ಬೆಂಗಳೂರು : ಬಹಳ ದಿನಗಳವರೆಗೆ ಬಗೆಹರಿಯದೇ ಇದ್ದ ಸಚಿವ ಸಂಪುಟ (Cabinet) ವಿಸ್ತರಣೆಯನ್ನು ಮಾಡಿ ಮುಗಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಈಗ ನೂತನ ಸಚಿವರ ಖಾತೆಯನ್ನೂ ಹಂಚಿದ್ದಾರೆ. ಆದರೆ ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲು ಹಾಲಿ ಸಚಿವರ ಖಾತೆಯಲ್ಲೂ ಕೆಲ ಬದಲಾವಣೆ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹೊರಡಿಸಿರುವ ಆದೇಶದ ಪ್ರಕಾರ ಸಚಿವರು ಮತ್ತು ಅವರ ಖಾತೆಗಳು ಈ ಕೆಳಕಂಡಂತಿವೆ.
- ಬಸವರಾಜ್ ಬೊಮ್ಮಾಯಿ (Basavaraj Bommai) - ಗೃಹ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರ
- ಮಾಧುಸ್ವಾಮಿ - ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ
- ಆನಂದ್ ಸಿಂಗ್ - ಪ್ರವಾಸೋದ್ಯಮ, ಪರಿಸರ
- ಪ್ರಭು ಚೌಹಾಣ್ -ಪಶು ಸಂಗೋಪನೆ
- ನಾರಾಯಣ್ ಗೌಡ (Narayan Gowda) - ಕ್ರೀಡೆ, ಹಜ್ಜ್ ಮತ್ತು ವಕ್ಫ್
- ಸಿ.ಸಿ. ಪಾಟೀಲ್ - ಸಣ್ಣ ಕೈಗಾರಿಕಾ, ವಾರ್ತಾ ಇಲಾಖೆ
- ಕೋಟಾ ಶ್ರೀನಿವಾಸ್ ಪೂಜಾರಿ -ಮುಜುರಾಯಿ ಮತ್ತು ಹಿಂದುಳಿದ ವರ್ಗ
- ಡಾ. ಆರ್. ಸುಧಾಕರ್ (Dr K Sudhakar) - ಆರೋಗ್ಯ
- ಗೋಪಾಲಯ್ಯ- ತೋಟಗಾರಿಕೆ ಮತ್ತು ಸಕ್ಕರೆ
ಇದನ್ನೂ ಓದಿ - H.D.Kumaraswamy: 'ನನ್ನ ದೇಹ ಅಂತಿಮವಾಗಿ ಭೂಮಿಗೆ ಹೋಗುವುದು ರಾಮನಗರದಲ್ಲೇ'
ಹೊಸಬರು
- ಸಿ.ಪಿ. ಯೋಗೇಶ್ವರ್ (CP Yogeshwar) - ಸಣ್ಣ ನೀರಾವರಿ
- ಆರ್. ಶಂಕರ್ - ಪೌರಾಡಳಿತ, ರೇಷ್ಮೆ
- ಮುರುಗೇಶ್ ನಿರಾಣಿ - ಗಣಿ ಮತ್ತು ಭೂ ವಿಜ್ಞಾನ
- ಎಂಟಿಬಿ ನಾಗರಾಜ್ (MTB Nagaraj) - ಅಬಕಾರಿ
- ಉಮೇಶ್ ಕತ್ತಿ - ಆಹಾರ ಮತ್ತು ನಾಗರಿಕ ಸರಬರಾಜು
- ಅರವಿಂದ್ ಲಿಂಬಾವಳಿ- ಅರಣ್ಯ
- ಎಸ್. ಅಂಗಾರ - ಮೀನುಗಾರಿಕೆ, ಬಂದರು
ಇದನ್ನೂ ಓದಿ - B.S.Yediyurappa: ನೂತನ ಸಚಿವರಿಗೆ 'ಭರ್ಜರಿ ಸಿಹಿ ಸುದ್ದಿ ನೀಡಿದ ' ಸಿಎಂ ಯಡಿಯೂರಪ್ಪ..!
ಖಾತೆ ಹಂಚಿಕೆಯ ಬಳಿಕ ಯಡಿಯೂರಪ್ಪ ಅವರಿಗೆ ಹೊಸ ತಲೆಬಿಸಿ ಶುರುವಾಗಿದೆ. ಕೊಟ್ಟ ಖಾತೆ ಜವಬ್ದಾರಿ ತೆಗೆದುಕೊಳ್ಳಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ತಮಗೆ ಇಂಥದೇ ಖಾತೆ ಬೇಕೆಂದು ಕೇಳುತ್ತಿದ್ದಾರೆ ಎನ್ನಲಾಗಿದೆ.
ಎಂಟಿಬಿ ನಾಗರಾಜ್ ಅವರಿಗೆ ಅಬಕಾರಿ ಖಾತೆ ಕೊಡಲಾಗಿದ್ದು ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡುವಂತೆ ಕೇಳುತ್ತಿದ್ದಾರೆ. ಈಗಾಗಲೇ ಸಿಎಂ ಬಿಎಸ್ವೈ ಭೇಟಿ ಮಾಡಿ ಒತ್ತಡ ಹೇರಿದ್ದಾರೆ. ಅರಣ್ಯ ಖಾತೆ ಸಿಕ್ಕಿರುವ ಅರವಿಂದ ಲಿಂಬಾವಳಿ ಕೂಡ ಖಾತೆ ಬಗ್ಗೆ ಖ್ಯಾತೆ ತೆಗೆದಿದ್ದಾರೆ ಎನ್ನಲಾಗಿದೆ.
ಇದು ಹೊಸ ಸಚಿವರ ಸಮಸ್ಯೆ ಆಗಿದ್ದರೆ ಈಗಾಗಲೇ ಸಚಿವರಾಗಿದ್ದವರ ಪೈಕಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಹೊಂದಿದ್ದ ಡಾ. ಆರ್. ಸುಧಾಕರ್ ಅವರಿಂದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂಪಡೆಯಲಾಗಿದೆ. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾಗಿದ್ದ ಗೋಪಾಲಯ್ಯ ಅವರಿಂದ ಆಹಾರ ಖಾತೆ ಹಿಂಪಡೆದು ತೋಟಗಾರಿಕೆ ಮತ್ತು ಸಕ್ಕರೆ ಖಾತೆ ನೀಡಲಾಗಿದೆ. ಈ ಬಗ್ಗೆ ಅಸಮಾಧಾನಗೊಂಡಿರುವ ಡಾ. ಕೆ .ಸುಧಾಕರ್ ಮತ್ತು ಗೋಪಾಲಯ್ಯ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದ್ದಾರೆ.
ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವರಾಗಿದ್ದ ಮಾಧುಸ್ವಾಮಿ (Madhuswamy) ಅವರಿಗೆ ಈಗ ವೈದ್ಯಕೀಯ ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಜವಾಬ್ದಾರಿ ನೀಡಲಾಗಿದ್ದು ಅವರು ಕೂಡ ಖಾತೆ ಮರುಹಂಚಿಕೆ ಮಾಡಿರುವ ಸಿಎಂ ಯಡಿಯೂರಪ್ಪ ನಡೆಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ - ಮೃತರ ಹೆಸರಿನಲ್ಲಿ Pension, Ration ಪಡೆಯುತ್ತಿರುವವರಿಗೆ ಶಾಕ್ !
ಈ ಬಗ್ಗೆ ಸಚಿವರ ಜೊತೆ ಯಡಿಯೂರಪ್ಪ ಇಂದು ಮಾತನಾಡಲಿದ್ದು ಸಮಸ್ಯೆ ಬಗೆಹರಿಯುತ್ತೋ ಭುಗಿಲೇಳುತ್ತೋ ಎಂಬುದನ್ನು ಕಾದುನೋಡಬೇಕಾಗಿದೆ. ಇಂದು ಸಂಜೆ ಸಚಿವ ಸಂಪುಟ ಸಭೆ ಇದ್ದು ನೂತನ ಸಚಿವರು ಖಾತೆಯೊಂದಿಗೆ ಸಂಪುಟ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.