ಬೆಂಗಳೂರು ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ನಗರದ ನೇರಳೆ ಮೆಟ್ರೋ ಮಾರ್ಗ ಸಂಚಾರದಲ್ಲಿ ಶನಿವಾರದಂದು ರಾತ್ರಿ ವ್ಯತ್ಯಯವಾಗಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

Last Updated : Mar 25, 2022, 06:11 PM IST
  • ಭಾನುವಾರ ಬೆಳಗ್ಗೆ 7 ಗಂಟೆಯಿಂದ ಎಂದಿನಂತೆ ವೇಳಾಪಟ್ಟಿ ಪ್ರಕಾರ ಮೆಟ್ರೋ ಸಂಚಾರ ಪುನರಾರಂಭವಾಗಲಿದೆ.
ಬೆಂಗಳೂರು ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ  title=
file photo

ಬೆಂಗಳೂರು: ನಗರದ ನೇರಳೆ ಮೆಟ್ರೋ ಮಾರ್ಗ ಸಂಚಾರದಲ್ಲಿ ಶನಿವಾರದಂದು ರಾತ್ರಿ ವ್ಯತ್ಯಯವಾಗಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ರಾತ್ರಿ 9-30 ರಿಂದ ಸಿವಿಲ್ ನಿರ್ವಹಣೆ ಕಾಮಗಾರಿ ಇರುವುದರಿಂದ ಎಂಜಿ ರೋಡ್ ನಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗಿನ ವಾಣಿಜ್ಯ ಸೇವೆ ರಾತ್ರಿ 9-30 ಕ್ಕೆ ಸ್ಥಗಿತವಾಗಲಿದೆ.ಈ ಅವಧಿಯಲ್ಲಿ ಎಂಜಿ ರಸ್ತೆಯಿಂದ ಕೆಂಗೇರಿ ಮಾರ್ಗಕ್ಕೆ ಮಾತ್ರ ಮೆಟ್ರೋ ಸಂಚಾರ ಲಭ್ಯವಾಗಿರುತ್ತದೆ.

ಇದನ್ನೂ ಓದಿ:Seva Das: ಏಪ್ರಿಲ್ ಒಂದರಂದು ಬಂಜಾರ ಭಾಷೆಯ "ಸೇವಾ ದಾಸ್" ಸಿನಿಮಾ ರಿಲೀಸ್‌

ಕೆಂಗೇರಿಯಿಂದ ಬೈಯಪ್ಪನಹಳ್ಳಿ ಕಡೆಗೆ ಹೊರಡುವ ಕೊನೆಯ ರೈಲು 9 ಗಂಟೆಗೆ ಹೊರಡಲಿದ್ದರೆ, ಬೈಯಪ್ಪನಹಳ್ಳಿಯಿಂದ ಕೆಂಗೇರಿ ಕಡೆಗೆ ರಾತ್ರಿ 9.30ಕ್ಕೆ ಹೊರಡಲಿದೆ ಎಂದು ತಿಳಿದುಬಂದಿದೆ.

ಭಾನುವಾರ ಬೆಳಗ್ಗೆ 7 ಗಂಟೆಯಿಂದ ಎಂದಿನಂತೆ ವೇಳಾಪಟ್ಟಿ ಪ್ರಕಾರ ಮೆಟ್ರೋ ಸಂಚಾರ ಪುನರಾರಂಭವಾಗಲಿದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News