Raghavapura Jatre: ರಾಘವಪುರ ಜಾತ್ರೆಯಲ್ಲಿ ರಥ ಎಳೆದ ಮಹಿಳೆಯರು!!

ಶನಿವಾರ ಪಟ್ಟಲದಮ್ಮ ದೇವಿಯ ಉತ್ಸವ ಮೂರ್ತಿಯನ್ನು ಅಡ್ಡ ಪಲ್ಲಕ್ಕಿಯಲ್ಲಿರಿಸಿ ದೇವಾಲಯದ ಪ್ರದಕ್ಷಿಣೆ ಹಾಕಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಸಂಜೆ ಉತ್ಸವ ಮೂರ್ತಿಯನ್ನು ತೇರಿನಲ್ಲಿರಿಸಿ ಪುರುಷರು ರಥ ಎಳೆದಿದ್ದರು. 

Written by - Zee Kannada News Desk | Last Updated : Mar 21, 2022, 09:19 PM IST
  • ಗುಂಡ್ಲುಪೇಟೆ ತಾಲೂಕಿನ‌ ರಾಘವಾಪುರ ಗ್ರಾಮದ ಶ್ರೀ ಪಟ್ಟಲದಮ್ಮ ಜಾತ್ರಾ ಮಹೋತ್ಸವ
  • ಈ ಗ್ರಾಮದಲ್ಲಿ ಪ್ರತಿವರ್ಷ ಸಂಜೆ ಸಮಯ ಜರುಗುವ ರಥೋತ್ಸವ
  • ರಥೋತ್ಸವದಲ್ಲಿ ಮಹಿಳೆಯರು ಮತ್ತು ಪುರುಷರು ಪ್ರತ್ಯೇಕವಾಗಿ ರಥ ಎಳೆದು ಇಷ್ಟಾರ್ಥಕ್ಕಾಗಿ ಪ್ರಾರ್ಥಿಸುತ್ತಾರೆ.
Raghavapura Jatre:  ರಾಘವಪುರ ಜಾತ್ರೆಯಲ್ಲಿ ರಥ ಎಳೆದ ಮಹಿಳೆಯರು!!  title=
Raghavpur Jatre

ಚಾಮರಾಜನಗರ: ಈ ಗ್ರಾಮದಲ್ಲಿ ಪ್ರತಿವರ್ಷ ಸಂಜೆ ಸಮಯ ರಥೋತ್ಸವ ಜರುಗಲಿದ್ದು ಮಹಿಳೆಯರು ಮತ್ತು ಪುರುಷರು ಪ್ರತ್ಯೇಕವಾಗಿ ರಥ ಎಳೆದು ಇಷ್ಟಾರ್ಥಕ್ಕಾಗಿ ಪ್ರಾರ್ಥಿಸುತ್ತಾರೆ.

ಹೌದು..., ಗುಂಡ್ಲುಪೇಟೆ (Gundlupet) ತಾಲೂಕಿನ‌ ರಾಘವಾಪುರ ಗ್ರಾಮದ ಶ್ರೀ ಪಟ್ಟಲದಮ್ಮ ಜಾತ್ರಾ ಮಹೋತ್ಸವ ಶನಿವಾರ ಮತ್ತು ಭಾನುವಾರ  ವಿಜೃಂಭಣೆಯಿಂದ ನಡೆದಿದ್ದು ಮೊದಲ ದಿನ ಪುರುಷರು ರಥ ಎಳೆದಿದ್ದರೇ, ಎರಡನೇ ದಿನವಾದ ಭಾನುವಾರ ಮಹಿಳೆಯರು ರಥ ಎಳೆದು ಭಕ್ತಿಭಾವ ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ- Chanakya Niti : ಈ ಸ್ಥಳಗಳಲ್ಲಿ ಮನಸ್ಸು ಬಿಚ್ಚಿ ಹಣ ಖರ್ಚು ಮಾಡಿ : ಇದರಿಂದ ನಿಮ್ಮಗೆ ಆರ್ಥಿಕ ಲಾಭ ಹೆಚ್ಚಾಗುತ್ತದೆ!

ಶನಿವಾರ ಪಟ್ಟಲದಮ್ಮ ದೇವಿಯ (Pattaladamma Devi) ಉತ್ಸವ ಮೂರ್ತಿಯನ್ನು ಅಡ್ಡ ಪಲ್ಲಕ್ಕಿಯಲ್ಲಿರಿಸಿ ದೇವಾಲಯದ ಪ್ರದಕ್ಷಿಣೆ ಹಾಕಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಸಂಜೆ ಉತ್ಸವ ಮೂರ್ತಿಯನ್ನು ತೇರಿನಲ್ಲಿರಿಸಿ ಪುರುಷರು ರಥ ಎಳೆದಿದ್ದರು. ಜಾತ್ರೆಯ ಎರಡನೇ ದಿನವಾದ ಭಾನುವಾರ ಮಹಿಳೆಯರು ವಿವಿಧ ದೇವರ ಹಾಡುಗಳನ್ನು ಹಾಡುತ್ತಾ ತೇರನ್ನು ಎಳೆದು ಮೂಲ ಸ್ಥಾನಕ್ಕೆ ನಿಲ್ಲಿಸಿದ್ದಾರೆ.

ಇದನ್ನೂ ಓದಿ- Unique Holi: ಭಾರತದ ಈ ವಿಶಿಷ್ಟ ಗ್ರಾಮದಲ್ಲಿ ಹೋಳಿ ಹಬ್ಬದಂದು ಕಲ್ಲುಗಳ ಸುರಿಮಳೆಯಾಗುತ್ತದೆ

ರಥ ಸಾಗುವ ದಾರಿಯುದ್ದಕ್ಕೂ ತೇರಿನ ಚಕ್ರಕ್ಕೆ ಭಕ್ತಾದಿಗಳು ಕಾಯಿ ಒಡೆದು ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದ್ದು ಮತ್ತೊಂದು ವಿಶೇಷ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News