರ್ಕಾರಿ ಆಸ್ಪತ್ರೆ, ಯಲಹಂಕ
12. ಮಾಯಣ್ಣ ಎಂ ಎಫ್‌ಡಿಸಿ
FDC . ಬಿಬಿಎಂಪಿ.
13. LC ನಾಗರಾಜ್ ಕರ್ಬಟಕ್
ಆಡಳಿತ ಸೇವೆ, KAS, ಸಕಾಲ, ಬೆಂಗಳೂರು
14. ಜಿವಿ ಗಿರಿ
ಗ್ರೂಪ್-ಡಿ, ಬಿಬಿಎಂಪಿ, ಯಶವಂತಪುರ, ಬೆಂಗಳೂರು
15.
ಎಸ್.ಎಂ.ಬಿರಾದಾರ್ ಕಿರಿಯ ಅಭಿಯಂತರರು, PWD ಇಲಾಖೆ, ಜೇವರ್ಗಿ
ಇದನ್ನೂ ಓದಿ : Karnataka MLC Election: ‘ಕೈ’ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಡಿಕೆಶಿ ಸಂಬಂಧಿ, ಹೆಬ್ಬಾಳ್ಕರ್ ತಮ್ಮನಿಗೆ ಟಿಕೆಟ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.