ಧಾರವಾಡ: ಧಾರವಾಡದ ಮಾಳಮಡ್ಡಿಯ ನಿವಾಸಿಯಾದ ಬಸವೇಶ ಕುಂಬಾರ ಇವರು ಎದುರುದಾರರ ಫೈನಾನ್ಸ್‍ನಲ್ಲಿ ರೂ.24,000 ಹಣವನ್ನು ತಮ್ಮ ಬಂಗಾರದ ಬಳೆ (7.3ಗ್ರಾಂ.) ಒತ್ತೆ, ಅಡು ಇಟ್ಟು ವೈಯಕ್ತಿಕ ಸಾಲವನ್ನು ಒಂದು ವರ್ಷದ ಅವಧಿಗೆ ಪಡೆದಿದ್ದರು. ಕೆಲವು ಕಾರಣಗಳಿಂದ ಆ ಹಣವನ್ನು ಪಾವತಿ ಮಾಡದೇ ಇರುವುದರಿಂದ ಎದುರುದಾರರು ಆ ಚಿನ್ನವನ್ನು ಹರಾಜಿಗೆ ಹಾಕುವುದಾಗಿ ದೂರುದಾರರಿಗೆ ಹರಾಜು ನೋಟಿಸುಗಳನ್ನು ಕಳಿಸಿದ್ದರು.
ದೂರುದಾರರು ಆ ಹರಾಜಿನ ದಿನ ಹಾಜರಿದ್ದರು ಒಂದಿಲ್ಲೊಂದು ನೆಪ ಹೇಳಿ ಹರಾಜಿನ ದಿನವನ್ನು ಎದುರುದಾರರು ಮೂಂದೂಡಿರುತ್ತಾರೆ. ಕೊನೆಗೆ ಎದುರುದಾರರು ಸದರಿ ಬಂಗಾರದ ಬಳೆಯನ್ನು ಹರಾಜಿಗೆ ಇಟ್ಟಿದ್ದು ಅಂದಿನ ಬಂಗಾರದ ಬೆಲೆಯ ಪ್ರಕಾರ ಅದರ ಹರಾಜಿನ ಮೊತ್ತ ರೂ.44,760 ಆಗಿರುತ್ತದೆ. ಎದುರುದಾರರ ಅಸಲು ಹಣದ ಜೊತೆಗೆ ಬಡ್ಡಿ ಸೇರಿಸಿದರೆ ಒಟ್ಟು ರೂ.38,940 ಆಗಿದ್ದು ಬಾಕಿ ಹಣ ರೂ.5,820 ತನಗೆ ಕೊಡಬೇಕೆಂದು ದೂರುದಾರರು ಸಾಕಷ್ಟು ಸಲ ಎದುರುದಾರರಿಗೆ ವಿನಂತಿಸಿದರೂ ಅವರು ಬಾಕಿ ಹಣವನ್ನು ದೂರುದಾರರಿಗೆ ನೀಡಿರುವುದಿಲ್ಲ. ಅಂತಹ ಎದುರುದಾರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ದಿ:05/02/2024ರಂದು ಎದುರುದಾರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಆಯೋಗಕ್ಕೆ ಈ ದೂರು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಪಿರ್ಯಾದಿಗೆ ಎದುರುದಾರರು ಹಾಜರಾಗಿ ತಮ್ಮ ಆಕ್ಷೇಪಣೆಯನ್ನು ಹಾಕಿರುವುದಿಲ್ಲ. ದೂರುದಾರರು ಕೊಟ್ಟಂತಹ ದಾಖಲೆಗಳನ್ನು ಪರಿಶೀಲಿಸಿದಾಗ ದೂರುದಾರರು ಎದುರುದಾರರ ಪೈನಾನ್ಸ್ ಕಂಪನಿಯಲ್ಲಿ ಬಂಗಾರದ ಬಳೆಗಳನ್ನು ಅಡವಿಟ್ಟು ಹಣ ಪಡೆದಿರುವುದು ಕಂಡು ಬಂದಿರುತ್ತದೆ. ಅಲ್ಲದೇ ಆ ಎದುರುದಾರರ ಹರಾಜಿನ ನೋಟಿಸಿಗೆ ದೂರುದಾರರು ಹೋಗಿರುವುದು ಮತ್ತು ದೂರುದಾರರು ಹಣ ಪಾವತಿಸದೇ ಅವರ ಬಳೆಗಳನ್ನು ಹರಾಜಿಗೆ ಹಚ್ಚಿರುವುದು ಮತ್ತು ಅದರ ಬೆಲೆ 44,760 ಆಗಿರುವುದು ದಾಖಲೆಗಳ ಮುಖಾಂತರ ಕಂಡುಬಂದಿರುತ್ತದೆ.
ದೂರುದಾರರು ದಾಖಲಿಸಿದ 1981 ರಿಂದ 2024 ರವರೆಗಿನ ಬಂಗಾರದ ಬೆಲೆಯ ಡಾಟಾವನ್ನು ಅವಲೋಕಿಸಿದಾಗ, ಹರಾಜಿನ ಸಮಯದಲ್ಲಿ ಬಂಗಾರದ ಮೊತ್ತ 10 ಗ್ರಾಂ. ಗೆ 65,330 ಬೆಲೆ ಇರುತ್ತದೆ. ಅದರಂತೆ ದೂರುದಾರರ ಬಂಗಾರದ ತೂಕ 7.3 ಗ್ರಾಂ ಇದ್ದು ಅದರ ಬೆಲೆ 44,760 ಆಗಿರುತ್ತದೆ. ಅಲ್ಲದೇ ದೂರುದಾರರು ಅಸಲು ಹಣ ಮತ್ತು ಬಡ್ಡಿ ಸೇರಿಸಿದರೆ ಒಟ್ಟು ರೂ.38,440 ಇದ್ದು ಬಾಕಿ ಹರಾಜಿನ ಹಣ ರೂ.5,820 ಎದುರುದಾರರ ಬಳಿಯೇ ಉಳಿದಿದ್ದು ಅದನ್ನು ದೂರುದಾರರಿಗೆ ಕೊಡದೇ ಸೇವಾ ನ್ಯೂನ್ಯತೆ ಎಸಗಿರುವುದು ಕಂಡುಬಂದು, ಎದುರುದಾರರು ವ್ಯತ್ಯಾಸ ಹಣ ರೂ.5,820 ಹಣವನ್ನು ದಿ:24/11/2023 ಶೇ10% ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಕೊಡಬೇಕು ಮತ್ತು ಅವರಿಗೆ ಆಗಿರುವ ಮಾನಸಿಕ ತೊಂದರೆ ಅನಾನುಕೂಲತೆಗೆ ರೂ.25,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ಕೊಡಲು ಆಯೋಗ ಮೂತ್ತೂಟ್ ಪೈನಾನ್ಸ್‍ಗೆ ಆಯೋಗ ನಿರ್ದೇಶಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.