ಬೆಂಗಳೂರು: ರಸ್ತೆಯಾಗಲಿ, ನೂತನ ಕಟ್ಟಡವಾಗಲಿ ಅಥವಾ ಇನ್ನ್ಯಾವುದೇ ಮಾರ್ಕೆಟ್ ಆಗಿರಲಿ, ಈ ಪ್ರದೇಶಗಳೆಲ್ಲೆಲ್ಲಾ ಈಗ ದೊಡ್ಡ ಕಣ್ಣಿನ ದಪ್ಪ ಮಹಿಳೆಯ ಫೋಟೋ ಕಂಡು ಬರುತ್ತಿದೆ.ಈ ಫೋಟೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಲ್ಲಿ ಈ ಮಹಿಳೆಯ ಫೋಟೋವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಹಾಗಾದ್ರೆ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಗುತ್ತಿರುವ ಮಹಿಳೆ ಯಾರಾಕೆ? ಅಷ್ಟಕ್ಕೂ ಆಕೆಯ ಫೋಟೋ ಬಳಸುತ್ತಿರುವುದೇಕೆ? ಎನ್ನುವ ಕೌತುಕದ ಪ್ರಶ್ನೆಗಳು ಎಲ್ಲರಲ್ಲೂ ಮೂಡುತ್ತಿವೆ. ಈ ಕುರಿತಾಗಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಹೊರಟಾಗ ಈಕೆ ಯಾರು? ಎನ್ನುವುದರ ಬಗ್ಗೆ ಯಾವುದೇ ರೀತಿ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಸಾಮಾನ್ಯವಾಗಿ ಹೊಸ ಕಟ್ಟಡವಾಗಲಿ ಅಥವಾ ಅಂಗಡಿ ಮುಗ್ಗಟ್ಟುಗಳಾಗಲಿ ಅಂತಹ ಪ್ರದೇಶಗಳಲ್ಲಿ ದೃಷ್ಟಿ ತಗಲಬಾರದು ಎನ್ನುವ ಉದ್ದೇಶದಿಂದ ದೃಷ್ಟಿ ಬೊಂಬೆ ಇಡುವುದನ್ನು ನಾವು ನೋಡಿರುತ್ತೇವೆ.ಅದೇ ರೀತಿಯಾಗಿ ಕೆಟ್ಟ ದೃಷ್ಟಿ ಬಿಳದಿರಲಿ ಎನ್ನುವ ಉದ್ದೇಶದಿಂದಾಗಿ ಈಗ ಬಹುತೇಕ ಜನರು ಈ ಮಹಿಳೆಯ ಪೋಟೋ ಬಳಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ- ಇದು ವಿಶ್ವ ವಿನಾಶದ ಮೊದಲ ಸೂಚನೆ..! ಮರುಭೂಮಿಯಲ್ಲಿ 35 ಮೈಲಿ ಉದ್ದದ ಬಿರುಕು.. ವಿಜ್ಞಾನಿಗಳಿಂದ ಬಯಲಾಯ್ತು ಸತ್ಯ
Look what I found 😆 pic.twitter.com/nCBJzzsjb3
— Calvin (@sakshi_thinks) May 11, 2024
ಈಗ ಈ ಕುರಿತು ವಾಸ್ತು ತಜ್ಞರು ಹೇಳುವಂತೆ ಈ ಹಿಂದೆ ಕೀರ್ತಿರಾಜ ಎನ್ನುವ ಅಸುರ ನಗರ ಮತ್ತು ಹಳ್ಳಿ ಪ್ರದೇಶಗಳಿಗೆ ನುಗ್ಗಿ ಸುಂದರವಾಗಿರುವ ವಸ್ತುಗಳನ್ನೂ ನಾಶ ಮಾಡುತ್ತಿದ್ದ.ಹೀಗಾಗಿ ಅಂದಿನಿಂದ ಜನರು ಎಲ್ಲೆಡೆ ಅವನ ಮುಖವಾಡವನ್ನೇ ಬಳಸಲು ಆರಂಭಿಸಿದರು.ಏಕೆಂದರೆ ಆ ಅಸುರನಿಗೆ ತನ್ನದೇ ಮುಖವಾಡ ನಾಶ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣದಿಂದಾಗಿ ಈ ಬಳಕೆ ವ್ಯಾಪಕವಾಗಿ ಚಾಲ್ತಿಗೆ ಬಂದಿತು. ಹಾಗಾಗಿ ಬೇರೆಯವರ ಕೆಟ್ಟ ದೃಷ್ಟಿ ಬಿಳದಿರಲೆಂದು ಅಂದಿನಿಂದ ಆ ಆಸುರನ ಮುಖವಾಡವನ್ನು ಬಳಸಲಾಗುತ್ತಿದೆ. ಇದನ್ನ ಕೀರ್ತಿ ಮುಖ ಎಂದು ಕರೆಯುತ್ತಾರೆ ಹಾಗಾಗಿ ಈಗ ಈ ಫೋಟೋ ವೈರಲ್ ಆಗಿರುವುದರಿಂದ ಅನ್ಯರ ದೃಷ್ಟಿ ತಮ್ಮ ಮೇಲೆ ಬಿಳದಿರಲೆಂದು ವಕ್ರ ದೃಷ್ಟಿಯ ಮಹಿಳೆಯ ಫೋಟೋವನ್ನು ಬಳಸಲಾಗುತ್ತಿದೆ.
ಏನೇ ಆಗಲಿ ದೊಡ್ಡ ಕಣ್ಣಿನ ದಪ್ಪ ಮಹಿಳೆಯು ಈಗ ತನ್ನ ಈ ಲುಕ್ ನಿಂದ ರಾತ್ರೋ ರಾತ್ರಿ ಫೇಮಸ್ ಆಗಿರೋದಂತು ಸತ್ಯ, ಆದರೆ ಈ ಮಹಿಳೆ ಯಾರು? ಎಲ್ಲಿಯವರು ಎನ್ನುವ ಮಾಹಿತಿ ಇಂದಿಗೂ ಕೂಡ ಲಭ್ಯವಾಗಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.