Karnataka COVID-19: ‘ಕೋವಿಡ್-19ಗೆ ಪರಿಹಾರ ಲಸಿಕೆಗಳೇ ಹೊರತು ಲಾಕ್‌ಡೌನ್ ಅಲ್ಲ’

ಲಸಿಕೆ ಕೊಡಲಾಗದ ಬಿಜೆಪಿ ಸರ್ಕಾರ ಮತ್ತೊಮ್ಮೆ ಲಾಕ್‌ಡೌನ್‌ಗೆ ಸಿದ್ಧಗೊಳ್ಳುತ್ತಿರುವಂತಿದೆ.

Written by - Zee Kannada News Desk | Last Updated : Aug 11, 2021, 12:35 PM IST
  • ಒಂದು ವಾರದ ಲಾಕ್‌ಡೌನ್‌ನಿಂದಾಗುವ ನಷ್ಟದ ಮೊತ್ತದಲ್ಲಿಯೇ ಸರ್ವರಿಗೂ ಲಸಿಕೆ ಕೊಡಬಹುದು!
  • ಅಧಿಕಾರಕ್ಕಾಗಿ ದೆಹಲಿಗೆ ಓಡುವ ಬಿಜೆಪಿ ನಾಯಕರು ಲಸಿಕೆಗೆ ಬೇಡಿಕೆ ಇಡಲು ಓಡುವುದಿಲ್ಲ ಏಕೆ?
  • ಲಸಿಕೆ ಕೊಡಲಾಗದ ತಮ್ಮ ವೈಫಲ್ಯಕ್ಕೆ ಜನರನ್ನು ಸಂಕಷ್ಟಕ್ಕೆ ದೂಡುವುದು ಎಷ್ಟು ಸರಿ ಅಂತಾ ಕಾಂಗ್ರೆಸ್ ಪ್ರಶ್ನಿಸಿದೆ
Karnataka COVID-19: ‘ಕೋವಿಡ್-19ಗೆ ಪರಿಹಾರ ಲಸಿಕೆಗಳೇ ಹೊರತು ಲಾಕ್‌ಡೌನ್ ಅಲ್ಲ’ title=
ಕೋವಿಡ್-19 ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಸಲಹೆ

ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗ(CoronaVirus)ಕ್ಕೆ ಪರಿಹಾರ ಲಸಿಕೆಗಳೇ ಹೊರತು ಲಾಕ್‌ಡೌನ್ ಅಲ್ಲವೆಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಕಾಂಗ್ರೆಸ್ ಸಲಹೆ ನೀಡಿದೆ. ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯಾದ್ಯಂತ ಮತ್ತೆ ಕಠಿಣ ನೈಟ್ ಕರ್ಫೂ ಜಾರಿ ಮಾಡಿರುವ ಸರ್ಕಾರದ ನಿರ್ಧಾರವನ್ನು ಟೀಕಿಸಿದೆ.  

ಕೋವಿಡ್-19ಗೆ ಪರಿಹಾರ ಲಸಿಕೆಗಳೇ ಹೊರತು ಲಾಕ್‌ಡೌನ್(LockDown) ಅಲ್ಲ. ಆದರೆ ಲಸಿಕೆ ಕೊಡಲಾಗದ ಬಿಜೆಪಿ ಸರ್ಕಾರ  ಮತ್ತೊಮ್ಮೆ ಲಾಕ್‌ಡೌನ್‌ಗೆ ಸಿದ್ಧಗೊಳ್ಳುತ್ತಿರುವಂತಿದೆ. ಒಂದು ವಾರದ ಲಾಕ್‌ಡೌನ್‌ನಿಂದಾಗುವ ನಷ್ಟದ ಮೊತ್ತದಲ್ಲಿಯೇ ಸರ್ವರಿಗೂ ಲಸಿಕೆ ಕೊಡಬಹುದು! ಲಸಿಕೆ ಕೊಡಲಾಗದ ತಮ್ಮ ವೈಫಲ್ಯಕ್ಕೆ ಜನರನ್ನು ಸಂಕಷ್ಟಕ್ಕೆ ದೂಡುವುದು ಎಷ್ಟು ಸರಿ?’ ಅಂತಾ ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: BIG NEWS: ನೂತನ ಸಚಿವರಿಗೆ ಖಾತೆ ಹಂಚಿಕೆ, ಯಾರ್ಯಾರಿಗೆ ಯಾವ ಖಾತೆ ಸಿಕ್ಕಿದೆ ಗೊತ್ತಾ..?

ಕೊರೊನಾ 3ನೇ ಅಲೆ(Corona 3rd Wave)ಯ ಆತಂಕ, ಲಸಿಕೆ ನೀಡುವಿಕೆಯಲ್ಲಿ ವೈಫಲ್ಯ. ಇದ್ಯಾವುದನ್ನೂ ಗಮನಿಸದ ಬಿಜೆಪಿ ಸರ್ಕಾರ ಖಾತೆ ಕಿತ್ತಾಟ, ಮೂಲ vs ವಲಸಿಗರ ರಂಪಾಟದಲ್ಲಿ ನಿರತವಾಗಿದೆ. ಕಳೆದ 2 ವರ್ಷವನ್ನೂ ಹೀಗೆಯೇ ಕಳೆಯಿತು, ಮುಂದೆಯೂ ಹೀಗೆಯೇ ಕಳೆಯಲಿದೆ. ಅಧಿಕಾರಕ್ಕಾಗಿ ದೆಹಲಿಗೆ ಓಡುವ ಬಿಜೆಪಿಗರು ಲಸಿಕೆಗೆ ಬೇಡಿಕೆ ಇಡಲು ಓಡುವುದಿಲ್ಲ ಏಕೆ?’ ಅಂತಾ ಬಿಜೆಪಿಗೆ ಕಾಂಗ್ರೆಸ್ ಪ್ರಶ್ನಿಸಿದೆ.

ಕೊರೊನಾ 3ನೇ ಅಲೆಯ ಭೀತಿ ಹಿನ್ನೆಲೆ ಮುಂಜಾಗ್ರತೆಗಾಗಿ ರಾಜ್ಯ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತ್ತು. ಆ.6ರಂದು ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai)ಯವರು  ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಬಗ್ಗೆ ಹೊಸ ಗೈಡ್‌ಲೈನ್ಸ್‌ ಪ್ರಕಟಿಸಿದ್ದರು. ಅದಂರಂತೆ ರಾತ್ರಿ 10ರ ಬದಲಿಗೆ 9 ಗಂಟೆಯಿಂದ ಮುಂಜಾನೆ 5ರವರೆಗೆ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಇರಲಿದ್ದು, ಆಗಸ್ಟ್ 16ರವರೆಗೂ ಹೊಸ ಮಾರ್ಗಸೂಚಿ ಅನ್ವಯ ಆಗಲಿದೆ ಅಂತಾ ಹೇಳಿದ್ದರು.

ಇದನ್ನೂ ಓದಿ: ED Raids : ಇಬ್ಬರು ಮಾಜಿ ಸಚಿವರ ಮನೆ ಮೇಲೆ ED ದಾಳಿ : 25 ಗಂಟೆಗಳ ನಂತರ ಮುಕ್ತಾಯ

ಮಹಾರಾಷ್ಟ್ರ, ಕೇರಳ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ(Weekend Curfew) ಇರಲಿದೆ. ಇದಲ್ಲದೆ ಅಗತ್ಯವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲಾಗಿದೆ. ಬೆಳಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ. ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಬದಲು ಪ್ರತಿದಿನ ನೈಟ್ ಕರ್ಫ್ಯೂ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಇರಲಿದೆ ಅಂತಾ ಸರ್ಕಾರದ ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
  

Trending News