ಎಸಿಬಿ ಕೆಲಸಕ್ಕೆ ನೋ ಸಾಥ್: ಭ್ರಷ್ಟ ಅಧಿಕಾರಿಗಳ ಬೆನ್ನಿಗೆ ನಿಲ್ತಾ ರಾಜ್ಯ ಸರ್ಕಾರ..!?

ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಎಸಿಬಿಯ ಮುಂದಿನ ತನಿಖೆಗೆ ಅನುಮತಿ ಕೊಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ.

Written by - VISHWANATH HARIHARA | Edited by - Puttaraj K Alur | Last Updated : Apr 1, 2022, 05:45 PM IST
  • ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭ್ರಷ್ಟರ ವಿರುದ್ಧ ಎಸಿಬಿ ಸಮರ ಸಾರಿದೆ
  • ಸಿಬ್ಬಂದಿ ಕೊರತೆ ಇದ್ರೂ ಎಸಿಬಿ ಟೀಂ ಸಖಾತ್ ಆಗಿ ಕೆಲಸ ಮಾಡುತ್ತಿದೆ
  • ಎಸಿಬಿ ಕಾರ್ಯಕ್ಕೆ ಸರ್ಕಾರ ಸಾಥ್ ನೀಡುತ್ತಿಲ್ಲವೆಂಬ ಅನುಮಾನ ಕಾಡುತ್ತಿದೆ
ಎಸಿಬಿ ಕೆಲಸಕ್ಕೆ ನೋ ಸಾಥ್: ಭ್ರಷ್ಟ ಅಧಿಕಾರಿಗಳ ಬೆನ್ನಿಗೆ ನಿಲ್ತಾ ರಾಜ್ಯ ಸರ್ಕಾರ..!? title=
ಭ್ರಷ್ಟರ ವಿರುದ್ಧ ಎಸಿಬಿ ಸಮರ ಸಾರಿದೆ

ಬೆಂಗಳೂರು: ರಾಜ್ಯಾದ್ಯಂತ ಭ್ರಷ್ಟರ ವಿರುದ್ಧ ಎಸಿಬಿ ಸಮರ(​ACB Raids) ಸಾರಿದೆ. ಸಿಬ್ಬಂದಿ ಕೊರತೆ ಇದ್ರೂ ಸಹ ಎಸಿಬಿ ಟೀಂ ಸಖಾತ್ತಾಗಿ ಕೆಲಸ ಮಾಡುತ್ತಿದೆ.. ಆದರೆ ಎಸಿಬಿ ಕಾರ್ಯಕ್ಕೆ ಸರ್ಕಾರ ಸಾಥ್ ನೀಡುತ್ತಿಲ್ಲವೆಂಬ ಅನುಮಾನ ಕಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಸರ್ಕಾರದ ವರ್ತನೆ ಕೂಡ ಇದೆ. ಸದ್ಯ ಬರೋಬ್ಬರಿ 128 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಇವರಿಗೆ ಸಂಬಂಧಪಟ್ಟವರ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ.

ಎಸಿಬಿ ದಾಳಿ ನಡೆಸಿದವರ ಪೈಕಿ ಬಿಡಿಎ(BDA Officials) ಮಾಜಿ ಆಯುಕ್ತ ಶ್ಯಾಮ್ ಭಟ್, ಕೆಎಎಸ್ ಅಧಿಕಾರಿಗಳು, ಎಸಿಯಾಗಿದ್ದ ಎಲ್.ಸಿ.ನಾಗರಾಜ್, ಇಂಜಿನಿಯರ್ ಗಳು, ಪಿಡಿಓ ಗಳು, ಪೊಲೀಸ್ ಇನ್ಸ್ ಪೆಕ್ಟರ್ ಗಳು ಸೇರಿದ್ದಾರೆ. ಆದರೆ ಇವರ ವಿರುದ್ಧ ಮುಂದಿನ ತನಿಖೆಗೆ ಸರ್ಕಾರ ಸಹಕಾರ ನೀಡುತ್ತಿಲ್ಲ. 128 ಮಂದಿ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಎಸಿಬಿ(ACB) ಪತ್ರ ಬರೆದಿದೆ. ಆದರೆ ಕೇವಲ 128ರಲ್ಲಿ 8 ಮಂದಿ ವಿರುದ್ಧದ ತನಿಖೆಗೆ ಮಾತ್ರ ಸರ್ಕಾರ ಸಾಥ್ ನೀಡುತ್ತಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿಯೂ ಬಿಜೆಪಿಗೇ ಮತ್ತೆ ಅಧಿಕಾರ: ಅರುಣ್ ಸಿಂಗ್

ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಎಸಿಬಿಯ ಮುಂದಿನ ತನಿಖೆಗೆ ಅನುಮತಿ ಕೊಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಸರ್ಕಾರದ ಈ ನಡೆಯಿಂದ ಎಸಿಬಿ(Anti-Corruption Bureau) ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ತೊಡಕಾಗುತ್ತಿದೆ. ಒಂದು ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿ ಆರೋಪಿತನಾದರೆ ಆ ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಸರ್ಕಾರಕ್ಕೆ ಕಳಿಸಲಾಗುತ್ತೆ. ಆ ಸರ್ಕಾರಿ ಅಧಿಕಾರಿ ಕಾರ್ಯನಿರ್ವಹಿಸುವ ಸಕ್ಷಮ ಪ್ರಾಧಿಕಾರ ಎಸಿಬಿ ನೀಡಿರುವ ವರದಿ ಆಧರಿಸಿ ಗುಪ್ತವಾಗಿ ಮತ್ತೊಂದು ಬಾರಿ ತನಿಖೆ ನಡೆಸುತ್ತದೆ.

ಎಸಿಬಿ ಕೊಟ್ಟ ದಾಖಲೆಗಳು ಹಾಗೂ ಸರ್ಕಾರದಲ್ಲಿನ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತೆ. ದಾಖಲೆಗಳು ಎರಡು ಹೊಂದಾಣೆಕೆಯಾದಾಗ ಸಕ್ಷಮ ಪ್ರಾಧಿಕಾರ ಎಸಿಬಿಗೆ ಮುಂದುವರುವಂತೆ ಅನುಮತಿ ನೀಡುತ್ತದೆ. ಈ ಎಲ್ಲಾ ಪ್ರೋಸೆಸ್ ನಡೆಸಲು ಸರ್ಕಾರದ ಅನುಮತಿ ಬೇಕು. ಆದರೆ 128 ಮಂದಿ(Karnataka Government Officials)ಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತಿರುವ 8 ಮಂದಿ ವಿರುದ್ಧ ಮಾತ್ರ ಪ್ರಾಸಿಕ್ಯೂಷನ್ ಗೆ ಅವಕಾಶ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ‘ದೇಶದಲ್ಲಿ ಈಗ ಕೋಮುದ್ವೇಷ ಹೆಚ್ಚುತ್ತಿದೆ, ಸಾಮರಸ್ಯ ಸಾರುವ ಅಗತ್ಯವಿದೆ’

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News