ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಖಾಕಿ ಸರ್ವ ಸನ್ನದ್ಧ: ಈ ಬಾರಿ ಎಲ್ಲೆಲ್ಲೂ ಪೊಲೀಸರ ಹದ್ದಿನ ಕಣ್ಣು

ಬೆಂಗಳೂರು ಪೊಲೀಸರಿಗೆ ಈದ್ಗಾ ಮೈದಾನದ ಭದ್ರತೆ ಕೂಡ ಹೆಚ್ಚುವರಿಯಾಗಿದೆ. ಮಾಣಿಕ್ ಷಾ ಮೈದಾನಕ್ಕಿಂತ ಹೆಚ್ಚಿನ ನಿಗಾವನ್ನ ಈದ್ಗಾ ಮೈದಾನದ ಮೇಲೆ ಇರಿಸಲಾಗಿದೆ.

Written by - Bhavishya Shetty | Last Updated : Aug 14, 2022, 11:26 AM IST
    • ಸ್ವಾತಂತ್ರ್ಯ ದಿನದ ಸಂಭ್ರಮದ ಜೊತೆಗೆ ಒಂದಷ್ಟು ಒತ್ತಡ ಸಹ ಹೆಚ್ಚಲಿದೆ
    • ಮಾಣಿಕ್ ಷಾ ಮೈದಾನ ಹೊರತುಪಡಿಸಿ ನಗರದ ಬೇರೆ ಕಾರ್ಯಕ್ರಮಗಳಿಗೆ ಸಹ ಪೊಲೀಸರು ಭದ್ರತೆ
    • ಮಾಣಿಕ್ ಷಾ ಮೈದಾನಕ್ಕೆ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಖಾಕಿ ಸರ್ವ ಸನ್ನದ್ಧ: ಈ ಬಾರಿ ಎಲ್ಲೆಲ್ಲೂ ಪೊಲೀಸರ ಹದ್ದಿನ ಕಣ್ಣು title=
Bengaluru Police

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಬೆಂಗಳೂರಿನಲ್ಲೂ ಈ ಬಾರಿ ಅದ್ಧೂರಿ ಸ್ವಾತಂತ್ರ್ಯ ದಿನ ಆಚರಿಸಲು ಸರ್ಕಾರ ಸಜ್ಜಾಗಿದೆ. ಸ್ವಾತಂತ್ರ್ಯ ದಿನಕ್ಕೆ ಬೆಂಗಳೂರು ಪೊಲೀಸರು ಸಹ ಸಜ್ಜಾಗಿದ್ದು, ಈ ಬಾರಿ ಸ್ವಾತಂತ್ರ್ಯ ದಿನದ ಸಂಭ್ರಮದ ಜೊತೆಗೆ ಒಂದಷ್ಟು ಒತ್ತಡ ಸಹ ಹೆಚ್ಚಲಿದೆ. ಯಾಕಂದ್ರೆ ಮಾಣಿಕ್ ಷಾ ಮೈದಾನ ಹೊರತುಪಡಿಸಿ ನಗರದ ಬೇರೆ ಕಾರ್ಯಕ್ರಮಗಳಿಗೆ ಸಹ ಪೊಲೀಸರು ಭದ್ರತೆ ಮಾಡಿಕೊಳ್ಳಬೇಕಿದೆ.

ಹೇಗಿರಲಿದೆ ಭದ್ರತೆ:

ಮಾಣಿಕ್ ಷಾ ಮೈದಾನಕ್ಕೆ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ: ಹೆಚ್ಚುವರಿ ಆಯುಕ್ತರು 1, ಡಿಸಿಪಿಗಳು 10, ಎಸಿಪಿಗಳು 19, ಇನ್ಸ್‌ಪೆಕ್ಟರ್ ಗಳು 50, ಪಿಎಸ್ಐ 100, ಮಹಿಳಾ ಪಿಎಸ್ಐ 15, ಎಎಸ್ಐ  80, ಕಾನ್ ಸ್ಟೇಬಲ್ 650, ಗಸ್ತಿನಲ್ಲಿರುವ ಪೊಲೀಸರು 150, ಕೆಎಸ್ಆರ್ ತುಕಡಿ 10, ಕ್ಯೂ ಆರ್ ಟಿ  1, ಡಿ ಸ್ವ್ಯಾಟ್ 1, ಆರ್ ಎಎಫ್ 1, 

ಇದನ್ನೂ ಓದಿ: ಬಾಲಿವುಡ್ ನಲ್ಲಿ ಅತೀ ಹೆಚ್ಚು ಬಾರಿ ನಿರ್ಮಾಣಗೊಂಡಿತ್ತು ಈ ಸ್ವಾತಂತ್ರ್ಯ ಹೋರಾಟಗಾರನ ಜೀವನ

ಇದರ ಜೊತೆಗೆ ಬೆಂಗಳೂರು ಪೊಲೀಸರಿಗೆ ಈದ್ಗಾ ಮೈದಾನದ ಭದ್ರತೆ ಕೂಡ ಹೆಚ್ಚುವರಿಯಾಗಿದೆ. ಮಾಣಿಕ್ ಷಾ ಮೈದಾನಕ್ಕಿಂತ ಹೆಚ್ಚಿನ ನಿಗಾವನ್ನ ಈದ್ಗಾ ಮೈದಾನದ ಮೇಲೆ ಇರಿಸಲಾಗಿದೆ.

ಈದ್ಗಾ ಮೈದಾನಕ್ಕೆ ಪೊಲೀಸರ ಸರ್ಪಗಾವಲು: ಹೆಚ್ಚುವರಿ ಆಯುಕ್ತರು 1, ಡಿಸಿಪಿಗಳು 3, ಎಸಿಪಿಗಳು 6, ಇನ್ಸ್‌ಪೆಕ್ಟರ್ 15, ಪಿಎಸ್ಐ 45, ಮಹಿಳಾ ಪಿಎಸ್ಐ 05, ಎಎಸ್ಐ  30, ಕಾನ್ ಸ್ಟೇಬಲ್ 300, ಗಸ್ತಿನಲ್ಲಿರುವ ಪೊಲೀಸ್ರು 20, ಕೆ ಎಸ್ ಆರ್ ಪಿ ತುಕಡಿ 5, ಸಿಎಆರ್  2 ತುಕಡಿ, ಆರ್ ಎ ಎಫ್ 1,

ಇಷ್ಟೇ ಅಲ್ಲದೆ ಕಾಂಗ್ರೆಸ್ ಅಜಾದಿ ಯಾತ್ರೆ ಹಮ್ಮಿಕೊಂಡಿದ್ದು, ಆರು ಕಿಮೀ ಯಾತ್ರೆಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: ಮನೆಯ ಮೇಲೆ ಪಾಕ್ ಧ್ವಜ ಹಾರಿಸಿದ ವ್ಯಕ್ತಿ ಬಂಧನ..!

ಕಾಂಗ್ರೆಸ್ ಯಾತ್ರೆಗೆ ಪೊಲೀಸರ ಭದ್ರತೆ:  ಡಿಸಿಪಿಗಳು 4, ಎಸಿಪಿಗಳು 15, ಇನ್ಸ್‌ಪೆಕ್ಟರ್ 20, ಪಿಎಸ್ಐ 24, ಮಹಿಳಾ ಪಿಎಸ್ಐ 03, ಎಎಸ್ಐ  15, ಕಾನ್ ಸ್ಟೇಬಲ್ 500, ಕೆ ಎಸ್ ಆರ್ ಪಿ ತುಕಡಿ 5, ಸಿಎಆರ್ ತುಕಡಿ 6,

ಇವೆಲ್ಲದರ ಜೊತೆಗೆ ಸಿಲಿಕಾನ್ ಬಿಜೆಪಿ ಕಾರ್ಯಕ್ರಮಕ್ಕೆ 300 ಮಂದಿ ಪೊಲೀಸರಿಂದ ಭದ್ರತೆ ಒದಗಿಸಲಾಗುತ್ತಿದೆ.  ಆಗಸ್ಟ್ 15ರಂದು ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದ ಕೊನೆ ದಿನವಾಗಿದ್ದು ಲಾಲ್‌ಬಾಗ್ ಗೆ ಸಾಕಷ್ಟು ಜನ ಬರುವ ನಿರೀಕ್ಷೆಯಿದೆ. ಹೀಗಾಗಿ ಅಲ್ಲೂ  ಪೊಲೀಸರು ಭದ್ರತೆ ಒದಗಿಸುತ್ತಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News