ದೇಶದ 1319 ಜೈಲುಗಳಿಗೆ ಮಾದರಿಯಾದ ಪರಪ್ಪನ ಅಗ್ರಹಾರ

ದೇಶದಲ್ಲಿರುವ ಒಟ್ಟು 1319 ಜೈಲುಗಳಿಗೆ ಹೋಲಿಸಿದರೆ ಬೆಂಗಳೂರಿನ ಸೆಂಟ್ರಲ್ ಜೈಲ್ ಅತಿ ಹೆಚ್ಚು ಶುಚಿತ್ವ ಹೊಂದಿದೆ ಎಂಬ ಕೀರ್ತಿಗೆ ಪಾತ್ರವಾಗಿದೆ.‌ 

Written by - VISHWANATH HARIHARA | Edited by - Chetana Devarmani | Last Updated : Sep 8, 2022, 04:17 PM IST
  • ಅಕ್ರಮ ಚಟುವಟಿಕೆಗಳ ತಾಣ ಎಂದೇ‌ ಕುಖ್ಯಾತಿ ಪಡೆದಿದ್ದ ಪರಪ್ಪನ ಅಗ್ರಹಾರ
  • ದೇಶದ 1319 ಜೈಲುಗಳಿಗೆ ಮಾದರಿಯಾದ ಪರಪ್ಪನ ಅಗ್ರಹಾರ
  • ದೇಶದಲ್ಲೇ ಅತಿ ಹೆಚ್ಚು ಶುಚಿತ್ವ ಹೊಂದಿದೆ ಬೆಂಗಳೂರಿನ ಸೆಂಟ್ರಲ್ ಜೈಲ್
ದೇಶದ 1319 ಜೈಲುಗಳಿಗೆ ಮಾದರಿಯಾದ ಪರಪ್ಪನ ಅಗ್ರಹಾರ  title=
ಪರಪ್ಪನ ಅಗ್ರಹಾರ 

ಬೆಂಗಳೂರು: ಅಕ್ರಮ ಚಟುವಟಿಕೆಗಳ ತಾಣ ಎಂದೇ‌ ಕುಖ್ಯಾತಿ ಪಡೆದಿದ್ದ ಪರಪ್ಪನ ಅಗ್ರಹಾರ ಜೈಲು ಈಗ ದೇಶದ ಎಲ್ಲಾ ಜೈಲುಗಳಿಗೆ ಮಾದರಿಯಾಗಿದೆ. ದೇಶದಲ್ಲಿರುವ ಒಟ್ಟು 1319 ಜೈಲುಗಳಿಗೆ ಹೋಲಿಸಿದರೆ ಬೆಂಗಳೂರಿನ ಸೆಂಟ್ರಲ್ ಜೈಲ್ ಅತಿ ಹೆಚ್ಚು ಶುಚಿತ್ವ ಹೊಂದಿದೆ ಎಂಬ ಕೀರ್ತಿಗೆ ಪಾತ್ರವಾಗಿದೆ.‌ ಇದಕ್ಕೆ‌ ಪೂರಕವಾಗಿ ಕೇಂದ್ರ ಗೃಹ ಸಚಿವಾಲಯ ಅತಿ ಹೆಚ್ಚು ಶುಚಿತ್ವದ ಜೈಲು ಎಂದು ಘೋಷಿಸಿದೆ‌. 

ಪರಪ್ಪನ ಅಗ್ರಹಾರ ಜೈಲಲ್ಲಿ ಖೈದಿಗಳು ಡ್ರಗ್ಸ್ ಸೇವನೆ,  ಫೋನ್ ಬಳಕೆ  ಸೇರಿದಂತೆ ವಿವಿಧ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಪರೋಕ್ಷವಾಗಿ ಜೈಲು ಸಿಬ್ಬಂದಿ  ಅಕ್ರಮ ಚಟುವಟಿಕೆಗೆ ಸಾಥ್ ನೀಡಿದ್ದರು ಎಂಬ ಗಂಭೀರ ಆರೋಪವಿತ್ತು. ಈ ಹಿನ್ನೆಲೆ  ರಾಜ್ಯ ಸರ್ಕಾರ ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆಗೆ ಸೂಚಿಸಿತ್ತು. 

ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ಎರಡು ದಿನ ಮುಂದುವರಿಯಲಿದೆ ಮಳೆ, ಕರಾವಳಿಯಲ್ಲಿ ಆರೆಂಜ್ ಅಲರ್ಟ್

ವರದಿ ಆಧರಿಸಿ ಕೆಲ ಅಧಿಕಾರಿ ಹಾಗೂ ಸಿಬ್ಬಂದಿ ಎತ್ತಂಗಡಿ ಮಾಡಲಾಗಿತ್ತು. ಸದ್ಯ ಅಕ್ರಮ ತಡೆಗಟ್ಟಲು ಮುಖ್ಯದ್ವಾರದ ಬಳಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಎಸ್ಐಎಫ್) ಸಿಬ್ಬಂದಿಯನ್ನು ಸಹ ಹೆಚ್ಚಿನ‌‌ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಅಲ್ಲದೆ ಜೈಲಿನ ಅವ್ಯವಸ್ಥೆಗಳ ಬಗ್ಗೆ ಖೈದಿಗಳಿಂದ ದೂರು ಬಂದ ಹಿನ್ನೆಲೆ ಕ್ರಮ ಕೈಗೊಂಡ ಜೈಲಾಧಿಕಾರಿಗಳ ಕ್ರಮದ ಫಲವಾಗಿ ಪರಪ್ಪನ ಅಗ್ರಹಾರ ಜೈಲು ದೇಶದ ಇತರೆ ಜೈಲುಗಳಿಗೆ ಸದ್ಯ ಮಾದರಿಯಾಗಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣ ಹಾಗೂ ತಮಿಳುನಾಡಿನ ಪುಳಲು ಕೇಂದ್ರ ಕಾರಾಗೃಹಕ್ಕೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಲಭಿಸಿದೆ. ಬೆಂಗಳೂರು ಕೇಂದ್ರ ಕಾರಾಗೃಹ ದೇಶದಲ್ಲೇ ಅತಿ‌‌ ದೊಡ್ಡ ಜೈಲು ಎಂದು ಹೇಳಲಾಗುತ್ತಿದ್ದು, ಸದ್ಯ 5200 ಖೈದಿಗಳಿದ್ದಾರೆ.  ಜೈಲಿನ ಆಹಾರದ ಗುಣಮಟ್ಟ ಹಾಗೂ ಸ್ವಚ್ಚತೆಗಾಗಿ ಕೇಂದ್ರದ ಆಹಾರ ಭದ್ರತೆ ಹಾಗೂ ಸುರಕ್ಷತೆ ಪ್ರಾಧಿಕಾರ (ಎಫ್ ಎಸ್ ಎಸ್ಎಐ) ಹಾಗೂ ಆಲ್‌ ಇಂಡಿಯಾ ಅಧಿಕಾರಿಗಳು ಪರಿಶೀಲನೆ ನಡೆಸಿ 4 ಸ್ಟಾರ್ ರೇಟಿಂಗ್ ನೀಡಿದ್ದಾರೆ‌. 

ಕಳೆದ ತಿಂಗಳು ಐವರು ಅಧಿಕಾರಿಗಳು  ಕೇಂದ್ರ ಕಾರಾಗೃಹದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಜೈಲಿನ ಆಸ್ಪತ್ರೆ, ಕ್ಯಾಂಟಿನ್, ಖೈದಿಗಳು ಕೆಲಸ ಮಾಡುವ ಜಾಗ, ಬ್ಯಾರಕ್ ಗಳು ಹಾಗೂ ಜೈಲು ಆವರಣದಲ್ಲಿ ನೀಡಿ ಪರಿಶೀಲನೆ‌‌ ನಡೆಸಿದ್ದರು.

ಇದನ್ನೂ ಓದಿ:  ಪಿಎಸ್‌ಐ ತಲೆಗೆ ನಕಲಿ ಗನ್ ಇಟ್ಟು ಎಸ್ಕೇಪ್ ಆಗಿದ್ದ ಚಾಲಾಕಿ ಡ್ರಗ್ ಪೆಡ್ಲರ್​ ಬಂಧನ

ಕಳೆದ ತಿಂಗಳು 26ರಂದು ದೆಹಲಿಯಿಂದ ಬಂದಿದ್ದ ಅಧಿಕಾರಿಗಳ ತಂಡ 14 ಅಂಶಗಳ ಆಧಾರದ‌ ಮೇರೆಗೆ ಸ್ವಚ್ಚ ಜೈಲು‌ ಪ್ರಶಸ್ತಿ ಘೋಷಿಸಿದ್ದಾರೆ. ಜೈಲಿನಲ್ಲಿ ಅಡುಗೆ ತಯಾರಿ ಹೇಗೆ ಅಡುಗೆ ಕೋಣೆ ನಿರ್ವಹಣೆ ಮತ್ತು ಶುದ್ಧತೆ, ಅದರ ಬಗ್ಗೆ ಖೈದಿಗಳ ಜ್ಞಾನ,  ಅದರಲ್ಲಿರುವ ವಸ್ತುಗಳು ಮತ್ತು ಆಹಾರ ಪದಾರ್ಥಗಳ ಸರಿಯಾಗಿವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗಿತ್ತು. ಶೌಚಾಲಯ, ಸ್ನಾನದ ಗೃಹಗಳು ಸ್ವಚ್ಚತೆ ಖೈದಿಗಳಿಗೆ ತಕ್ಕಂತೆ ಶೌಚಾಲಯ ಇದೆಯೇ,ಆಡಳಿತ ಕೋಣೆ, ಕಡತಗಳ ನಿರ್ವಹಣೆ, ಆಸ್ಪತ್ರೆ ನಿರ್ವಹಣೆ, ಎಷ್ಟು ಮಂದಿ ವೈದ್ಯರು, ನರ್ಸ್‌ಗಳು ಇದ್ದಾರೆ. 

ಮೆಡಿಕಲ್ ಸ್ಟೋರ್‌ನಲ್ಲಿ ಎಲ್ಲ ಬಗೆಯ ಮಾತ್ರೆಗಳು ಇವೆಯೇ, ಅಲ್ಲಿನ ಸ್ವಚ್ಚತೆ ಹೇಗೆ, ಸೌಲಭ್ಯಗಳು ಹೇಗಿವೆ, ಜೈವಿಕ ತ್ಯಾಜ್ಯ ಹೇಗೆ ವಿಲೇವಾರಿ ಮಾಡುತ್ತಾರೆ. ಗರ್ಭಿಣಿಯಣಿರಿಗೆ ಯಾವ ಸೌಲಭ್ಯವಿದೆ. ಅವರಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆಯೇ, ಒಳಚರಂಡಿ, ಕೊಳಚೆ ನೀರಿನ ಶುದ್ಧೀಕರಣ ಘಟಕಗಳು ಇವೆಯೇ,ಖೈದಿಗಳಿಗೆ ಶುದ್ಧ ನೀರು ಕೊಡಲಾಗುತ್ತಿದೆಯೇ, ಜೈಲಿನಲ್ಲಿರುವ ಒಣ ಮತ್ತು ಹಸಿ ಕಸ ನಿರ್ವಹಣೆ ಹೇಗೆ ಎಂಬ  14 ಮಾನದಂಡದ ಆಧಾರದ ಮೇಲೆ ಈ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News