Suttur Jatra Mahotsav: ಇಂದಿನಿಂದ 6 ದಿನಗಳ ಕಾಲ ಅದ್ದೂರಿ ಸುತ್ತೂರು ಜಾತ್ರಾ ಮಹೋತ್ಸವ

Suttur Jathra Mahotsava 2023: ಕಪಿಲಾ ನದಿ ತೀರದಲ್ಲಿರುವ ಸುಕ್ಷೇತ್ರದಲ್ಲಿ ಕೊರೊನಾ ಕಾರಣದಿಂದ ಕಳೆದ 2 ವರ್ಷ ಸರಳವಾಗಿ ಜಾತ್ರಾ ಮಹೋತ್ಸವ ಆಚರಿಸಲಾಗಿತ್ತು. ಈ ಬಾರಿ ಅದ್ದೂರಿಯಾಗಿ ಜಾತ್ರೆ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

Written by - Puttaraj K Alur | Last Updated : Jan 18, 2023, 07:21 AM IST
  • ಇಂದಿನಿಂದ 6 ದಿನಗಳ ಕಾಲ ನಡೆಯಲಿರುವ ಇತಿಹಾಸ ಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವ
  • ಕೊರೊನಾ ಕಾರಣ ಕಳೆದ 2 ವರ್ಷಗಳಿಂದ ಸರಳವಾಗಿ ಜಾತ್ರೆ ಆಯೋಜಿಸಲಾಗಿತ್ತು
  • ಸಾಮೂಹಿಕ ವಿವಾಹ, ವಸ್ತು ಪ್ರದರ್ಶನ, ವಿಚಾರ ಸಂಕಿರಣ ಸೇರಿ ಹಲವು ಕಾರ್ಯಕ್ರಮ ನಡೆಯಲಿವೆ
Suttur Jatra Mahotsav: ಇಂದಿನಿಂದ 6 ದಿನಗಳ ಕಾಲ ಅದ್ದೂರಿ ಸುತ್ತೂರು ಜಾತ್ರಾ ಮಹೋತ್ಸವ  title=
ಸುತ್ತೂರು ಜಾತ್ರಾ ಮಹೋತ್ಸವ ಸಂಭ್ರಮ!

ಮೈಸೂರು: ಕರ್ನಾಟಕದ ಪ್ರಸಿದ್ಧ ಆದ್ಯಾತ್ಮಿಕ ಕೇಂದ್ರ, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಜಾತ್ರಾ ಮಹೋತ್ಸವ ಇಂದಿನಿಂದ 6 ದಿನಗಳ ಕಾಲ ನಡೆಯಲಿದೆ. ಕಪಿಲಾ ನದಿ ತೀರದಲ್ಲಿರುವ ಸುಕ್ಷೇತ್ರದಲ್ಲಿ ಕೊರೊನಾ ಕಾರಣದಿಂದ ಕಳೆದ 2 ವರ್ಷ ಸರಳವಾಗಿ ಜಾತ್ರಾ ಮಹೋತ್ಸವ ಆಚರಿಸಲಾಗಿತ್ತು. ಈ ಬಾರಿ ಅದ್ದೂರಿಯಾಗಿ ಜಾತ್ರೆ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಧಾರ್ಮಿಕ ಕರ್ಯಕ್ರಮ, ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಜಾತ್ರಾ ಅವಧಿಯಲ್ಲಿ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ ವಸ್ತು ಪ್ರದರ್ಶನ, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದ ವಿವರ ಹಂಚಿಕೊಂಡಿರುವ ಜಾತ್ರಾ ಸಮಿತಿ ಕಾರ್ಯದರ್ಶಿ ಎಸ್‌.ಪಿ.ಮಂಜುನಾಥ್, ‘ಜನವರಿ 19ರಂದು ಸಾಮೂಹಿಕ ವಿವಾಹವೂ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ವಿವಿಧ ಮಠಗಳ ಮಠಾಧೀಶರು ಸಹ ಜಾತ್ರಾ ಮಹೋತ್ಸವದ ಭಾಗವಾಗಲಿದ್ದಾರೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: "ಬಿಜೆಪಿಯವರು ಅಧಿಕಾರ ಇದ್ದಾಗ ಏನನ್ನೂ ಮಾಡದೆ, ಅಧಿಕಾರ ಹೋಗುವಾಗ ಮಾಡುತ್ತೇವೆ ಎನ್ನುತ್ತಿದ್ದಾರೆ"

ಸುತ್ತೂರು ರಥೋತ್ಸವವು ಜನವರಿ 20ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ನಂತರ ಗ್ರಾಮೀಣ ಕ್ರೀಡೆಗಳು, ದೇಶೀಯ ಆಟಗಳು ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಜ.22ರಂದು ಕುಸ್ತಿ ಸ್ಪರ್ಧೆ ನಡೆಯಲಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಲಿದ್ದಾರೆ. ಜ.21ರಂದು ಕೃಷಿ ಕುರಿತು ವಿಚಾರ ಸಂಕಿರಣ ಮತ್ತು ಸಮಾವೇಶಗಳು ನಡೆಯಲಿದ್ದು, ರಾಜ್ಯ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಹಿರಿಯ ಹಾಗೂ ಪ್ರಗತಿಪರ ರೈತರನ್ನು ಸನ್ಮಾನಿಸಲಾಗುವುದು.

ಜ.23 ರಂದು ಬೆಳಗ್ಗೆ 10.30ರಿಂದ ಕೃಷಿ ಮೇಳ ನಡೆಯಲಿದೆ, ಜೊತೆಗೆ ಕೃಷಿ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳನ್ನು ಪ್ರದರ್ಶಿಸುವ ವಸ್ತುಪ್ರದರ್ಶನವನ್ನು ಸಹ ಆಯೋಜಿಸಲಾಗಿದೆ. 6 ದಿನಗಳ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು  ಪಾಲ್ಗೊಳ್ಳಲಿದ್ದು, ಸಕಲ ಸಿದ್ಧತೆ ಮಾಡಲಾಗಿದೆ.

ಇದನ್ನೂ ಓದಿ: “ಅವನ ಕುಟುಂಬ ಒಂದು ವರ್ಷದಲ್ಲಿ ಸಾಯಲಿ..” ಹುಂಡಿಯಲ್ಲಿ ಸಿಕ್ಕಿತು ಬೆಚ್ಚಿ ಬೀಳುವ ಪತ್ರಗಳು..!

ಇಂದಿನ ಕಾರ್ಯಕ್ರಮಗಳ ವಿವರ

ಜ.18ರಂದು ಸುತ್ತೂರು ಜಾತ್ರೆಯಲ್ಲಿ ವಸ್ತುಪ್ರದರ್ಶನ, ಕೃಷಿ, ಸಿರಿಧಾನ್ಯ ಮತ್ತು ಸಾಂಸ್ಕೃತಿ ಮೇಳ, ಆರೋಗ್ಯ ತಪಾಸಣಾ ಶಿಬಿರ, ರಂಗೋಲಿ ಹಾಗೂ ಸೋಬಾನೆ ಪದ ಸ್ಪರ್ಧೆ, ದೋಣಿ ವಿಹಾರ ಮತ್ತು ಕೃತಿ ಬಿಡುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News