ನಮ್ಮ ಮೆಟ್ರೋದ ಪಾಸ್‌ಗಳಿಗೆ ಇಲ್ಲ ಬೇಡಿಕೆ: ನಿತ್ಯವೂ ಬೆರಳಣಿಕೆಯಷ್ಟು ಮಾತ್ರ ಮಾರಾಟ

ಒಂದು ದಿನದ ಪಾಸ್‌ಗೆ 200 ರೂ. ಹಾಗೂ ಮೂರು ದಿನದ ಪಾಸ್‌ಗೆ 400 ರೂ. ನೀಡಿ ಪಾಸ್‌ಗಳನ್ನು ಖರೀದಿಸುವ ಯೋಜನೆಗೆ ಏಪ್ರಿಲ್ ಎರಡರಿಂದ ಚಾಲನೆ ನೀಡಲಾಗಿತ್ತು.   

Written by - Bhavishya Shetty | Last Updated : Apr 20, 2022, 05:11 PM IST
  • ನಮ್ಮ ಮೆಟ್ರೋದ ಪಾಸ್‌ಗಳಿಗೆ ಇಲ್ಲ ಬೇಡಿಕೆ
  • ಮೆಟ್ರೋ ಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದ ಪ್ರಯಾಣಿಕರು
  • ಇಲ್ಲಿವರೆಗೂ ಕೇವಲ 450 ಪಾಸ್ ಮಾತ್ರ ಮಾರಾಟ
ನಮ್ಮ ಮೆಟ್ರೋದ ಪಾಸ್‌ಗಳಿಗೆ ಇಲ್ಲ ಬೇಡಿಕೆ: ನಿತ್ಯವೂ ಬೆರಳಣಿಕೆಯಷ್ಟು ಮಾತ್ರ ಮಾರಾಟ title=
Metro Service

ಬೆಂಗಳೂರು: ಯುಗಾದಿ ಹಬ್ಬಕ್ಕೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ಎಂದು ಬಿಎಂಆರ್‌ಸಿಎಲ್ ದಿನದ ಪಾಸ್ ಹಾಗು ಮೂರು ದಿನದ ಪಾಸ್ ಕೊಡುಗೆ ನೀಡಿತ್ತು. ಆದ್ರೆ ಈ ಒಂದು ಕೊಡುಗೆ ಮೆಟ್ರೋ ಪ್ರಿಯರ ಕೈ ಸುಡುತ್ತಿದೆ. ಏಪ್ರಿಲ್ 2ರಿಂದ ಬೆಂಗಳೂರಿನ ಎರಡೂ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಹಿತಕ್ಕಾಗಿ ನಮ್ಮ ಮೆಟ್ರೋ ನಿಗಮದ ವತಿಯಿಂದ ದಿನದ ಪಾಸ್ ಹಾಗೂ ಮೂರು ದಿನದ ಪಾಸ್‌‌ನ್ನು ಪರಿಚಯಿಸಿತ್ತು. 

ಇದನ್ನು ಓದಿ: ನಟಿ ಕಾಜಲ್‌ ಅಗರ್‌ವಾಲ್‌ ಮಗುವಿನ ಹೆಸರು ಬಹಿರಂಗ!

ಒಂದು ದಿನದ ಪಾಸ್‌ಗೆ 200 ರೂ. ಹಾಗೂ ಮೂರು ದಿನದ ಪಾಸ್‌ಗೆ 400 ರೂ. ನೀಡಿ ಪಾಸ್‌ಗಳನ್ನು ಖರೀದಿಸುವ ಯೋಜನೆಗೆ ಏಪ್ರಿಲ್ ಎರಡರಿಂದ ಚಾಲನೆ ನೀಡಲಾಗಿತ್ತು. ಅದರಂತೆ ಮೊದಲ ಎರಡು ದಿನ ಉತ್ಸಾಹ ತೋರಿದ ಮೆಟ್ರೋ ಪ್ರಿಯರು, ಆ ಬಳಿಕ ಕೈ ಸುಡುತ್ತಿದೆ ಎಂದು ದೂರವಾಗಿದ್ದಾರೆ. ಇದೀಗ ದಿನದ ಪಾಸ್ ಹಾಗು ಮೂರು ದಿನದ ಪಾಸ್‌ಗಳನ್ನ ಕೊಳ್ಳುವವರೇ ಇಲ್ಲದಂತಾಗಿದೆ. ಸಾಕಷ್ಟು ಲಾಭದ ನಿರೀಕ್ಷೆಯಲ್ಲಿದ್ದ ಬಿಎಂಆರ್‌ಸಿಎಲ್‌ ಮತ್ತಷ್ಟು ಪಾತಾಳಕ್ಕೆ ಕುಸಿಯುವಷ್ಟು ನಷ್ಟದ ಹಾದಿ ತುಳಿದಿದೆ.

ಮೆಟ್ರೋ ಪ್ರಿಯರ ಜೇಬಿಗೆ ಕತ್ತರಿ ಹಾಕಿತಾ ಬಿಎಂಆರ್‌ಸಿಎಲ್:
ನಗರದ ಮೂಲೆ ಮೂಲೆಗೂ ಸಂಚಾರ ಸೇವೆ ನೀಡಿರುವ ಬಿಎಂಟಿಸಿ ಪಾಸ್‌ಗೆ ದಿನಕ್ಕೆ 70ರೂ. ಇರೋವಾಗ, ಒಂದೆರಡು ಬಾರಿ ಸಂಚಾರಕ್ಕೆ ಅನುವಾಗುವ ಮೆಟ್ರೋದಲ್ಲಿ ಇಷ್ಟು ಹಣ ನೀಡಿ ಯಾಕೆ ಪ್ರಯಾಣಿಸಬೇಕು ಎಂಬುದು ಪ್ರಯಾಣಿಕರ ವಾದ.  ಇನ್ನು ಇಷ್ಟು ಮೊತ್ತ ವಸೂಲಿ ಮಾಡುತ್ತಿರುವುದು ಪ್ರಯಾಣಿಕರ ಬಳಿ ಹಗಲು ದರೋಡೆ ಎಂದು ಆರೋಪಿಸುತ್ತಿದ್ದಾರೆ. 

ಇದನ್ನು ಓದಿ: 'ಒಂದಂಕೆ ಕಾಡು' ಮೋಷನ್ ಪೋಸ್ಟರ್ ರಿಲೀಸ್!

ಇಲ್ಲಿವರೆಗೂ ಕೇವಲ 450 ಪಾಸ್ ಮಾತ್ರ ಮಾರಾಟ:
ನಮ್ಮ ಮೆಟ್ರೋದ ನಿತ್ಯದ ಪಾಸ್ ಹಾಗೂ ಮೂರು ದಿನದ ಪಾಸ್ ಬೆಲೆ  ದುಬಾರಿ ಇರುವ ಕಾರಣ ಪಾಸ್‌ಗಳ‌ನ್ನ ಕೊಳ್ಳುವ ಮನಸ್ಸು ಯಾರು ಮಾಡ್ತಿಲ್ಲ. ಕೇವಲ ಟೋಕನ್ ಹಾಗೂ ಸ್ಮಾರ್ಟ್ ಕಾರ್ಡ್‌ಗಳ‌ನ್ನ ಹೆಚ್ಚೆಚ್ಚು ಬಳಕೆ ಮಾಡುತ್ತಿದ್ದಾರೆ. ಈ ಮೂಲಕ ನಮ್ಮ ಮೆಟ್ರೋ ಜಾರಿಗೆ ತಂದಿರುವ ನಿತ್ಯದ ಪಾಸ್ ಹಾಗೂ ಮೂರು ದಿನದ ಪಾಸ್‌ಗಳ‌ನ್ನ ಕೇಳೋರೆ ಇಲ್ಲ ಎಂಬಂತಾಗಿದೆ̤ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News