Watch Video: Virat Kohli-Rohit Sharma ಮೇಲೆ ಲಾಠಿ ಚಾರ್ಜ್, ಟಿ20 ವಿಶ್ವಕಪ್ ವಿರುದ್ಧ ಆಕ್ರೋಶ ಹೊರಹಾಕಿದ ಜನ!

T20 World Cup 2024: ಮುಂಬರುವ ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ತಂಡ ಪ್ರಕಟಗೊಂಡ ನಂತರ ಜನ ಭಾರಿ ಆಕ್ರೋಶಗೊಂಡಿದ್ದಾರೆ. ಈ ಆಕ್ರೋಶ ಇದೀಗ ಪ್ರತಿಭಟನೆಯ ರೂಪ ಪಡೆದುಕೊಂಡಿದೆ. ಹೌದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ.  

Written by - Nitin Tabib | Last Updated : May 3, 2024, 05:01 PM IST
  • ಪ್ರಸಕ್ತ ಋತುವಿನಲ್ಲಿ ಆಡಿದ 10 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಒಂದೇ ಒಂದು ಅರ್ಧಶತಕವನ್ನು ಗಳಿಸಿಲ್ಲ
  • ಮತ್ತು ಅವರ ಬ್ಯಾಟಿಂಗ್ ಸರಾಸರಿ 22 ಕ್ಕಿಂತ ಕಡಿಮೆ ಇದೆ. ಇದಲ್ಲದೇ ಬೌಲಿಂಗ್ ನಲ್ಲಿ ಕೇವಲ 5 ವಿಕೆಟ್ ಪಡೆದ
  • ಮೇಲೂ ಅವರನ್ನು ಟೀಂ ಇಂಡಿಯಾದ ಉಪನಾಯಕನನ್ನಾಗಿ ಮಾಡಿರುವುದು ಹಲವರಿಗೆ ಅರ್ಥವಾಗುತ್ತಿಲ್ಲ.
Watch Video: Virat Kohli-Rohit Sharma ಮೇಲೆ ಲಾಠಿ ಚಾರ್ಜ್, ಟಿ20 ವಿಶ್ವಕಪ್ ವಿರುದ್ಧ ಆಕ್ರೋಶ ಹೊರಹಾಕಿದ ಜನ! title=

Protest Against T20 World Cup Squad 2024: ಜೂನ್ 1 ರಿಂದ ಆರಂಭಗೊಳ್ಳಲಿರುವ T20 ವಿಶ್ವಕಪ್ 2024 ಕ್ಕಾಗಿ ಟೀಮ್ ಇಂಡಿಯಾವನ್ನು ಘೋಷಣೆಯಾದ ಬಳಿಕ ಜನರು ತುಂಬಾ ಆಕ್ರೋಶಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ತಂಡದ ಆಯ್ಕೆ ಬಗ್ಗೆ ಜನರು ವಿಭಿನ್ನ ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಈ ಕುರಿತಾದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು ಅದರಲ್ಲಿ ಕೆಲವರು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಪೋಸ್ಟರ್ ಗಳನ್ನು ಹಾಕಿ ಲಾಠಿ ಪ್ರಹಾರ ನಡೆಸುತ್ತಿದ್ದಾರೆ. ಟಿ20 ವಿಶ್ವಕಪ್‌ಗೆ ಭಾರತ ತಂಡದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ವಿಶ್ವಕಪ್ ತಂಡವನ್ನು ವಿರೋಧಿಸುತ್ತಿರುವ ಜನರು ಕೆಎಲ್ ರಾಹುಲ್, ಭುವನೇಶ್ವರ್ ಕುಮಾರ್ ಮತ್ತು ಇತರ ಅನೇಕ ಆಟಗಾರರನ್ನು ಬೆಂಬಲಿಸಲು ಕೈಯಲ್ಲಿ ಪೋಸ್ಟರ್‌ಗಳನ್ನು ಹಿಡಿದಿದ್ದಾರೆ.

ಇದನ್ನೂ ಓದಿ-IPL 2024: SRH ಗೆಲುವಿನ ಬಳಿಕ ಹುಚ್ಚೆದ್ದು ಕುಣಿದ Kavya Maran, ಪಂದ್ಯದ ಬಳಿಕ ಪಾರ್ಟಿ ಮಾಡಿದ ಆಟಗಾರರು!

ಈ ವಿಡಿಯೋದಲ್ಲಿ ಜನರು ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಪೋಸ್ಟರ್ ಅನ್ನು ಟಿವಿಗೆ ಅಂಟಿಸಿದ್ದಾರೆ ಮತ್ತು ಜನರು ಅವರ ಮೇಲೆ ಲಾಠಿ ಬೀಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೊರತುಪಡಿಸಿ, ಜನರು ರಿಷಬ್ ಪಂತ್ ಅವರ ಪೋಸ್ಟರ್‌ಗಳನ್ನು ಸಹ ಅವರ ಕಾಲಿನ ಬಳಿ ಇಟ್ಟುಕೊಂಡಿದ್ದಾರೆ. ಗುಂಪಿನಲ್ಲಿರುವ ವ್ಯಕ್ತಿಯೊಬ್ಬರು "ಟೀಮ್ ಇಂಡಿಯಾ ಹಾಯ್-ಹಾಯ್, ನಾಚಿಕೆಗೆಟ್ಟವರೆ ನಿಮಗೆ ನಾಚಿಕೆಯಾಗಬೇಕು, ಸ್ವಲ್ಪ ನೀರಿನಲ್ಲಿ ಮುಳುಗಿ ಸಾಯಿರಿ"  ಎಂದು ಬರೆದಿರುವ ಬೋರ್ಡ್ ಹಿಡಿದು ನಿಂತಿದ್ದಾರೆ. ತನ್ಮೂಲಕ ಕೆಎಲ್ ರಾಹುಲ್, ಭುವನೇಶ್ವರ್ ಕುಮಾರ್ ಅವರನ್ನು ಬೆಂಬಲಿಸಲಾಗುತ್ತಿದೆ. ಆದರೆ ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ (Hardik Pandya) ಪೋಸ್ಟರ್ ಹರಿದು ವ್ಯಕ್ತಿಯೊಬ್ಬರು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಈ ವೀಡಿಯೊ ಎಲ್ಲಿಂದ ಹೊರಹೊಮ್ಮಿದೆ ಎಂಬುದನ್ನು ಝೀ ವಾಹಿನಿ ಖಚಿತಪಡಿಸುವುದಿಲ್ಲ. ಆದರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು (T20 World Cup 2024 Viral Video), ಅಭಿಮಾನಿಗಳು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ-'Happy Birthday My Love' ತನ್ನ ಪ್ರೀತಿಗೆ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ Virat Kohli

ಪ್ರಸಕ್ತ ಋತುವಿನಲ್ಲಿ ಆಡಿದ 10 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಒಂದೇ ಒಂದು ಅರ್ಧಶತಕವನ್ನು ಗಳಿಸಿಲ್ಲ ಮತ್ತು ಅವರ ಬ್ಯಾಟಿಂಗ್ ಸರಾಸರಿ 22 ಕ್ಕಿಂತ ಕಡಿಮೆ ಇದೆ. ಇದಲ್ಲದೇ ಬೌಲಿಂಗ್ ನಲ್ಲಿ ಕೇವಲ 5 ವಿಕೆಟ್ ಪಡೆದ ಮೇಲೂ ಅವರನ್ನು ಟೀಂ ಇಂಡಿಯಾದ ಉಪನಾಯಕನನ್ನಾಗಿ ಮಾಡಿರುವುದು ಹಲವರಿಗೆ ಅರ್ಥವಾಗುತ್ತಿಲ್ಲ. 15 ಆಟಗಾರರ ಪೈಕಿ ರಿಂಕು ಸಿಂಗ್ ಆಯ್ಕೆಯಾಗದಿರುವ ಬಗ್ಗೆ ಜನರು ವಿಶೇಷವಾಗಿ ಆಕ್ರೋಶಗೊಂಡಿದ್ದಾರೆ. ರಿಂಕು ಸಿಂಗ್ (Rinku Singh) ಕಳೆದ ಒಂದು ವರ್ಷದಲ್ಲಿ 15 T20 ಪಂದ್ಯಗಳಲ್ಲಿ 89 ರ ಅತ್ಯುತ್ತಮ ಸರಾಸರಿಯಲ್ಲಿ 356 ರನ್ ಗಳಿಸಿದ್ದಾರೆ. ಆದರೂ ಅವರನ್ನು ಆಯ್ಕೆ ಮಾಡಲಾಗಿಲ್ಲ. ಕಳಪೆ ಫಾರ್ಮ್ ನಡುವೆಯೂ ರವೀಂದ್ರ ಜಡೇಜಾ (Ravindra Jadeja) ಭಾರತ ತಂಡಕ್ಕೆ ಆಗಮಿಸಿದ್ದಾರೆ. ಆಯ್ಕೆಗಾರರ ​​ಇಂತಹ ನಿರ್ಧಾರಗಳಿಂದಾಗಿ ಪ್ರತಿಭಟನೆಗಳು ಇನ್ನೂ ಮುಂದೆ ಕಂಡರೂ ಕೂಡ ಆಶ್ಚರ್ಯಪಡಬೇಕಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News