ಹೊಸ ವರ್ಷದ ಸಂಭ್ರಮದಲ್ಲಿ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ ಜನ..!

ಬೆಂಗಳೂರಿನ ಇಂದಿರಾನಗರದಲ್ಲಿ ಹೊಸ ವರ್ಷದ ಸಂಭ್ರಮದಲ್ಲಿ ಸರ್ಕಾರದ ವಿಧಿಸಿರುವ ನಿರ್ಬಂಧಗಳನ್ನು ಜನರು ನಿರ್ಲಕ್ಷಿಸುತ್ತಿರುವ ದೃಶ್ಯಗಳು ಈಗ ಸಹಜ ಎನ್ನುವಂತಾಗಿವೆ.

Written by - Zee Kannada News Desk | Last Updated : Dec 31, 2021, 08:57 PM IST
  • ಬೆಂಗಳೂರಿನ ಇಂದಿರಾನಗರದಲ್ಲಿ ಹೊಸ ವರ್ಷದ ಸಂಭ್ರಮದಲ್ಲಿ ಸರ್ಕಾರದ ವಿಧಿಸಿರುವ ನಿರ್ಬಂಧಗಳನ್ನು ಜನರು ನಿರ್ಲಕ್ಷಿಸುತ್ತಿರುವ ದೃಶ್ಯಗಳು ಈಗ ಸಹಜ ಎನ್ನುವಂತಾಗಿವೆ.
ಹೊಸ ವರ್ಷದ ಸಂಭ್ರಮದಲ್ಲಿ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ ಜನ..! title=

ಬೆಂಗಳೂರು: ಬೆಂಗಳೂರಿನ ಇಂದಿರಾನಗರದಲ್ಲಿ ಹೊಸ ವರ್ಷದ ಸಂಭ್ರಮದಲ್ಲಿ ಸರ್ಕಾರದ ವಿಧಿಸಿರುವ ನಿರ್ಬಂಧಗಳನ್ನು ಜನರು ನಿರ್ಲಕ್ಷಿಸುತ್ತಿರುವ ದೃಶ್ಯಗಳು ಈಗ ಸಹಜ ಎನ್ನುವಂತಾಗಿವೆ.

ಇತ್ತ ಬಿಬಿಎಂಪಿ ಅಧಿಕಾರಿಗಳು ಕೂಡ ಜನಸಂದಣಿ ನಿಯಂತ್ರಣಕ್ಕೆ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ, ಇಂದಿರಾನಗರದ 100 ಅಡಿ ರಸ್ತೆಯ ಮುಂದೆ ಜನಸಂದಣಿ ತುಂಬಿ ತುಳುಕುತ್ತಿದೆ, ಇಲ್ಲಿ ಯಾರನ್ನೂ ಕೂಡ ಪರಿಶೀಲನೆ ಮಾಡುತ್ತಿಲ್ಲ, ಪೊಲೀಸರು ಕೂಡ ಇದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಇದನ್ನೂ ಓದಿ: Ind Vs SA: ದ. ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಶತಕ ಗಳಿಸಿದ್ದು ಹೇಗೆ? ರಹಸ್ಯ ಬಿಚ್ಚಿಟ್ಟ ಕೆಎಲ್ ರಾಹುಲ್   

ಇತ್ತ ಪಬ್ ಮಾಲಿಕರಂತು ಯಾವುದೇ ಚೆಕ್ಕಿಂಗ್ ಮಾಡದೇ ಭರ್ಜರಿ ವ್ಯಾಪಾರವನ್ನು ನಡೆಸುತ್ತಿದ್ದಾರೆ.ಸರ್ಕಾರದ ನಿಯಮಗಳ ಪ್ರಕಾರ ಶೇ 50 ರಷ್ಟು ಮೀತಿಯನ್ನು ವಿಧಿಸಿದೆ.ಜನಸಂದಣಿಯನ್ನು ನಿರ್ವಹಿಸುವ ಜವಾಬ್ದಾರಿ ಬಿಬಿಎಂಪಿಯದ್ದಾದರೆ, ಸಮಯದ ನಿರ್ವಹಣೆಯನ್ನು ಪೋಲಿಸ್ ಇಲಾಖೆ ಮಾಡಬೇಕು.ಆದರೆ ಜನ ಸಂದಣಿ ಹಾಗೂ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪಬ್ ಗಳ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ.

ಇದನ್ನೂ ಓದಿ: Pro Kabaddi PKL: ಹರಿಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಗೆ ಗೆಲುವು

ಮೊನ್ನೆ ನಡೆದ ಪೊಲೀಸ್ ಕಮೀಷನರ್ ಹಾಗೂ ಬಿಬಿಎಂಪಿ ಕಮೀಷನರ್ ಸಭೆಯಲ್ಲಿ ಇದೇ ರೀತಿ ನಿರ್ಧಾರ ಆಗಿತ್ತು ಆದರೆ  ಬಿಬಿಎಂಪಿ ಹಾಗೂ ಪೊಲೀಸ್ರಿಂದ ಯಾವುದೇ ಪರೀಶಿಲನೆ ಇಲ್ಲದೆ ಪಬ್ ಗಳಲ್ಲಿ ಬಿಂದಾಸ್ ಬ್ಯುಸಿನೆಸ್ ನಡೆಯುತ್ತಿರುವುದು ಕಂಡು ಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News