Chitradurga: ಜಿಲ್ಲಾಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ವೈದ್ಯನ ಪ್ರಿ-ವೆಡ್ಡಿಂಗ್ ಶೂಟ್ !

ಚಿತ್ರದುರ್ಗ ತಾಲೂಕಿನ ಭರಮಸಾಗರ ಹೋಬಳಿ ಮಟ್ಟದ ಆಸ್ಪತ್ರೆಯಲ್ಲಿ ಡಾ.ಅಭಿಷೇಕ್ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಈಗ ಅದೇ ಆಸ್ಪತ್ರೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

Written by - Zee Kannada News Desk | Last Updated : Feb 9, 2024, 10:05 PM IST
  • ಆಪರೇಷನ್ ಥಿಯೇಟರ್‌ನಲ್ಲಿಯೇ ಪ್ರಿ-ವೆಡ್ಡಿಂಗ್ ಶೂಟ್ ಮಾಡಿದ ವೈದ್ಯ
  • ಚಿತ್ರದುರ್ಗ ತಾಲೂಕಿನ ಭರಮಸಾಗರ ಹೋಬಳಿ ಮಟ್ಟದ ಆಸ್ಪತ್ರೆಯಲ್ಲಿ ಘಟನೆ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆದ ಬಳಿಕ ವ್ಯಾಪಕ ಟೀಕೆ
Chitradurga: ಜಿಲ್ಲಾಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ವೈದ್ಯನ ಪ್ರಿ-ವೆಡ್ಡಿಂಗ್ ಶೂಟ್ ! title=
ಆಪರೇಷನ್ ಥಿಯೇಟರ್‌ನಲ್ಲಿಯೇ ಪ್ರಿ-ವೆಡ್ಡಿಂಗ್ ಶೂಟ್!

ಚಿತ್ರದುರ್ಗ: ಮದುವೆಗೂ ಮುನ್ನ ಜೋಡಿ ಹಕ್ಕಿಗಳು ಫೋಟೋಶೂಟ್ ಮಾಡಿಸುವುದು ಕಾಮನ್. ಟ್ರೆಂಡಿಂಗ್ ಇದ್ದಂತ ಸಮಯದಲ್ಲಿ ನಾರ್ಮಲ್ ಆಗಿ ಫೋಟೋಶೂಟ್ ಮಾಡಿಸುತ್ತಾ ಇದ್ದರು. ಆದರೆ ಈಗ ಫೋಟೋಶೂಟ್ ಕ್ರೇಜ್ ಹಾಗೇ ಇದೆ. ಅನೇಕರು ಡಿಫ್ರೆಂಟ್ ಡಿಫ್ರೆಂಟ್ ಥೀಮ್‌ನಲ್ಲಿ ಫೋಟೋಶೂಟ್ ಮಾಡಿಸಲು ಪ್ಲ್ಯಾನ್ ಮಾಡುತ್ತಾರೆ.

ಕೆರೆ-ಗದ್ದೆಗಳಲ್ಲಿ, ವ್ಯವಸಾಯ ಮಾಡುವ ರೀತಿ ಸಹಜ ಜೀವನಕ್ಕೆ ಹತ್ತಿರವಿರುವಂತ ಫೋಟೋಶೂಟ್ ಮಾಡಿಸುತ್ತಾರೆ. ಅಂಥದ್ದೇ ಥಿಂಕಿಂಗ್‌ನಲ್ಲಿ ಚಿತ್ರದುರ್ಗದ ವೈದ್ಯರೊಬ್ಬರು ಆಪರೇಷನ್ ಥಿಯೇಟರ್ ಬಳಕೆ ಮಾಡಿಕೊಂಡು ಪೇಚಿಗೆ ಸಿಲುಕಿದ್ದಾರೆ.

ಇದನ್ನೂ ಓದಿ: ಬೃಹತ್‌ ಹೈ ಟೆನ್ಷನ್‌ ವಿದ್ಯುತ್‌ ಕಂಬಗಳ ದುರಸ್ತಿ ಕಾರ್ಯ

ಹೌದು, ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ವೈದ್ಯ ಡಾ.ಅಭಿಷೇಕ್ ಫೋಟೋಶೂಟ್ ಮಾಡಿಸಿದವರು. ತಮ್ಮದೇ ವೃತ್ತಿ ಬದುಕನ್ನು ಆಧಾರವಾಗಿಟ್ಟುಕೊಂಡು ಫೋಟೋಶೂಟ್ ಮಾಡಿಸುವುದಕ್ಕೆಂದು ಹೊರಟಿದ್ದರು ಎನಿಸುತ್ತದೆ. ಆದರೆ ಈಗ ಅವರ ಪ್ರಿ-ವೆಡ್ಡಿಂಗ್ ಶೂಟ್ ಟೀಕೆಗೆ, ವಿರೋಧಕ್ಕೆ ಕಾರಣವಾಗಿದೆ.

ಡಾ.ಅಭಿಷೇಕ್ ಅವರು ಆಪರೇಷನ್ ಥಿಯೇಟರ್‌ನಲ್ಲಿ ತಮ್ಮ ಮದುವೆಯ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಚಿತ್ರದುರ್ಗ ತಾಲೂಕಿನ ಭರಮಸಾಗರ ಹೋಬಳಿ ಮಟ್ಟದ ಆಸ್ಪತ್ರೆಯಲ್ಲಿ ಡಾ.ಅಭಿಷೇಕ್ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಈಗ ಅದೇ ಆಸ್ಪತ್ರೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡೋರಿಗೆ ಶಾಕಿಂಗ್‌ ನ್ಯೂಸ್

ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿಗೆ ಆಪರೇಷನ್ ಮಾಡುತ್ತಿರುವಂತೆ ವಧು-ವರ ವಿಡಿಯೋ ಶೂಟ್ ಮಾಡಿಸಿದ್ದಾರೆ. ಡಾ.ಅಭಿಷೇಕ್ ಜೋಡಿಯ ಪ್ರಿ-ವೆಡ್ಡಿಂಗ್ ಫೋಟೋಶೂಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಅನ್ನು ಇವರ ಪ್ರಿ-ವೆಡ್ಡಿಂಗ್ ಫೋಟೋಶೂಟ್‌ಗಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News