ಕರೋನಾ ನಿಯಂತ್ರಣಕ್ಕೆ ಗಮನ ಕೊಡುವಂತೆ ಸಿಎಂಗೆ ಪ್ರಧಾನಿ ಸೂಚನೆ

ಕೆಲವು ರಾಜ್ಯಗಳಲ್ಲಿ ಕರೋನಾ  ಪ್ರಕರಣಗಳು ಹೆಚ್ಚಾಗಿರುವ ಹಿನೆಲೆಯಲ್ಲಿ ಪ್ರಧಾನ ಮಂತ್ರಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ  ವಿಡಿಯೋ ಕಾನ್ ಫೆರನ್ಸ್ ನಡೆಸಿದ್ದಾರೆ.

Written by - Ranjitha R K | Last Updated : Mar 17, 2021, 06:09 PM IST
  • ಕರೋನಾ ನಿಯಂತ್ರಣಕ್ಕೆ ಗಮನ ಹರಿಸುವಂತೆ ಪ್ರಧಾನಿ ಸೂಚನೆ
  • ಮೂರು ಜಿಲ್ಲೆಗಳತ್ತ ಹೆಚ್ಚು ಗಮನ ಹರಿಸುವಂತೆ ಪ್ರಧಾನಿ ಮೋದಿ ಸೂಚನೆ
  • ರಾಜ್ಯದಲ್ಲಿ ಲಾಕ್ ಡೌನ್ ಮತ್ತು ಕರ್ಫ್ಯೂ ಜಾರಿ ಇಲ್ಲ - ಸಿಎಂ
 ಕರೋನಾ ನಿಯಂತ್ರಣಕ್ಕೆ ಗಮನ ಕೊಡುವಂತೆ ಸಿಎಂಗೆ ಪ್ರಧಾನಿ  ಸೂಚನೆ title=
ಕರೋನಾ ನಿಯಂತ್ರಣಕ್ಕೆ ಗಮನ ಹರಿಸುವಂತೆ ಪ್ರಧಾನಿ ಸೂಚನೆ (file photo)

ಬೆಂಗಳೂರು: ದೇಶದಲ್ಲಿ ಕೊರೋನಾ(Coronavirus)  ಹೆಚ್ಚುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕಳವಳ  ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜ್ಯದ ಕುರಿತಂತೆ ಮಾತನಾಡಿರುವ ಮೋದಿ, ಬೆಂಗಳೂರು, ಕಲಬುರಗಿ ಮತ್ತು ಬೀದರ್ ನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ ಎಂದು  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.

ಕೆಲವು ರಾಜ್ಯಗಳಲ್ಲಿ ಕರೋನಾ  (Coronavirus) ಪ್ರಕರಣಗಳು ಹೆಚ್ಚಾಗಿರುವ ಹಿನೆಲೆಯಲ್ಲಿ ಪ್ರಧಾನ ಮಂತ್ರಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ  ವಿಡಿಯೋ ಕಾನ್ ಫೆರನ್ಸ್ ನಡೆಸಿದ್ದಾರೆ. ಇದಾದ ಬಳಿಕ ಮಾಧ್ಯಮವನ್ನು (Media) ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಲಾಕ್ ಡೌನ್ (Lockdown) ಮತ್ತು ಕರ್ಫ್ಯೂ ಜಾರಿ ಮಾಡುವುದಿಲ್ಲ  ಎಂದು ಸ್ಪಷ್ಟ ಪಡಿಸಿದ್ದಾರೆ.  ಬದಲಾಗಿ ಜನರು ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಕರೆ ನೀಡಿದ್ದಾರೆ.  

ಇದನ್ನೂ ಓದಿ : Ration Card: ಹೊಸ 'ರೇಶನ್​ ಕಾರ್ಡ್'​ ಪಡೆಯುವವರಿಗೆ ಇಲ್ಲಿದೆ ಗುಡ್​ ನ್ಯೂಸ್!

'ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ  ಗಡಿಯನ್ನು ಹೊಂದಿರುವ ಕಲಬುರಗಿ, ಬೀದರ್‌ ಮತ್ತು ಬೆಂಗಳೂರಿನಲ್ಲಿ (Bengaluru) ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೂರು ಜಿಲ್ಲೆಗಳತ್ತ ಹೆಚ್ಚು ಗಮನ ಹರಿಸುವಂತೆ  ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದು ಬಿಎಸ್ವೈ ತಿಳಿಸಿದ್ದಾರೆ.  

ಇದನ್ನೂ ಓದಿ : K Sudhakar: 'ರಾಜ್ಯದಲ್ಲಿ ಯಾವುದೇ ನೈಟ್ ಕರ್ಫ್ಯೂ-ಲಾಕ್‌ಡೌನ್ ಸದ್ಯಕ್ಕೆ ಇಲ್ಲ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News