ನನ್ನ ರಾಜಕೀಯ ಆರಂಭ, ಅಂತ್ಯ ಬಿಜೆಪಿಯಲ್ಲೇ: ಶಾಸಕ ಎಂ.ಪಿ.ಕುಮಾರಸ್ವಾಮಿ

MLA MP Kumaraswamy: ನನ್ನ ರಾಜಕೀಯ ಆರಂಭ, ಅಂತ್ಯ ಬಿಜೆಪಿಯಲ್ಲೇ  ಎಂದು ವಿಧಾನಸೌಧದಲ್ಲಿ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.

Edited by - Zee Kannada News Desk | Last Updated : Jan 4, 2022, 02:21 PM IST
  • ನನ್ನ ರಾಜಕೀಯ ಆರಂಭ, ಅಂತ್ಯ ಬಿಜೆಪಿಯಲ್ಲೇ
  • ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ
  • ನನ್ನನೂ ಮೂರು ಬಾರಿ ಗೆಲ್ಲಸಿದವರು ಬಿಜೆಪಿ ಅವರೇ
  • ನನ್ನನು ಬಿಜೆಪಿ ಪಕ್ಷ ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದೆ
  • ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ಪಷ್ಟನೆ
ನನ್ನ ರಾಜಕೀಯ ಆರಂಭ, ಅಂತ್ಯ ಬಿಜೆಪಿಯಲ್ಲೇ: ಶಾಸಕ ಎಂ.ಪಿ.ಕುಮಾರಸ್ವಾಮಿ  title=
ಎಂ ಪಿ ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿ ತೊರೆಯುವ ಬಗ್ಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ (MLA MP Kumaraswamy) ಸ್ಪಷ್ಟನೆ ನೀಡಿದ್ದು ನನ್ನ ರಾಜಕೀಯ ಆರಂಭ, ಅಂತ್ಯ ಬಿಜೆಪಿಯಲ್ಲೇ (BJP) ಎಂದು ವಿಧಾನಸೌಧದಲ್ಲಿ ಹೇಳಿದರು.

ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ನಮ್ಮ ಪಕ್ಷದವರೇ ಮಾಡುತ್ತಿದ್ದಾರೆ. ಮಾಧ್ಯಮಗಳಿಗೆ ಈ ರೀತಿ ಸುಳ್ಳು ಸುದ್ದಿ ಯಾರು ಹರಡಿಸುತ್ತಿದ್ದಾರೆ ಎಂದು ಗೊತ್ತು. ಕೈ ಮುಗಿದು ಕೇಳುತ್ತೇನೆ ನಾನು ಪಕ್ಷ ತೊರೆಯುವ ಬಗ್ಗೆ ಸುಳ್ಳು ಸುದ್ದಿ ಹರಡಿಸಬೇಡಿ ಎಂದು ಹೇಳಿದರು.

ನನ್ನನೂ ಮೂರು ಬಾರಿ ಗೆಲ್ಲಸಿದವರು ಬಿಜೆಪಿ ಅವರೇ, ನನ್ನನು ಬಿಜೆಪಿ ಪಕ್ಷ ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದೆ. ಮಂತ್ರಿ ಸ್ಥಾನ ಎಲ್ಲರಿಗೂ ಕೊಡಲು ಸಾಧ್ಯವಿಲ್ಲ. ಇದರ ಬಗ್ಗೆ ನನಗೆ ವಿಶ್ವಾಸವಿದೆ ಎಂದು ತಿಳಿಸಿದರು. 

ಪ್ರತಿ ನಿತ್ಯ ಮಾಧ್ಯಮದಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ ಎಂಬ ಸುದ್ದಿ ಪ್ರಸಾರ ಆಗುತ್ತಿದೆ. ನಾನು ಬಿಜೆಪಿ ಬಿಟ್ಟು ಇತರೆ ಪಕ್ಷಕ್ಕೆ ಸೇರುವ ಯಾವುದೇ ಪ್ರಶ್ನೆ ಇಲ್ಲ. ಇದು ಸುಳ್ಳು ಸುದ್ದಿ, ಇದರ ಹಿಂದೆ ಷಡ್ಯಂತ್ರ ಇದೆ. ಈ ರೀತಿ ಸುದ್ದಿ ಬಿತ್ತರಿಸಬೇಡಿ. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಹಾಗೂ ಶಾಸಕ ಎಂದು ಹೇಳಿದರು. 

ಕೆಲ ದಿನಗಳಿಂದ ಮೂಡಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ನಾಯಕರು ಇವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವ ಬಗ್ಗೆ ಸುದ್ದಿ ಕೇಳಿಬಂದಿದ್ದು, ಇದಕ್ಕೆ ಎಂ.ಪಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: #ಕಾಂಗ್ರೆಸ್‌ಗೂಂಡಾಗಿರಿ, "ಕಾಂಗ್ರೆಸ್‌ ಗೂಂಡಾಗಳನ್ನು ತಯಾರು ಮಾಡುವ ಫ್ಯಾಕ್ಟರಿ": ಬಿಜೆಪಿ ಟ್ವೀಟಾಸ್ತ್ರ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News