ಮೈಸೂರು: ಕೊರೊನಾ ಲಾಕ್‌ಡೌನ್ ಬಳಿಕ ಮೈಸೂರು ಜಿಲ್ಲೆಯ ಪ್ರಸಿದ್ಧ ನಂಜನಗೂಡಿನ ಶ್ರೀ ನಂಜುಂಡೇಶ್ವರ(Nanjundeshwara Temple Nanjungud)ನ ಸನ್ನಿಧಿಗೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಭಕ್ತರು ನಂಜುಂಡೇಶ್ವನಿಗೆ ಅರ್ಪಿಸುತ್ತಿರುವ ಕಾಣಿಕಾ ಮೊತ್ತದಲ್ಲಿಯೂ ಭಾರೀ ಏರಿಕೆ ಕಂಡಿದೆ. ಭಕ್ತರ ಕಾಣಿಕೆಯಿಂದ ನಂಜುಂಡೇಶ್ವರ ಸ್ವಾಮಿ ಮತ್ತೊಮ್ಮೆ ಕೋಟ್ಯಧಿಪತಿಯಾಗಿದ್ದಾನೆ.
ಹೌದು, ವೀಕೆಂಡ್ ಲಾಕ್‌ಡೌನ್(Weekend Lockdown) ಮಧ್ಯೆ ನಂಜನಗೂಡು ನಂಜುಂಡೇಶ್ವರನಿಗೆ ಭರ್ಜರಿ ಕಾಣಿಕೆ(Hundi Collection)ಸಂಗ್ರಹವಾಗಿದೆ. ಕೇವಲ ಒಂದೇ ಒಂದು ತಿಂಗಳಿನಲ್ಲಿ ಬರೋಬ್ಬರಿ 1 ಕೋಟಿ 29 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. ನಂಜನಗೂಡಿನ ತಹಶೀಲ್ದಾರ್ ಸಮ್ಮುಖದಲ್ಲಿ ನಂಜುಂಡೇಶ್ವರ ದೇವಾಲಯದ ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಕಾಣಿಕೆಯನ್ನು ಎಣಿಕೆ ಮಾಡಲಾಗಿದೆ.
ಇದನ್ನೂ ಓದಿ: ಡಿಕೆಶಿ ಮತ್ತು ಸಿದ್ದರಾಮಯ್ಯ ಪಂಜರದ ಗಿಣಿಗಳಾಗಿದ್ದಾರೆ: ನಳೀನ್ ಕುಮಾರ್ ಕಟೀಲ್
ನಂಜುಂಡೇಶ್ವರ ಸ್ವಾಮಿಯ ಹುಂಡಿಯಲ್ಲಿ 1,29,73,194 ರೂಪಾಯಿ, 50 ಗ್ರಾಂ ಚಿನ್ನ, 8 ಕೆಜಿ 200 ಗ್ರಾಂ ಬೆಳ್ಳಿ, 12 ವಿದೇಶಿ ಕರೆನ್ಸಿ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ. ನಂಜುಂಡೇಶ್ವರ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಸಿಬ್ಬಂದಿ ಹಾಗೂ ಕಾವೇರಿ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ವಿವಿಧ ಹುಂಡಿಗಳಲ್ಲಿ ಸಂಗ್ರಹ(Hundi Collection)ವಾಗಿದ್ದ ಕಾಣಿಕೆಗಳನ್ನು ಎಣಿಕೆ ಮಾಡಿದ್ದಾರೆ.
ಕೋವಿಡ್ ಲಾಕ್‌ಡೌನ್(Corona Lockdown) ಸಡಿಲಿಕೆಯ ಬಳಿಕ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಹೀಗೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ನಂಜುಂಡೇಶ್ವರ ಸ್ವಾಮಿಗೆ ಭಕ್ತಪೂರ್ವಕವಾಗಿ ಕಾಣಿಕೆ ಅರ್ಪಿಸುತ್ತಾರೆ. ಹೀಗಾಗಿ ಲಾಕ್ ಡೌನ್ ನಡುವೆಯೂ ಭಕ್ತರಿಂದ ಭಾರೀ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.
ಇದನ್ನೂ ಓದಿ: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ವರದಿ ಕಡ್ಡಾಯಗೊಳಿಸಿದ ಕರ್ನಾಟಕ
ಪ್ರತಿಬಾರಿಯೂ ದೇವಾಲಯದ ಹುಂಡಿ(Temple Hundi Collection)ಯಲ್ಲಿ ಸಂಗ್ರಹವಾದ ಹಣ ಏಣಿಕೆ ಮಾಡಿದಾಗ ಕೋಟಿ ರೂ. ದಾಟುತ್ತದೆ. ಅದರಂತೆ ಈ ಬಾರಿಯೂ ಕೇವಲ ಒಂದೇ ತಿಂಗಳಿನಲ್ಲಿ 1.30 ಕೋಟಿ ರೂ. ನಷ್ಟು ಕಾಣಿಕೆ ಸಂಗ್ರಹವಾಗಿದೆ ಎನ್ನಲಾಗಿದೆ. ದೇಶದಲ್ಲಿಯೇ ಪ್ರಖ್ಯಾತವಾಗಿರುವ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆಹೀಗಾಗಿ ರಾಜ್ಯ ಮಾತ್ರವಲ್ಲದೆ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಪ್ರತಿವರ್ಷ ಇಲ್ಲಿಗೆ ಭೇಟಿ ನೀಡುತ್ತಾರೆ. ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.