PSI Recruitment Scam: ಅಕ್ರಮದ ಮಾಸ್ಟರ್ ಮೈಂಡ್ DySP ಶಾಂತಕುಮಾರ್ ಬಂಧನ

545 PSI ಹುದ್ದೆಗಳ ನೇಮಕಾತಿ ಹಗರಣ ಪ್ರಕರಣ ಸಂಬಂಧ CID ಅಧಿಕಾರಿಗಳು ಅಕ್ರಮದ ಮಾಸ್ಟರ್ ಮೈಂಡ್ DYSP ಅರೆಸ್ಟ್ ಶಾಂತಕುಮಾರ್ ಬಂಧಿಸಲಾಗಿದೆ.

Written by - Zee Kannada News Desk | Last Updated : May 12, 2022, 09:33 PM IST
  • ಪಿಎಸ್‍ಐ ನೇಮಕಾತಿ ಅಕ್ರಮದ ಮಾಸ್ಟರ್ ಮೈಂಡ್ DySP ಶಾಂತಕುಮಾರ್ ಬಂಧನ
  • ವಿಚಾರಣೆ ಬಳಿಕ ನೇಮಕಾತಿ ವಿಭಾಗದ ಶಾಂತಕುಮಾರ್ ಬಂಧಿಸಿದ ಸಿಐಡಿ ಅಧಿಕಾರಿಗಳು
  • ಅಮಾನತ್ತುಗೊಂಡಿದ್ದ DYSP ಮಲ್ಲಿಕಾರ್ಜುನ ಸಾಲಿ ಮತ್ತು CPI ಆನಂದ ಮೇತ್ರೆ ಜೈಲುಪಾಲು
PSI Recruitment Scam: ಅಕ್ರಮದ ಮಾಸ್ಟರ್ ಮೈಂಡ್ DySP ಶಾಂತಕುಮಾರ್ ಬಂಧನ title=
DySP ಶಾಂತಕುಮಾರ್ ಬಂಧನ

ಬೆಂಗಳೂರು: 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಹಗರಣ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಅಕ್ರಮದ ಮಾಸ್ಟರ್ ಮೈಂಡ್ DySP ಶಾಂತಕುಮಾರ್ ಬಂಧಿಸಲಾಗಿದೆ.

ಇಂದು ಮಧ್ಯಾಹ್ನ ನೇಮಕಾತಿ ವಿಭಾಗದ ಶಾಂತಕುಮಾರ್ ಅವರನ್ನು ಕರೆತಂದು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ. 2 ದಿನಗಳ ಹಿಂದಷ್ಟೇ ನೇಮಕಾತಿ ವಿಭಾಗದ ನಾಲ್ವರು ಅಧಿಕಾರಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಪಿಎಸ್‍ಐ ನೇಮಕಾತಿ ಅಕ್ರಮ ಬಯಲು ಆದಾಗಿನಿಂದ ಶಾಂತಕುಮಾರ್ ಹೆಸರು ಓಡಾಡುತ್ತಿತ್ತು. ಕಳೆದ 2 ದಿನದ ಹಿಂದೆ ಶಾಂತಕುಮಾರ್‍ಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ತಿಳಿಸಿತ್ತು.

ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಡಿವೈಎಸ್‍ಪಿ ಶಾಂತಕುಮಾರ್ ಕೈವಾಡ ಇರುವ ಶಂಕೆ ವ್ಯಕ್ತವಾಗಿತ್ತು. ಸುಮಾರು 10 ವರ್ಷಗಳಿಗೂ ಹೆಚ್ಚು ಕಾಲ ನೇಮಕಾತಿ ವಿಭಾಗದಲ್ಲಿ ಶಾಂತಕುಮಾರ್ ಡಿವೈಎಸ್‍ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಪಿಎಸ್‍ಐ ಅಕ್ರಮ ಪ್ರಕರಣ ಹೊರಬರುತ್ತಲೇ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಈ ನೇಮಕಾತಿ ಹಗರಣದ ಮೊದಲನೇ ಕಿಂಗ್‍ಪಿನ್ ಶಾಂತಕುಮಾರ್ ಆಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಡಿಕೆಶಿ ವಿರುದ್ಧ ಸಿಡಿದೆದ್ದ ಮಾಜಿ ಸಂಸದೆ ರಮ್ಯಾ..!

ಜೈಲು ಸೇರಿದ ಅಮಾನತುಗೊಂಡ ಡಿವೈಎಸ್‍ಪಿ & ಸಿಪಿಐ

ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಅಮಾನತ್ತುಗೊಂಡಿದ್ದ ಡಿವೈಎಸ್‍ಪಿ ಮಲ್ಲಿಕಾರ್ಜುನ ಸಾಲಿ ಮತ್ತು ಸಿಪಿಐ ಆನಂದ ಮೇತ್ರೆ ಜೈಲು ಸೇರಿದ್ದಾರೆ. ಸಿಐಡಿ ಕಸ್ಟಡಿ ಅವಧಿ ಅಂತ್ಯ ಹಿನ್ನಲೆ ಇಂದು ಇವರಿಬ್ಬರನ್ನೂ ಕಲಬುರಗಿಯ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಅಭ್ಯರ್ಥಿಗಳಿಬ್ಬರ ಜಾಮೀನು ಅರ್ಜಿ ವಜಾ

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಅಕ್ರಮದ ಮೂಲಕ ಪಾಸಾದ ಅಭ್ಯರ್ಥಿಗಳಿಬ್ಬರ ಜಾಮೀನು ಅರ್ಜಿ ವಜಾ ಮಾಡಲಾಗಿದೆ. ಕಲಬುರಗಿ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಜಾಮೀನು ತಿರಸ್ಕರಿಸಿದೆ. ಬಂಧಿತ ಅಭ್ಯರ್ಥಿಗಳಾದ ಚೇತನ ನಂದಗಾಂವ ಮತ್ತು ಅರುಣಕುಮಾರ ಇಬ್ಬರೂ ಜಾಮೀನಿಗೆ ಮನವಿ ಸಲ್ಲಿಸಿದ್ದರು. ಈ ಇಬ್ಬರೂ ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಶುಕ್ಲಾಕ್ಷ ಪಾಲನ್ ತಿರಸ್ಕರಿಸಿದ್ದಾರೆ. ಹಣ ಕೊಟ್ಟು ಅಕ್ರಮದ ಮೂಲಕ ಪಾಸಾದ ಅಭ್ಯರ್ಥಿಗಳಿಗೆ ಇನ್ನೂ ಜೈಲೇ ಗತಿಯಾಗಿದೆ. ಇದುವರೆಗೆ ಈ ಪ್ರಕರಣದಲ್ಲಿ ಒಬ್ಬನೇ ಒಬ್ಬ ಆರೋಪಿಗೂ ಕೋರ್ಟ್ ಜಾಮೀನು ನೀಡಿಲ್ಲ.

ಇದನ್ನೂ ಓದಿ: DKS v/s Ramya: ‘ನೀನೇ ಸಾಕಿದಾ ಗಿಣಿ ಹದ್ದಾಗಿ ಕುಕ್ಕಿತಲ್ಲೋ...!’

ರಾಜ್ಯಪಾಲರಿಗೆ ಆಯ್ಕೆಯಾದ ಅಭ್ಯರ್ಥಿಗಳ ಮನವಿ

PSI ಮರುಪರೀಕ್ಷೆ ನಡೆಸದಂತೆ ಸರ್ಕಾರಕ್ಕೆ ನಿರ್ದೇಶನ‌ ನೀಡುವಂತೆ ರಾಜ್ಯಪಾಲರಿಗೆ ಆಯ್ಕೆಯಾದ ಅಭ್ಯರ್ಥಿಗಳಿಂದ ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News